Miss firing | ನಾಡ ಬಂದೂಕಿನಿಂದ ಹಾರಿದ ಗುಂಡಿಗೆ ವ್ಯಕ್ತಿ ಬಲಿ

Murder

 

 

  • ಮದ್ದು ಗುಂಡುಗಳನ್ನು‌ ತೆಗೆದುಕೊಂಡು ತೋಟಕ್ಕೆ ತೆರಳಿದ್ದ ಅಂಬರೀಷ್
  • ಮಿಸ್ ಫೈರಿಂಗ್ ನಿಂದ ಎದೆಯ ಕೆಳ ಭಾಗಕ್ಕೆ ತಾಕಿದ ಗುಂಡು

ಸುದ್ದಿ ಕಣಜ.ಕಾಂ‌| DISTRICT | 27 AUG 2022
ಹೊಸನಗರ: ನಾಡ ಬಂದೂಕಿನಿಂದ ಮಿಸ್ ಫೈರಿಂಗ್ ಆಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ರಾವೆಯ ನೇಗಿಲೋಣಿಯಲ್ಲಿ‌ ಶುಕ್ರವಾರ ರಾತ್ರಿ ಸಂಭವಿಸಿದೆ.
ರಾವೆಯ ನೇಗಿಲೋಣಿಯ ವಾಸಿ ಅಂಬರೀಷ್ (30) ಮೃತಪಟ್ಟಿದ್ದಾರೆ. ಈತನು, ಪರವಾನಗಿ ಇಲ್ಲದ ನಾಡ ಬಂದೂಕು ಮತ್ತು ಬಂದೂಕಿಗೆ ತುಂಬುವ ಮದ್ದು-ಗುಂಡುಗಳನ್ನು ತೆಗೆದುಕೊಂಡು ತಮ್ಮ ತೋಟಕ್ಕೆ ಬರುವ ಕಾಡು ಪ್ರಾಣಿಗಳನ್ನು ಓಡಿಸಿ ಬರುವುದಾಗಿ ಮನೆಯಲ್ಲಿ ಹೇಳಿ ತನ್ನ ಸ್ನೇಹಿತ ಕೀರ್ತಿ ಜತೆ ತೋಟದ ಕಡೆಗೆ ಹೋಗಿದ್ದಾನೆ.

READ | ಶಿರಾಳಕೊಪ್ಪದಲ್ಲಿ ವ್ಯಕ್ತಿಯೊಬ್ಬರಿಗೆ ಚಾಕು‌ ಇರಿದು ಕೊಲೆ

ರಬ್ಬರ್ ಬೂಟು ತಾಕಿ ಮಿಸ್ ಫೈರಿಂಗ್
ತೋಟದ ಸುತ್ತ ತಿರುಗಾಡಿ ಅಲ್ಲಿಗೆ ಬಂದ ಕಾಡುಕೋಣಗಳನ್ನು ಓಡಿಸಿದ ನಂತರ ಕೀರ್ತಿಯು ತನ್ನ ಮನೆಗೆ ತೆರಳಿದ್ದು, ಅಭಿಷೇಕನು ಸಹ ಮನೆಗೆ ವಾಪಾಸ್‌ ಬರಲು ಹೊರಟಿದ್ದು, ಆ ಸಂದರ್ಭದಲ್ಲಿ ತನ್ನ ಕೈಲಿದ್ದ ಬಂದೂಕನ್ನು ನಿರ್ಲಕ್ಷತನದಿಂದ ಹಿಡಿದುಕೊಂಡಿದ್ದು, ರಾತ್ರಿ ವೇಳೆ ಬಂಡೆಯನ್ನು ಇಳಿಯುವಾಗ ಕಾಲು ಜಾರಿ ಬಂಡೆಯ ಮೇಲೆ ಬಿದ್ದಾಗ, ಬಂದೂಕಿನ ಕುದುರೆಗೆ ಕಾಲಿನ ರಬ್ಬರ್‌ ಬೂಟ್‌ ತಾಕಿ ನಾಡ ಬಂದೂಕಿನಲ್ಲಿದ್ದ ಮದ್ದು ಗುಂಡು ಸಿಡಿದು ಅಂಬರೀಷನ ಎದೆಯ ಕೆಳಭಾಗಕ್ಕೆ ಕೆಳಗಿನಿಂದ ಮೇಲ್ಭಾಗಕ್ಕೆ ಗುಂಡು ಹಾರಿದೆ.‌ ರಕ್ತ ಗಾಯದ ಪರಿಣಾಮವಾಗಿ ರಕ್ತ ಸ್ರಾವವಾಗಿ ಮೃತಪಟ್ಟಿರುತ್ತಾನೆ ಎಂದು ಮೃತನ ಸಹೋದರಿ ನೀಡಿದ ದೂರಿನ ಮೇರೆಗೆ ಐಪಿಸಿ ಕಲಂ 304(a), ಆರ್ಮ್ಸ್ ಆ್ಯಕ್ಟ್ (Arms Act) 3, 25, 27(2) ರೀತ್ಯಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಕೈಗೊಳ್ಳಲಾಗಿದೆ.

https://suddikanaja.com/2021/09/12/dogs-murder-in-bhadravathi-12-accused-arrested/

Leave a Reply

Your email address will not be published. Required fields are marked *

error: Content is protected !!