HIGHLIGHTS
- ಸೆಪ್ಟೆಂಬರ್ 23ರ ಸಂಜೆ 7ರಿಂದ ಸೆ.24ರ ಬೆಳಗ್ಗೆ 7 ಗಂಟೆಯವರೆಗೆ ಗೇಟ್ ಕ್ಲೋಸ್
- ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗದ ವ್ಯವಸ್ಥೆ ಕಲ್ಪಿಸಿ ಜಿಲ್ಲಾಧಿಕಾರಿ ಆದೇಶ
ಸುದ್ದಿ ಕಣಜ.ಕಾಂ| KARNATAKA | 22 SEP 2022
ಶಿವಮೊಗ್ಗ: ಶಿವಮೊಗ್ಗ -ಕುಂಸಿ ರಸ್ತೆಯಲ್ಲಿರುವ ರೈಲ್ವೆ ಲೆವಲ್ ಕ್ರಾಸ್ (Raiway level cross) ಗೇಟ್ ಎಲ್.ಸಿ ನಂ. 67ರಲ್ಲಿ ತಾಂತ್ರಿಕ ಪರಿಶೀಲನೆ ಮಾಡಬೇಕಾಗಿರುವುದರಿಂದ ಸೆಪ್ಟೆಂಬರ್ 23ರ ಸಂಜೆ 7 ಗಂಟೆಯಿಂದ ಸೆ.24ರ ಬೆಳಗ್ಗೆ 7 ಗಂಟೆಯವರೆಗೆ ಗೇಟ್ ಅನ್ನು ಮುಚ್ಚುವುದರಿಂದ ವಾಹನಗಳ ಸಂಚಾರಕ್ಕೆ ತಾತ್ಕಾಲಿಕವಾಗಿ ಪರ್ಯಾಯ ಮಾರ್ಗವನ್ನು ಕಲ್ಪಿಸಲಾಗಿದೆ.
READ | ಶಂಕಿತ ಉಗ್ರರ ಪ್ರಕರಣ, ಶಿವಮೊಗ್ಗದ 11 ಕಡೆಗಳಲ್ಲಿ ದಾಳಿ, ಮಹತ್ವದ ದಾಖಲೆ ವಶಕ್ಕೆ
ಪರ್ಯಾಯ ಮಾರ್ಗದ ವಿವರ
- ಸವಳಂಗದಿಂದ ಆಯನೂರಿಗೆ ಬರುವ ಲಘು ವಾಹನಗಳು ಸವಳಂಗ-ಮಲ್ಲಾಪುರ ರಾಮನಗರ-ಹಾರನಹಳ್ಳಿ ರೈಲ್ವೆ ಗೇಟ್ ಪಕ್ಕದ ರಸ್ತೆ – ಮುದುವಾಲ- ದೇವಬಾಳ- ತ್ಯಾಜುವಳ್ಳಿ- ಕೊನಗವಳ್ಳಿ- ಮೈಸವಳ್ಳಿ- ಹಾರನಹಳ್ಳಿ ಮಾರ್ಗವಾಗಿ ಸಂಚರಿಸಬಹುದಾಗಿರುತ್ತದೆ.
- ಆಯನೂರಿನಿಂದ ಹೋಗುವ ಲಘು ವಾಹನಗಳು ಆಯನೂರು- ಕಸಬಾ- ಹಾರನಹಳ್ಳಿ- ಮೃಸವಳ್ಳಿ- ಕೂನಗವಳ್ಳಿ- ತ್ಯಾಜವಳ್ಳಿ- ದೇವಬಾಳು- ಯಡವಾಲ- ಹಿಟ್ಟೂರು ಕ್ರಾಸ್ -ಮಲ್ಲಾಪುರ ಮುಖಾಂತರ ಸಂಚಾರಕ್ಕೆ ಅವಕಾಶ ಕಲ್ಪಿಸಬಹುದಾಗಿರುತ್ತದೆ.
- ಮೇಲ್ಕಂಡ ರಸ್ತೆಗಳು ಕಿರಿದಾಗಿರುವುದರಿಂದ ಭಾರಿ ವಾಹನಗಳನ್ನು ನಿಷೇಧಿಸಿ ಸದರಿ ವಾಹನಗಳನ್ನು ಅಯನೂರಿನಿಂದ ಎನ್ ಎಚ್-69 ರಸ್ತೆಯ ಮೂಲಕ ಶಿವಮೊಗ್ಗ ಹಾಗೂ ಸವಳಂಗದಿಂದ ಅಯನೂರಿಗೆ ಬರುವ ವಾಹನಗಳನ್ನು ಸವಳಂಗದಿಂದ ಶಿವಮೊಗ್ಗ ಮಾರ್ಗವಾಗಿ ಸಂಚರಿಸಬಹುದಾಗಿರುತ್ತದೆ. ಅದೇ ರೀತಿ ಕುಂಸಿಯಿಂದ ಸವಳಂಗ ಹೋಗುವ ಲಘು ವಾಹನಗಳನ್ನು ಕುಂಸಿ-ಬಾಳಕೊಪ್ಪ-ವಿಠಗೊಂಡನಕೊಪ್ಪ-ಹಾರನಹಳ್ಳಿ-ರಾಮನಗರ ಮೂಲಕ ಸವಳಂಗ ತಲುಪಬಹುದು.
https://suddikanaja.com/2022/09/21/husband-killed-his-wife-at-dummalli-village-shimoga/