Shimoga dasara | ಶಿವಮೊಗ್ಗದಲ್ಲಿ ಪುನೀತ್ ದಸರಾ ಚಲನಚಿತ್ರೋತ್ಸವ, ಎಲ್ಲೆಲ್ಲಿ ಯಾವ ಚಿತ್ರ ಪ್ರದರ್ಶನ, ಉದ್ಘಾಟನೆ ವೇಳೆ ತಾರೆಯರ ಮೆರಗು

Cinema dasara shivamogga

 

 

HIGHLIGHTS

  • ಸೆಪ್ಟೆಂಬರ್ 27ರಿಂದ ಅಕ್ಟೋಬರ್ 1ರ ವರೆಗೆ ನಗರದ ವಿವಿಧ ಚಿತ್ರಮಂದಿರಗಳಲ್ಲಿ ಚಲನಚಿತ್ರಗಳ ಪ್ರದರ್ಶನ
  • ಉದ್ಘಾಟನಾ ಕಾರ್ಯಕ್ರಮದಲ್ಲಿ ತಾರೆಯರ ಮೆರಗು, ಬಿ.ಎಸ್.ಲಿಂಗದೇವರಿಂದ ಉದ್ಘಾಟನೆ
  • ಚಲನಚಿತ್ರ ಕಲಾವಿದರಾದ ಅಜಯ್ ರಾವ್, ಮೇಘಶ್ರೀ, ಕಿರುತೆರೆ ಕಲಾವಿದೆ ಅಂಕಿತ ಅಮರ್ ಭಾಗಿ

ಸುದ್ದಿ ಕಣಜ.ಕಾಂ | DISTRICT | 25 SEP 2022
ಶಿವಮೊಗ್ಗ(shivamogga): ಮಹಾನಗರ ಪಾಲಿಕೆ (City corporation) ವತಿಯಿಂದ ಆಯೋಜಿಸಲಾಗಿರುವ ಶಿವಮೊಗ್ಗ ದಸರಾ (shimoga dasara) ಪ್ರಯುಕ್ತ ಪುನೀತ್ ರಾಜಕುಮಾರ್ (punit rajkumar) ಅವರ ಸ್ಮರಣೆಯಲ್ಲಿ ಸೆಪ್ಟೆಂಬರ್ 27ರಿಂದ ಅಕ್ಟೋಬರ್ 1ರ ವರೆಗೆ ನಗರದ ವಿವಿಧ ಚಿತ್ರಮಂದಿರಗಳಲ್ಲಿ ದಸರಾ ಚಲನಚಿತ್ರೋತ್ಸವ (dasara cinema fest) ಆಯೋಜಿಸಲಾಗಿದೆ.

READ | ಎರಡು ಗಂಡಾನೆಗಳ ಜೀವ ನುಂಗಿದ ಬೇಲಿ, ಪರಿಸರಾಸಕ್ತರು, ಅಧಿಕಾರಿಗಳು, ಗ್ರಾಮಸ್ಥರೇನು ಹೇಳುತ್ತಾರೆ?

ಉದ್ಘಾಟನೆಯಲ್ಲಿ ತಾರೆಯರ ಮೆರಗು
ದಸರಾ ಚಲನಚಿತ್ರೋತ್ಸವವನ್ನು ಸೆ.27ರ ಬೆಳಗ್ಗೆ 9 ಗಂಟೆಗೆ ಲಕ್ಷ್ಮಿ ಚಿತ್ರಮಂದಿರದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಬಿ.ಎಸ್. ಲಿಂಗದೇವರು (BS Lingadevaru) ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಚಲನಚಿತ್ರ ಕಲಾವಿದರಾದ ಅಜಯ್ ರಾವ್, ಮೇಘಶ್ರೀ, ಕಿರುತೆರೆ ಕಲಾವಿದೆ ಅಂಕಿತ ಅಮರ್ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮೇಯರ್ ಸುನೀತಾ ಅಣ್ಣಪ್ಪ, ಉಪ ಮೇಯರ್ ಶಂಕರ ಗನ್ನಿ, ಆಯಕ್ತರಾದ ಮಾಯಣ್ಣ ಗೌಡ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ.
ಯಾವ ದಿನ ಯಾವ ಚಿತ್ರ ಪ್ರದರ್ಶನ?
ಕಾರ್ಯಕ್ರಮ ಉದ್ಘಾಟನೆಯ ನಂತರ ಪುನೀತ್ ರಾಜಕುಮಾರ್ ನಾಯಕತ್ವದ ‘ರಾಜಕುಮಾರ’ ಚಿತ್ರ ಪ್ರದರ್ಶನ ಕಾಣಲಿದೆ.
28ರಂದು ಬೆಳಗ್ಗೆ 8.30ಕ್ಕೆ ಎಚ್‍ಪಿಸಿ ಚಿತ್ರಮಂದಿರದಲ್ಲಿ ಸುದೀಪ್ ನಾಯಕತ್ವದ ‘ಮಾಣಿಕ್ಯ’, 29ರಂದು ಬೆಳಗ್ಗೆ 8.30ಕ್ಕೆ ಮಂಜುನಾಥ ಚಿತ್ರಮಂದಿರದಲ್ಲಿ ಶಿವರಾಜ್ ಕುಮಾರ್ ನಾಯಕತ್ವದ ‘ಓಂ’, 30ರಂದು ಬೆಳಗ್ಗೆ 8.30ಕ್ಕೆ ವೀರಭದ್ರೇಶ್ವರದಲ್ಲಿ ರಕ್ಷಿತ್ ಶೆಟ್ಟಿ ನಾಯಕತ್ವದ ‘ಚಾರ್ಲಿ 777’, ಅ.1ರಂದು ಬೆಳಿಗ್ಗೆ 8.30ಕ್ಕೆ ಡಾಲಿ ಧನಂಜಯ ನಾಯಕತ್ವದ ‘ಬಡವ ರಾಸ್ಕಲ್’ ಪ್ರದರ್ಶನಗೊಳ್ಳಲಿದೆ.
ಸಾರ್ವಜನಿಕರಿಗೆ ಉಚಿತ ಪ್ರವೇಶವಿರುವ ಈ ಚಿತ್ರೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಚಲನಚಿತ್ರಗಳನ್ನು ವೀಕ್ಷಿಸಿ ಪ್ರೋತ್ಸಾಹಿಸಬೇಕಾಗಿ ಕೋರಲಾಗಿದೆ.

https://suddikanaja.com/2021/11/08/movie-shooting-in-shivamogga/

Leave a Reply

Your email address will not be published. Required fields are marked *

error: Content is protected !!