Sagar | ಗಣಪತಿ ವಿಸರ್ಜನೆಯಲ್ಲಿ ಮೈಜುಮ್ಮೆನ್ನುವ ಬೆಂಕಿಯಾಟ

fire game

 

 

HIGHLIGHTS 

  • ಅದ್ಧೂರಿಯಾಗಿ ನಡೆದ ಶ್ರೀನಗರದ ಗಣಪತಿ ವಿಸರ್ಜನೆ
  • ಮೈನವಿರೇಳುವಂತೆ ಮಾಡಿದ ಗಮನ ಸೆಳೆದ ಬೆಂಕಿಯಾಟ ಪ್ರದರ್ಶನ
  • ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಬೆಂಕಿಯಾಟ ಪ್ರದರ್ಶನ ಮಾಡಲು ಸಾಧ್ಯವಾಗಿರಲಿಲ್ಲ

ಸುದ್ದಿ ಕಣಜ.ಕಾಂ | TALUK | 10 SEP 2022
ಸಾಗರ: ನಗರದ ಎಂಟನೇ ವಾರ್ಡ್ ಶ್ರೀನಗರದಲ್ಲಿ 46ನೇ ವರ್ಷದ ಗಣೇಶ ವಿಸರ್ಜನೆ ಗುರುವಾರ ಅದ್ಧೂರಿಯಾಗಿ ನಡೆಯಿತು.
ಕಳೆದ ಭಾನುವಾರ ಗಣಹೋಮ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡಾ ಚಟುವಟಿಕೆಯನ್ನು ಶ್ರೀನಗರ ಯುವಜನ ಸಂಘ ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿಕ ಸಮಿತಿಯವರು ನಡೆಸಿದರು.

ಸಾಗರದಲ್ಲಿ ಗಣಪತಿ ವಿಸರ್ಜನೆ ವೇಳೆ ಬೆಂಕಿಯಾಟದ ವಿಡಿಯೋ | VIDEO REPORT

READ | ಶಿವಮೊಗ್ಗಕ್ಕೆ ಇನ್ನೊಂದು ಹೊಸ ರೈಲು, ಯಾವಾಗಿಂದ ಸೇವೆ ಲಭ್ಯ? ವೇಳಾಪಟ್ಟಿ ಇಲ್ಲಿದೆ 

ಗಮನ ಸೆಳೆದ ಬೆಂಕಿಯಾಟ ಪ್ರದರ್ಶನ
ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ಬೆಂಕಿಯಾಟವನ್ನು ಕೊರೊನಾ ಸಾಂಕ್ರಾಮಿಕ ರೋಗ ಹಿನ್ನೆಲೆ ಕಳೆದ ಎರಡು ವರ್ಷಗಳಿಂದ ಪ್ರದರ್ಶಿಸಲು ಸಾಧ್ಯವಾಗಿರಲಿಲ್ಲ. ಆದರೆ, ಈ ಬಾರಿ ಅದ್ಧೂರಿಯಾಗಿ ಬೆಂಕಿಯಾಟ ಪ್ರದರ್ಶನವನ್ನು ಸಾರ್ವಜನಿಕರು ಕಣ್ತುಂಬಿಕೊಂಡರು.
ನಗರದ ಹೃದಯಭಾಗವಾದ ಸಾಗರ ಹೋಟೆಲ್ ಸರ್ಕಲ್ ಹಾಗೂ ಪೊಲೀಸ್ ಸ್ಟೇಷನ್ ಸರ್ಕಲ್’ನಲ್ಲಿ ಹಲವು ಜನ ಬೆಂಕಿಯಾಟ ಪ್ರದರ್ಶನವನ್ನು ವೀಕ್ಷಿಸಿದರು.
ಬೆಂಕಿಯಾಟ ಪ್ರದರ್ಶನದಲ್ಲಿ ಎಂ.ಜಿ.ಚಂದ್ರಕಾಂತ್, ಹರ್ಷ, ದಯಾನಂದ್, ದೀಪು, ಚೇತನ್, ಹೇಮಂತ್, ಮಂಜು, ದಿಗಂತ್, ಅಮಿತ್, ಮನೋಜ್, ಸೌರವ್, ಕಿರಣ್, ಗಂಗಾಧರ್, ಡ್ಯಾನಿ, ಇನ್ನಿತರರು ಉಪಸ್ಥಿತರಿದ್ದರು.

https://suddikanaja.com/2022/09/10/shivamogga-hindu-mahasabha-ganapathi/

Leave a Reply

Your email address will not be published. Required fields are marked *

error: Content is protected !!