Hindu Mahasabha Ganapathi | ಶಿವಮೊಗ್ಗದಲ್ಲಿ ಹಬ್ಬದ ವಾತಾವರಣ, ಖಾಕಿ ಕಾವಲಿನಲ್ಲಿ ಇಡೀ ನಗರ, ಈ ಸಲದ ವಿಶೇಷಗಳೇನು?

Hindu mahasabha 12

 

 

HIGHLIGHTS

  • ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆಗೆ ಶಿವಮೊಗ್ಗ ಸಿದ್ಧ
  • ಇಡೀ ನಗರದಲ್ಲಿ ಬಿಗಿ ಪೊಲೀಸ್ ಭದ್ರತೆ
  • ನಗರದೆಲ್ಲೆಡೆ ವೀರ ಸಾವರ್ಕರ್ ಚಿತ್ರಗಳ ಅಳವಡಿಕೆ

ಸುದ್ದಿ ಕಣಜ.ಕಾಂ | DISTRICT | 09 SEP 2022
ಶಿವಮೊಗ್ಗ: ಇಡೀ ನಗರದಲ್ಲಿ ಹಬ್ಬದ ವಾತಾವರಣವಿದೆ. ಇದಕ್ಕೆ ಕಾರಣ, ಹಿಂದೂ ಮಹಾಸಭಾ ಗಣಪತಿ (Hindu Mahasabha Ganapathi) ವಿಸರ್ಜನಾ ಪೂರ್ವ ಮೆರವಣಿಗೆ.
ಗೋಪಿ ವೃತ್ತದಲ್ಲಿ ಡಿಜೆ ವ್ಯವಸ್ಥೆ ಮಾಡಲಾಗಿದ್ದು, ಭಜರಂಗಿಯ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ರಾತ್ರೋರಾತ್ರಿ ನಗರದ ಚಹರೆಯೇ ಬದಲಾಗಿದ್ದು, ಕೇಸರಿ ಬಾವುಟ, ಬಂಟಿಂಗ್ಸ್’ಗಳಿಂದ ನಗರ ನಳನಳಿಸುತ್ತಿದೆ.

Veer savarkar
ವೀರ ಸಾವರ್ಕರ್ ಪ್ರತಿಷ್ಠಾಪನೆ

ಈ ಸಲದ ವಿಶೇಷತೆಗಳಿವು
ನೆಹರೂ ರಸ್ತೆಯುದ್ದಕ್ಕೂ ದೇಶಭಕ್ತರ ಚಿತ್ರಗಳನ್ನು ಹಾಕಲಾಗಿದೆ. ಗೋಪಿ ವೃತ್ತದಿಂದ ನೆಹರೂ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ದೊಡ್ಡ ಪ್ರವೇಶ ದ್ವಾರ ಮಾಡಲಾಗಿದೆ. ಅಲ್ಲಿ ವೀರ ಸಾವರ್ಕರ್ ಅವರ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಅದೇ ರೀತಿ, ಅಮೀರ್ ಅಹಮ್ಮದ್ ವೃತ್ತವನ್ನು ಕೇಸರಿಮಯಗೊಳಿಸಲಾಗಿದ್ದು, ಛತ್ರಪತಿ ಶಿವಾಜಿ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದು, ಶಿವಪ್ಪ ನಾಯಕ ವೃತ್ತವನ್ನು ಪುಷ್ಪಗಳಿಂದ ಅಲಂಕರಿಸಲಾಗಿದೆ.

Ameer ahmed
ಅಮೀರ್ ಅಹಮ್ಮದ್ ವೃತ್ತದಲ್ಲಿ ಛತ್ರಪತಿ ಶಿವಾಜಿ ಪ್ರತಿಮೆ

ಗಾಂಧಿ ಬಜಾರ್ ಪ್ರವೇಶದಲ್ಲಿಯೇ ಬೃಹತ್ ಪ್ರವೇಶ ದ್ವಾರವನ್ನು ನಿರ್ಮಿಸಿದ್ದು, ಅಲ್ಲಿ ಕುರುಕ್ಷೇತ್ರದ ಸನ್ನಿವೇಶ ಬಿಂಬಿಸುವ ರಥದ ಮೇಲೆ ಕುಳಿತಿರುವ ಶ್ರೀಕೃಷ್ಣ, ಅರ್ಜುನರ ಪ್ರತಿಮೆಗಳಿವೆ. ಅದರ ಕೆಳಗಡೆ ‘ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ’ ಎಂಬ ಶ್ಲೋಕವನ್ನು ಬರೆಯಲಾಗಿದೆ. ಅದರ ಕೆಳಗಡೆ ‘ಸಾವರ್ಕರ್ ಸಾಮ್ರಾಜ್ಯ’ ಎಂದು ಬರೆಯಲಾಗಿದೆ.

Hindu Mahasabha Ganapathi
ಅಲಂಕಾರಗೊಂಡ ಶಿವಮೊಗ್ಗ

https://suddikanaja.com/2022/09/07/high-police-security-bhadravatis-hindu-mahasabha-ganapati-procession/

Leave a Reply

Your email address will not be published. Required fields are marked *

error: Content is protected !!