Terror Link | ಶಂಕಿತ ಉಗ್ರರ ಬಂಧನ, ಇದುವರೆಗಿನ ಟಾಪ್ 7 ಬೆಳವಣಿಗೆಗಳೇನು, ಇಲ್ಲಿದೆ ಕಂಪ್ಲೀಟ್ ಮಾಹಿತಿ

terror 1

 

 

ಸುದ್ದಿ ಕಣಜ.ಕಾಂ | DISTRICT | 22 SEP 2022
ಶಿವಮೊಗ್ಗ: ಶಂಕಿತ ಉಗ್ರರ ಬಂಧನದ ಬೆನ್ನಲ್ಲೇ ಶಿವಮೊಗ್ಗ ಕಡೆಗೆ ಇಡೀ ರಾಷ್ಟ್ರ ದೃಷ್ಟಿನೆಟ್ಟಿದೆ. ಸೆಪ್ಟೆಂಬರ್ 19ರಂದು ಇಬ್ಬರನ್ನು ವಶಕ್ಕೆ ಪಡೆದ ಬಳಿಕ ತನಿಖೆಯೂ ಚುರುಕುಗೊಂಡಿದೆ.

READ | ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಎನ್.ಐ.ಎ ತಂಡ ದಾಳಿ, ಒಬ್ಬ ವಶಕ್ಕೆ

  1. ಆಗಸ್ಟ್ 15ರಂದು ಪ್ರೇಮ್ ಸಿಂಗ್ ಪ್ರಕರಣದ ಆರೋಪಿಯ ವಿಚಾರ ವೇಳೆ ಉಗ್ರರ ಕುರಿತು ಮಾಹಿತಿ ಲಭ್ಯ, ತಕ್ಷಣ ಕಾರ್ಯಪ್ರವೃತ್ತರಾದ ಶಿವಮೊಗ್ಗ ಪೊಲೀಸ್
  2. ಸೆಪ್ಟೆಂಬರ್ 19ರಂದು ಶಂಕಿತ ಉಗ್ರರು ಎನ್ನಲಾದ ಸಿದ್ದೇಶ್ವರ ನಗರದ ನಿವಾಸಿ ಸೈಯದ್ ಯಾಸೀನ್ ಅಲಿಯಾಸ್ ಬೈಲ್(21), ಮಂಗಳೂರಿನ ಮಾಜ್ ಮುನೀರ್ ಅಹಮ್ಮದ್(22) ಬಂಧನ.
  3. ನಿಷೇಧಿತ ಐಸಿಸ್ (ಇಸ್ಲಾಮಿಕ್ ಸ್ಟೇಟ್) ಜೊತೆಗೆ ನಂಟು ಹೊಂದಿರುವ ಶಂಕೆ ಹಿನ್ನೆಲೆ ಆರೋಪಿಗಳ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳ (ನಿರ್ಬಂಧ) ತಿದ್ದುಪಡಿ ಕಾಯ್ದೆ (ಯುಎಪಿಎ) ಅಡಿ ಪ್ರಕರಣ ದಾಖಲು
  4. ಶಂಕಿತ ಉಗ್ರರನ್ನು ಶಿವಮೊಗ್ಗದ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ ಪೊಲೀಸರು. ವಿಚಾರಣೆಗೋಸ್ಕರ ಸೆಪ್ಟೆಂಬರ್ 29ರ ವರೆಗೆ ಇಬ್ಬರೂ ಪೊಲೀಸ್ ಕಸ್ಟಡಿಗೆ
  5. ಶಿವಮೊಗ್ಗಕ್ಕೆ ವಿಧಿವಿಜ್ಞಾನ ಪ್ರಯೋಗಾಲಯ (ಎಫ್.ಎಸ್.ಎಲ್) ಅಧಿಕಾರಿಗಳ ಭೇಟಿ. ಮಹತ್ವದ ಸಾಕ್ಷ್ಯಗಳ ಸಂಗ್ರಹಣೆ. ಮಂಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಕೃತ್ಯ ಎಸಗಲು ಸಂಚು ರೂಪಿಡಿದ ಮತ್ತು ಚಟುವಟಿಕೆ ನಡೆಸುತ್ತಿದ್ದ ಒಟ್ಟು 11 ಸ್ಥಳಗಳ ಮೇಲೆ ದಾಳಿ
  6. ಪ್ರಯೋಗಾರ್ಥವಾಗಿ ಸ್ಫೋಟಕಗಳನ್ನು ಶಿವಮೊಗ್ಗದ ಹಲವೆಡೆ ಸ್ಫೋಟಿಸಿರುವ ಸ್ಫೋಟಕ ಮಾಹಿತಿ ಬೆನ್ನಲ್ಲೇ ಎಫ್.ಎಸ್.ಎಲ್ ತಂಡದಿಂದ ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು
  7. ಶಿವಮೊಗ್ಗ ಸೇರಿದಂತೆ ದೇಶದೆಲ್ಲೆಡೆ ಎನ್.ಐ.ಎ ಕಾರ್ಯಾಚರಣೆ

https://suddikanaja.com/2022/09/21/police-invistigation-in-shimoga/

Leave a Reply

Your email address will not be published. Required fields are marked *

error: Content is protected !!