Arecanut | ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್, “ಕ್ಯಾನ್ಸರ್’ಕಾರಕವಲ್ಲ” ವರದಿ ಬಗ್ಗೆ ಆರಗ ಜ್ಞಾನೇಂದ್ರ ಹೇಳಿದ್ದೇನು?

arecanut report

 

 

ಸುದ್ದಿ ಕಣಜ.ಕಾಂ | KARNATAKA | 15 OCT 2022
ಶಿವಮೊಗ್ಗ: ಅಡಿಕೆ ಬೆಳೆಗಾರ (arecanut growers)ರಿಗೆ ಅಡಿಕೆ ಕಾರ್ಯಪಡೆ (arecanut task force) ಶುಭ ಸುದ್ದಿ ನೀಡಿದೆ. ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ “ಅಡಿಕೆ ಕ್ಯಾನ್ಸರ್ ಕಾರಕವಲ್ಲ” ಎಂಬುವುದರ‌ ಬಗ್ಗೆ ಮಾತನಾಡಿದರು.

READ | ಕೊಳೆ, ಎಲೆಚುಕ್ಕೆ ರೋಗದ ಅಧ್ಯಯನಕ್ಕೆ ವಿಜ್ಞಾನಿಗಳ ತಂಡ ರಚನೆ

ಅಡಿಕೆ ಸೇವನೆಯಿಂದ ಕ್ಯಾನ್ಸರ್ ಬರುತ್ತದೆ ಎಂಬ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ, ಆರೋಗ್ಯವರ್ಧಕ ತೋಟಗಾರಿಕೆ ಉತ್ಪನ್ನ ಎಂದು ನ್ಯಾಯಾಲಯ ಮುಂದೆ ಸಮರ್ಥವಾಗಿ ಪ್ರತಿಪಾದನೆ ಮಾಡಬೇಕು ಎಂದು ನಿರ್ಧಾರ ತೆಗೆದುಕೊಂಡಿದೆ ಎಂದು ಮಾಹಿತಿ ನೀಡಿದರು.
ವರದಿ ಶೇ.90ರಷ್ಟು ಪೂರ್ಣ
ಬೆಂಗಳೂರಿನ ರಾಮಯ್ಯ ವಿಶ್ವವಿದ್ಯಾಲಯವು ತಜ್ಞರು ಸಂಶೋಧನೆ ನಡೆಸಿ ಸಾಬೀತುಪಡಿಸಿದ್ದಾರೆ. ಈ ವರದಿಯನ್ನು ನ್ಯಾಯಾಲಯದ ಮುಂದೆ ಮಂಡಿಸಲಾಗುವುದು. ಸಂಶೋಧನೆಯು ಶೇ.90ರಷ್ಟು ಪೂರ್ಣಗೊಂಡಿದ್ದು, ನವೆಂಬರ್ ನಲ್ಲಿ ಅಂತಿಮ ವರದಿ ಸಲ್ಲಿಸುವ ಬಗ್ಗೆ ಸಂಶೋಧಕರು ತಿಳಿಸಿದ್ದಾರೆ ಎಂದು ಅಡಿಕೆ‌ ಕಾರ್ಯಪಡೆ ಅಧ್ಯಕ್ಷ ಆರಗ ಜ್ಞಾನೇಂದ್ರ ತಿಳಿಸಿದರು.

https://suddikanaja.com/2022/10/14/karnataka-arecanut-task-force-meeting-at-bengaluru-amd-important-decision-taken-on-bhutan-arecanut-import/

Leave a Reply

Your email address will not be published. Required fields are marked *

error: Content is protected !!