ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರ ಉಪ ವಿಭಾಗ-1 ಘಟಕ-3ರ ನವುಲೆ ಶಾಖೆ ವ್ಯಾಪ್ತಿಯಲ್ಲಿ 11 ಕೆವಿ, ಎಲ್ಟಿ ಭೂಗತ ವಿದ್ಯುತ್ ಕೇಬಲ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದೆ. ಇದು ಚಾಲನೆ ಹಂತದಲ್ಲಿರುವುದರಿAದ ಈ ಪ್ರದೇಶಗಳಲ್ಲಿ ರಸ್ತೆ ಬದಿಯ ಭೂಮಿ ಅಗೆಯುವುದನ್ನು ಸುರಕ್ಷತಾ ದೃಷ್ಟಿಯಿಂದ ನಿಷೇಧಿಸಲಾಗಿದೆ.
ಒಂದುವೇಳೆ, ತುರ್ತು ಕೆಲಸಗಳಿದ್ದಲ್ಲಿ ನಗರ ಉಪ ವಿಭಾಗ 1ರ ಎಇಇ ಮೊಬೈಲ್ ಸಂಖ್ಯೆ 9448289448 ಅಥವಾ ಘಟಕ 3ರ ಎಇ ಮೊಬೈಲ್ ಸಂಖ್ಯೆ 9448289675 ಅವರನ್ನು ಸಂಪರ್ಕಿಸುವಂತೆ ಕೊರಲಾಗಿದೆ.
ಯಾವ ಪ್ರದೇಶ: ಸೂಡಾ ಡಿ ಬ್ಲಾಕ್, ಕುವೆಂಪುನಗರ ಡಬಲ್ ರಸ್ತೆ, ಸವಳಂಗ ಮುಖ್ಯರಸ್ತೆ, ನವುಲೆ, ಮಾರುತಿ ಬಡಾವಣೆ, ಎಲ್ಬಿಎಸ್ ನಗರ, ಅಶ್ವಥ್ ನಗರ, ಕೀರ್ತಿನಗರ, ದೇವಂಗಿ 1ನೇ ಹಂತದ ಬಡಾವಣೆ, ವೆಂಕಟಾಪುರ, ಶಿವಾಲಯ, ಬಸವೇಶ್ವರನಗರ, ಕೃಷಿನಗರ, ಡಾಲರ್ಸ್ ಕಾಲೊನಿ, ಪವನ ಶ್ರೀ ಬಡಾವಣೆ, ರಾಯಲ್ ಬಡಾವಣೆ, ಅನೂಪ್ ಪಾಟೀಲ್ ಬಡಾವಣೆ, ಪೆಬಲ್ಸ್ ಅಪಾರ್ಟ್ಮೆಂಟ್, ತ್ರಿಮೂರ್ತಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶ.