Job Junction | ರೈಲ್ವೆ ಸೇರಿ‌ ವಿವಿಧ ಇಲಾಖೆಯಲ್ಲಿ‌ ಬೃಹತ್ ಉದ್ಯೋಗ ಮೇಳ, ಯಾವ್ಯಾವ ದರ್ಜೆಗಳ‌ ನೇಮಕಾತಿ?

IMG 20220517 232257 102

 

 

ಸುದ್ದಿ ಕಣಜ.ಕಾಂ | NATIONAL | 23 OCT 2022
ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 22ರಂದು ಬೃಹತ್ ಉದ್ಯೋಗ ಮೇಳಕ್ಕೆ‌ ಚಾಲ‌ನೆ ನೀಡಿದ್ದು, 10 ಉದ್ಯೋಗಗಳ ಭರ್ತಿ ಗಾಗಿ ಮೇಳ‌ಚಾಲನೆ ನೀಡಲಾಗಿದೆ. ರೈಲ್ವೆ ಇಲಾಖೆಯಲ್ಲೂ‌ ಖಾಲಿ‌ ಇರುವ ಹುದ್ದೆಗಳ ನೇಮಕಾತಿ ನಡೆಯಲಿದೆ.
ಮೊದಲ ಹಂತದಲ್ಲಿ 75,000 ನೇಮಕಾತಿ
ಮೊದಲ ಹಂತದಲ್ಲಿ 75,000 ಹೊಸ ಅಭ್ಯರ್ಥಿಗಳ ನೇಮಕಾತಿ ನಡೆಯಲಿದೆ.‌ ನೈರುತ್ಯ ರೈಲ್ವೆ ವಲಯದಲ್ಲಿ ಮೊದಲನೇ ಹಂತದಲ್ಲಿ 200 ಉದ್ಯೋಗಾರ್ಥಿಗಳಿಗೆ ಹುಬ್ಬಳ್ಳಿಯಲ್ಲಿ ನೇಮಕಾತಿ ಪತ್ರಗಳನ್ನು ವಿತರಿಸಲಾಗುವುದು.

READ | ಪಾಕ್ ವಿರುದ್ಧ ಭಾರತ ಗೆಲುವು, ಶಿವಮೊಗ್ಗದಲ್ಲಿ ಪಟಾಕಿ ಸಿಡಿಸಿ ಸಂಭ್ರಮ

ಹೊಸದಾಗಿ ಸೇರ್ಪಡೆಯಾದ ಉದ್ಯೋಗಿಗಳಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಲಾಗುವುದು. ಆಯ್ಕೆ ಪಕ್ರಿಯೆಯನ್ನು ಸರಳೀಕರಿಸಲಾಗಿದ್ದು ಆಯ್ಕೆ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ತಂತ್ರಜ್ಞಾನ ಆಧಾರಿತ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಲಾಗಿದೆ.
ಎಲ್ಲೆಲ್ಲಿ‌ ಯಾವ್ಯಾವ ಹುದ್ದೆಗಳಿಗೆ ನೇಮಕಾತಿ?
ದೇಶಾದ್ಯಂತ ಆಯ್ಕೆಗೊಂಡ ಈ ಹೊಸ ಉದ್ಯೋಗಿಗಳು ಕೇಂದ್ರ ಸರ್ಕಾರದ 38 ಸಚಿವಾಲಯಗಳು/ ಇಲಾಖೆಗಳನ್ನು ಸೇರಲಿದ್ದಾರೆ. ಈ ಉದ್ಯೋಗಿಗಳು ವಿವಿಧ ದರ್ಜೆಗಳಲ್ಲಿ ಅಂದರೆ ಗ್ರೂಪ್ – ಎ, ಗ್ರೂಪ್ – ಬಿ (ಗೆಜೆಟೆಡ್) ಗ್ರೂಪ್ – ಬಿ (ನಾನ್ ಗೆಜೆಟೆಡ್) ಹಾಗೂ ಗ್ರೂಪ್ – ಸಿ ದರ್ಜೆಯ ಉದ್ಯೋಗಿಗಳಾಗಿ ಸೇರಲಿದ್ದಾರೆ. ಕೇಂದ್ರೀಯ ಸಶಸ್ತ್ರಪಡೆ ಸಿಬ್ಬಂದಿ ವರ್ಗ ಸಬ್ ಇನ್ಸ್ ಪೆಕ್ಟರ್, ಕಾನ್ ಸ್ಟೇಬಲ್ ಎಲ್ ಡಿ ಸಿ, ಸ್ಟೆನೋ, ಪಿಎ , ಇನ್ ಕಮ್ ಟ್ಯಾಕ್ಸ್ ಇನ್ಸ್ ಪೆಕ್ಟರ್ಸ್, ಎಂ ಟಿ ಎಸ್ ಇತ್ಯಾದಿ ಹುದ್ದೆಗಳಿಗೆ ಈ ನೇಮಕಾತಿಗಳನ್ನು ಮಾಡಲಾಗುವುದು.
ಈ ನೇಮಕಾತಿಗಳನ್ನು ಸಚಿವಾಲಯಗಳು ಹಾಗೂ ಇಲಾಖೆಗಳು ತಾವೇ ಸ್ವತಃ ಅಥವಾ ಯುಪಿಎಸ್ ಸಿ, ಎಸ್.ಎಸ್.ಸಿ, ನೇಮಕಾತಿ ಮಂಡಳಿಯಂತಹ ಏಜೆನ್ಸಿಗಳ ಮೂಲಕ ಮಾಡಲಾಗುತ್ತಿದೆ.

https://suddikanaja.com/2022/10/23/online-fraud-to-person-at-shivamogga/

Leave a Reply

Your email address will not be published. Required fields are marked *

error: Content is protected !!