Murder case | ವೆಂಕಟೇಶ ನಗರ ಕೊಲೆ ಪ್ರಕರಣಕ್ಕೆ ಟ್ವಿಸ್ಟ್, ವಿಚಾರಣೆ ವೇಳೆ‌ ತಿಳಿದುಬಂದ ವಿಚಾರಗಳಿವು

Jaya nagar police station

 

 

ಸುದ್ದಿ ಕಣಜ.ಕಾಂ | SHIMOGA CITY | 25 OCT 2022
ಶಿವಮೊಗ್ಗ(shimoga): ವೆಂಕಟೇಶ ನಗರ (venkatesh nagar)ದ ಅನಕೃ (ank road) ಮೊದಲನೇ ಕ್ರಾಸ್ ರಸ್ತೆಯಲ್ಲಿ ಚಾಕುವಿನಿಂದ ಚುಚ್ಚಿ (stab) ಕೊಲೆ (murder) ಮಾಡಿದ ಪ್ರಕರಣ ಸಂಬಂಧ ಪೊಲೀಸ್ ಇಲಾಖೆ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ.
ಗಾಂಧಿನಗರ (gandhi nagar) ನಿವಾಸಿ ವಿಜಯ್ (37) ಎಂಬಾತನ ಕೊಲೆಯಾಗಿದ್ದು, ಇದರ ಹಿಂದೆ ದರೋಡೆಯೇ ಕಾರಣ ಎಂಬ ವಿಚಾರ ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ.

READ | ಭರ್ಮಪ್ಪ ನಗರದಲ್ಲಿ ಯುವಕನ ಮೇಲೆ ಅಟ್ಯಾಕ್ ಮಾಡಿದ ಮೂವರ ಬಂಧನ, ಮೂವರದ್ದೂ ಕ್ರಿಮಿನಲ್ ಬ್ಯಾಗ್ರೌಂಡ್

ಸೋಮವಾರ ಬೆಳಗಿನ ಜಾವ ವಿಜಯ್ ಎಂಬಾತನ ಕೊಲೆ ಮಾಡಿದ್ದು, ಆರಂಭದಲ್ಲಿ ಸ್ನೇಹಿತರೇ ಕರೆದು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿತ್ತು. ಸಿಸಿ ಟಿವಿ ಫೂಟೇಜ್ ನಲ್ಲೂ ಪರಿಚಯಸ್ಥರಂತೆ ವ್ಯವಹರಿಸಿರುವ ಬಗ್ಗೆ ಪೊಲೀಸ್ ಮೂಲಗಳು ತಿಳಿಸಿದ್ದವು. ಪ್ರಕರಣ‌ದ ತನಿಖೆ ಆರಂಭಿಸಿದ್ದೇ ಸುಲಿಗೆ ಮಾಡುವ ಸಂದರ್ಭದಲ್ಲಿ ಕೊಲೆ ಮಾಡಲಾಗಿದೆ ಎಂಬ ವಿಚಾರ ಗೊತ್ತಾಗಿದೆ.
ಕೊಲೆ ಪ್ರಕರಣ ಸಂಬಂಧ ಮೂವರು ವಶಕ್ಕೆ
ಜಯನಗರದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂರು ಜನ ಆರೋಪಿತರನ್ನು ಪೊಲೀಸ್‌ ವಶಕ್ಕೆ ಪಡೆದು, ವಿಚಾರಣೆಗೊಳಪಡಿಸಿದ್ದು, ಆರೋಪಿತರು ಸುಲಿಗೆ ಮಾಡುವ ಸಂದರ್ಭದಲ್ಲಿ ಕೊಲೆ ಮಾಡಿರುವುದು ತಿಳಿದುಬಂದಿರುತ್ತದೆ. ಮೂರು ಜನರ ವಿರುದ್ಧ ಈ ಹಿಂದೆಯೂ ಸುಲಿಗೆ ಮತ್ತು ಡಕಾಯತಿ ಪ್ರಕರಣಗಳು ವರದಿಯಾಗಿದ್ದು, ವಿಚಾರಣೆಯು ಮುಗಿದ ನಂತರ ಸಂಪೂರ್ಣ ಮಾಹಿತಿಯನ್ನು ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೀಗೆಹಟ್ಟಿ ಹಾಗೂ ವೆಂಕಟೇಶ ನಗರದಲ್ಲಿನ ಘಟನೆಗೆ ಸಂಬಂಧವಿಲ್ಲ
ಜಯನಗರ (jayanagar) ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಕೊಲೆ ಪ್ರಕರಣ ಮತ್ತು ದೊಡ್ಡಪೇಟೆ (doddapete) ಪೊಲೀಸ್‌ ಠಾಣಾ ವ್ಯಾಪ್ತಿಯ ಭರ್ಮಪ್ಪ ನಗರ ಮತ್ತು ಸೀಗೆಹಟ್ಟಿಯಲ್ಲಿ ನಡೆದ ಘಟನೆಗಳು ಪ್ರತ್ಯೇಕ ಘಟನೆಗಳಾಗಿದ್ದು, ಇವೆರಡಕ್ಕೂ ಯಾವುದೇ ಸಂಬಂಧವಿರುವುದಿಲ್ಲ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

https://suddikanaja.com/2022/10/25/murder-at-shivamogga/

Leave a Reply

Your email address will not be published. Required fields are marked *

error: Content is protected !!