Ticket aspirant | ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಇಂಟರ್’ವ್ಯೂ! ಯಾವ ಕ್ಷೇತ್ರದಿಂದ ಎಷ್ಟು ಜನ ಭಾಗಿ?

Shivamogga taluk

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ‌ ಬೆನ್ನಲ್ಲೇ ಕಾಂಗ್ರೆಸ್’ನಲ್ಲಿ ಚುನಾವಣಾ ಚಟುವಟಿಕೆ ಗರಿಗೆದರಿದ್ದು, ಗುರುವಾರ ಪಕ್ಷದ ವರಿಷ್ಠರು ಟಿಕೆಟ್ ಆಕಾಂಕ್ಷಿಗಳ‌ಇಂಟರ್ ವ್ಯೂ ನಡೆಸಿದ್ದು ವಿಶೇಷವಾಗಿತ್ತು. ಆಕಾಂಕ್ಷಿಗಳಿಗೆ ಪ್ರಶ್ನೆಗಳನ್ನು ಕೇಳಲಾಯಿತು. ಇದರೊಂದಿಗೆ ಬಲಾಬಲ ಪ್ರದರ್ಶನಕ್ಕೂ ಜಿಲ್ಲಾ ಕಾಂಗ್ರೆಸ್ ಕಚೇರಿ ಸಾಕ್ಷಿಯಾಯಿತು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಟಿಕೆಟ್ ಆಕಾಂಕ್ಷಿಗಳ ಅಭಿಪ್ರಾಯ ಸಂಗ್ರಹಿಸಲಾಯಿತು. ಪ್ರತಿಕೂಲ ಅಂಶಗಳ ಪಟ್ಟಿ ಮಾಡಲಾಯಿತು. ಪಕ್ಷ ಸಂಘಟನೆ, ಭಿನ್ನಮತ, ಹಿಂದಿನ ಚುನಾವಣೆಗಳಲ್ಲಿನ ಲೋಪಗಳನ್ನು ಪಟ್ಟಿ ಮಾಡಲಾಯಿತು. ಅರ್ಜಿ‌ ಸಲ್ಲಿಸಿದವರು ಕಾರಣವೇನಾಗಿತ್ತು ಎನ್ನುವುದನ್ನು ಪರಿಶೀಲಿಸಲಾಯಿತು.

READ | ಶಾಲಾ‌ ಪ್ರವಾಸಕ್ಕೆ ಬಂದಿದ್ದ ಬಸ್ಸಿಗೆ ಡಿಕ್ಕಿ, ಮಕ್ಕಳು ಸೇರಿ ಹಲವರಿಗೆ ಗಾಯ

ಪ್ರಸನ್ನ ಕುಮಾರ್ ಪರ ಘೋಷಣೆ
ಮಾಜಿ‌ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಪರವಾಗಿ ನೂರಾರು ಬೆಂಬಲಿಗರು ಬೆಳಗ್ಗೆಯಿಂದಲೇ ಪ್ಲೇಕಾರ್ಡ್ ಪ್ರದರ್ಶಿಸಿ ರಾಜ್ಯ ನಾಯಕರ ಗಮನ ಸೆಳೆಯಲಾಯಿತು.
ಎಐಸಿಸಿ ವೀಕ್ಷಕರಾದ ಮಯೂರ್ ಜೆ. ಕುಮಾರ್, ಸೈಯದ್ ಅಹ್ಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ ದೃವನಾರಾಯಣ್, ಕೆಪಿಸಿಸಿ ಶಿವಮೊಗ್ಗ ಉಸ್ತುವಾರಿ ಎಚ್.ಎಂ. ರೇವಣ್ಣ, ಹಿರಿಯ ನಾಯಕರಾದ ಕಾಗೋಡು ತಿಮ್ಮಪ್ಪ ಅವರು ಆಗಮಿಸಿ ಶಿವಮೊಗ್ಗ ಜಿಲ್ಲಾ 7 ವಿಧಾನಸಭಾ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳ ಅಭಿಪ್ರಾಯ ಪಡೆದರು.
ಜಿಲ್ಲೆಯಲ್ಲಿ 45ಕ್ಕೂ ಹೆಚ್ಚು ಉಮೇದುವಾರರು ಕಾಂಗ್ರೆಸ್ ಪಕ್ಷದ ಟಿಕೆಟ್ ಗೆ ಅರ್ಜಿ ಸಲ್ಲಿಸಿದ್ದು, ಶಿವಮೊಗ್ಗ ನಗರ ಕ್ಷೇತ್ರದಿಂದ 9, ಗ್ರಾಮಾಂತರ ಕ್ಷೇತ್ರದಿಂದ 13, ಭದ್ರಾವತಿಯಿಂದ 1 ಸೇರಿ ಒಟ್ಟು 45 ಅರ್ಜಿಗಳು ಕೆಪಿಸಿಸಿಗೆ ಸಲ್ಲಿಕೆಯಾಗಿವೆ.
ಸಭೆಯಲ್ಲಿ  ಕೆಪಿಸಿಸಿ ಕಾರ್ಯದರ್ಶಿ ಪಿ.ಒ. ಶಿವಕುಮಾರ್, ಪ್ರಮುಖರಾದ ಕಿಮ್ಮನೆ ರತ್ನಾಕರ್, ಹೆಚ್.ಸಿ. ಯೋಗೀಶ್, ಎಸ್.ಕೆ. ಮರಿಯಪ್ಪ, ಎನ್. ರಮೇಶ್, ಕಲೀಂ ಪಾಷ, ನಿರ್ಮಲಾ, ಬಲ್ಕೀಶ್ ಬಾನು, ರಾಜನಂದಿನಿ, ಶ್ರೀನಿವಾಸ್ ಕರಿಯಣ್ಣ, ರವಿಕುಮಾರ್, ವೈ.ಎಚ್. ನಾಗರಾಜ್, ದೀಪಕ್ ಸಿಂಗ್ ಹಾಗೂ ಕಾಂಗ್ರೆಸ್ ಬ್ಲಾಕ್ ಪದಾಧಿಕಾರಿಗಳು ಮತ್ತಿತರರು ಇದ್ದರು.

https://suddikanaja.com/2022/12/24/karnataka-state-government-employee-association-president-cs-shadakshari-statement-on-protest-against-nps/

error: Content is protected !!