Goonda act | 23 ಕ್ರಿಮಿನಲ್‍ಗಳ ಗಡಿಪಾರಿಗೆ ಲಿಸ್ಟ್ ರೆಡಿ, ಶಿವಮೊಗ್ಗದಲ್ಲಿ ಶೀಘ್ರವೇ ಗೂಂಡಾ ಕಾಯ್ದೆ ಜಾರಿ

Goonda act

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ ವಿವಿಧ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡ 23 ಕ್ರಿಮಿನಲ್’ಗಳ ಗಡಿಪಾರಿಗೆ ಪಟ್ಟಿಸಿದ್ಧವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್  (GK Mithun kumar) ತಿಳಿಸಿದರು.

Mithun kumar SPಸಮಾಜದಲ್ಲಿ ಗೌರವದಿಂದ ಬದುಕುವುದಕ್ಕೆ ಸಾವಿರಾರು ದಾರಿಗಳಿವೆ. ಅದನ್ನು ಬಿಟ್ಟು ಕ್ಷುಲ್ಲಕ ಕಾರಣಗಳಿಂದ ಅಪರಾಧ ಜಗತ್ತಿಗೆ ಕಾಲಿಡುವುದು, ಉದ್ಯೋಗವಿಲ್ಲ, ಕುಟುಂಬದಿಂದ ದೂರವಿದ್ದೇವೆ ಇತ್ಯಾದಿ ನೆಪಗಳನ್ನು ಒಡ್ಡಿ ಅಪರಾಧ ಕೃತ್ಯ ಎಸಗಿದರೆ ಜೈಲು ಸೇರುವುದು ಗ್ಯಾರಂಟಿ.
| ಜಿ.ಕೆ.ಮಿಥುನ್ ಕುಮಾರ್, ಎಸ್‍ಪಿ

ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮಾಯಕರ ಮೇಲೆ ಹಲ್ಲೆ ನಡೆಸಿ ರಾಬರಿ ಮಾಡುವಂತಹ ಹಲವು ದುಷ್ಕರ್ಮಿಗಳ ಮೇಲೆ ಪೊಲೀಸ್ ಇಲಾಖೆ ಕಣ್ಣಿಟ್ಟಿದೆ. 23 ಜನರ ಗಡಿಪಾರು ಮಾಡಲು ಪಟ್ಟಿ ತಯಾರಿಸಿ ಜಿಲ್ಲಾಧಿಕಾರಿಗೆ ನೀಡಲಾಗಿದೆ. ಇದರಲ್ಲಿ ಈಗಾಗಲೇ ಮೂವರನ್ನು ಗಡಿಪಾರು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

READ | 10 ದಿನಗಳಲ್ಲಿ ಎರಡನೇ ಫೈರಿಂಗ್, ಕ್ರಿಮಿನಲ್‍ಗಳ ಚಳಿ ಬಿಡಿಸುತ್ತಿರುವ ಪೊಲೀಸ್ ಇಲಾಖೆ

ಶೀಘ್ರವೇ ಗೂಂಡಾ ಕಾಯ್ದೆ ಜಾರಿ
ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಕ್ರಿಮಿನಲ್’ಗಳನ್ನು ರಕ್ಷಿಸುವುದಿಲ್ಲ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಶೀಘ್ರವೇ ಗೂಂಡಾ ಕಾಯ್ದೆಯನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ನಾಲ್ವರಿಗೂ ಕ್ರಿಮಿನಲ್ ಬ್ಯಾಗ್ರೌಂಡ್
ಬಿ.ಎಚ್.ರಸ್ತೆಯಲ್ಲಿ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ನಾಲ್ವರು ಆರೋಪಿಗಳಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಅದರಲ್ಲಿ ಚೋರ್ ಅಸ್ಲಾಂ ಬಂಧನದ ಬೇಳೆ ಫೈರಿಂಗ್ ಮಾಡಲಾಗಿದೆ. ಅದರಲ್ಲಿ ಆತನ ಕಾಲಿಗೆ ಗುಂಡೇಟು ಬಿದ್ದಿದೆ. ಜೀವದ ಹಂಗು ತೊರೆದು ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಜೀವಕ್ಕೆ ಕುತ್ತಾಗುವ ಸಂದರ್ಭ ಬಂದಾಗ ಆತ್ಮರಕ್ಷಣೆ ಅನಿವಾರ್ಯ ಎಂದು ಮಿಥುನ್ ಕುಮಾರ್ ತಿಳಿಸಿದರು.

READ | ಅಡಿಕೆ ಸೇರಿ ಮಲೆನಾಡು ರೈತರ ಸಮಸ್ಯೆಗಳ ಅಧ್ಯಯನಕ್ಕೆ ರಾಜ್ಯಮಟ್ಟದ ಸಮಿತಿ ರಚನೆ, 15 ದಿನಗಳ ಡೆಡ್‍ಲೈನ್

ಈ ಪ್ರಕರಣದಲ್ಲಿ ಒಟ್ಟು ನಾಲ್ವರು ಆರೋಪಿಗಳನ್ನು ಗುರುತಿಸಲಾಗಿದೆ. ಶುಕ್ರವಾರ ರಾತ್ರಿ ಸಾಗರ ಟೌನ್ ನಿವಾಸಿ ಎ-2 ಆಸೀಫ್(26) ಎಂಬಾತನನ್ನು ಬಂಧಿಸಿ, ನ್ಯಾಯಾಂಗಕ್ಕೆ ಒಪ್ಪಿಸಲಾಗಿದೆ. ಶನಿವಾರ ಬೆಳಗ್ಗೆ ಚೋರ್ ಅಸ್ಲಾಂ ಎಂಬಾತನನ್ನು ಬಂಧಿಸಲಾಗಿದೆ. ಇದುವರೆಗೆ ಒಟ್ಟು ಮೂವರು ಆರೋಪಿಗಳು ಸಿಕ್ಕಿದ್ದು, ಇನ್ನೊಬ್ಬ ತಲೆಮರೆಸಿಕೊಂಡಿದ್ದಾನೆ. ಪ್ರಕರಣದಲ್ಲಿರುವ ಆರೋಪಿಗಳ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ. ಇವರ ಸಂಪೂರ್ಣ ಮಾಹಿತಿ ಪರಿಶೀಲಿಸಲಾಗುತ್ತಿದೆ. ಬೇಲ್ ಮೇಲೆ ಹೊರಬಂದು ಇಂತಹ ದುಷ್ಕೃತ್ಯಗಳನ್ನು ಮಾಡುತ್ತಿರುವುದರಿಂದ ಬೇಲ್ ರದ್ದುಪಡಿಸುವಂತೆ ಶಿಫಾರಸು ಮಾಡಲಾಗಿದೆ ಎಂದು ಹೇಳಿದರು.
ಹೆಚ್ಚುವರಿ ಎಸ್‍ಪಿ ವಿಕ್ರಮ್ ಅಮಾಟೆ, ಡಿವೈಎಸ್ಪಿ ಬಾಲರಾಜು ಉಪಸ್ಥಿತರಿದ್ದರು.

https://suddikanaja.com/2022/10/27/shimoga-police-interduced-mcctns-mobile-crime-and-criminal-tracking-network-system-to-identify-criminals/

error: Content is protected !!