Quarrel | ಮೊಟ್ಟೆ ಟ್ರೇಗಾಗಿ ನಡೀತು ಜಗಳ, ಮುಖ್ಯಶಿಕ್ಷಕನ ಮೇಲೆ ಹಲ್ಲೆ

Hosanagara map

 

 

ಸುದ್ದಿ ಕಣಜ.ಕಾಂ ಹೊಸನಗರ
HOSANAGAR: ತಾಲೂಕಿನ ರಿಪ್ಪನಪೇಟೆ(Rippanpete)ಯಲ್ಲಿ ಕೋಳಿ ಮೊಟ್ಟೆ ಟ್ರೇ(egg tray)ಗಾಗಿ ಅಂಗಡಿಯವ ಮತ್ತು ಸರ್ಕಾರಿ ಶಾಲೆ ಮುಖ್ಯ ಶಿಕ್ಷಕನ ನಡುವೆ ಜಗಳವಾಗಿದ್ದು, ಶಿಕ್ಷಕನ ಮೇಲೆ ಹಲ್ಲೆ ಮಾಡಲಾಗಿದೆ.
ಕಾರೇಮಟ್ಟಿಯ ಬಿ.ಎನ್.ಮಂಜುನಾಥ್ ಎಂಬುವವರ ಮೇಲೆ ಮೊಹಮ್ಮದ್ ಅಲಿ‌ ಹಲ್ಲೆ ಮಾಡಿದ್ದಾರೆ. ಸರ್ಕಾರಿ ಶಾಲೆ‌ ಮಕ್ಕಳಿಗೆ ನೀಡುವ ಮೊಟ್ಟೆಗಳು ಖಾಲಿಯಾಗಿದ್ದರಿಂದ ಮಂಜುನಾಥ್ ಅವರು ಎಸ್.ಡಿಎಂಸಿ ಅಧ್ಯಕ್ಷ ಅರವಿಂದ್, ಅತಿಥಿ ಶಿಕ್ಷಕ ಪ್ರಶಾಂತ್ ಅವರೊಂದಿಗೆ ಅಂಗಡಿಗೆ ಬಂದಿದ್ದಾರೆ.

READ | ಕರ್ತವ್ಯಲೋಪ ಎಸಗಿದ ಕಿರಿಯ ಎಂಜಿನಿಯರ್ ಅಮಾನತು

ಟ್ರೇ ವಿಚಾರದಲ್ಲಿ ತಗಾದೆ
ಟ್ರೇ ವಿಚಾರಕ್ಕೆ ಜಗಳವಾಗಿದ್ದು, ಅಂಗಡಿಯವನು ಅವಾಚ್ಯವಾಗಿ ಬೈಯ್ದಿದ್ದಾನೆ. ಟ್ರೇಗಳನ್ನು ₹40 ಒಂದರಂತೆ ಖರೀಸುವುದಾಗಿ ಹೇಳಿದ್ದಾನೆ. ಆದರೂ ನಿಂದಿಸಿದ್ದೂ ಪ್ರಶ್ನಿಸಿದ್ದಕ್ಕೆ ಕೆನ್ನೆ ಮತ್ತು ತಲೆಗೆ ಹಲ್ಲೆ‌ಮಾಡಿದ್ದಾರೆ.‌

error: Content is protected !!