ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲಾ ಸಶಸ್ತ್ರ ಮೀಸಲುಪಡೆ ಕವಾಯತು ಮೈದಾನದಲ್ಲಿ ನವೆಂಬರ್ 18ರಿಂದ 20ರವರೆಗೆ ನಡೆದ ಶಿವಮೊಗ್ಗ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟವು ಭಾನುವಾರ ಸಂಪನ್ನಗೊಂಡಿದೆ.
READ | ಭದ್ರಾವತಿ ರಸ್ತೆಯಲ್ಲಿ ಜೀವ ನುಂಗುವ ರಾಡ್ಸ್, ಎಚ್ಚರ ವಹಿಸದಿದ್ದರೆ ಕಾದಿದೆ ಆಪತ್ತು
ವಿವಿಧ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು ಸಂಭ್ರಮಪಟ್ಟರು. ವೈಯಕ್ತಿಕ ವಿಭಾಗ ಮತ್ತು ಗುಂಪು ಕ್ರೀಡೆಗಳಲ್ಲಿ ಭಾಗವಹಿಸಿದ ಸಿಬ್ಬಂದಿ ಗೆಲುವಿನ ನಗೆಬೀರಿದರು. ಕ್ರೀಡಾಕೂಟ ನಡೆಯುವಾಗ ಉಳಿದವರು ಹುರಿದುಂಬಿಸಿದ್ದು ವಿಶೇಷವಾಗಿತ್ತು. ಸದಾ ಒತ್ತಡದ ನಡುವೆ ಇರುವ ಪೊಲೀಸರು ಕಳೆದ ಮೂರು ದಿನಗಳಿಂದ ಕ್ರೀಡೆಗಳನ್ನಾಡಿದರು.
ಡಿಎಆರ್ ಸಮಗ್ರ ಪ್ರಶಸ್ತಿ
ಡಿಎಆರ್ ಶಿವಮೊಗ್ಗ ಘಟಕ ಸಮಗ್ರ ಪ್ರಶಸ್ತಿ ಪಡೆದಿದೆ. ವೈಯಕ್ತಿಕ ವಿಭಾಗದಲ್ಲಿ ಶಿವಮೊಗ್ಗ ಉಪ ವಿಭಾಗದ ಪೊಲೀಸ್ ಕಾನ್ಸ್ಟೆಬಲ್ ಎಚ್.ಎಸ್.ಶರತ್ ಚಂದ್ರ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಪಡೆದರು.
ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಆಮ್ಟೆ ಇತರರು ಉಪಸ್ಥಿತರಿದ್ದರು.