ಸುದ್ದಿ ಕಣಜ.ಕಾ ಶಿವಮೊಗ್ಗ
SHIVAMOGGA: ನಗರದ ಆಲ್ಕೋಳ ವೃತ್ತ(Alkola circle)ದ ಬಳಿ ಯುವಕನೊಬ್ಬನ ಮೇಲೆ ಬೀಯರ್ ಬಾಟಲಿಯಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.
READ | ಮನೆ ಬಾಡಿಗೆ ನೀಡುವ ಬಗ್ಗೆ ಶಿವಮೊಗ್ಗ ಪೊಲೀಸರಿಂದ ಮಹತ್ವದ ಸೂಚನೆ
ವಿನಾಯಕ ಎಂಬಾತನೇ ಗಾಯಗೊಂಡಾತ. ಆಲ್ಕೋಳ ವೃತ್ತ ಸಮೀಪದ ಬಾರ್ವೊಂದರಲ್ಲಿ ವಿನಾಯಕನ ತಂದೆಯೊಂದಿಗೆ ಇಬ್ಬರು ಯುವಕರು ಜಗಳವಾಡುತ್ತಿದ್ದಾಗ ಅದನ್ನು ಬಿಡಿಸಿ ಮನೆಗೆ ಕಳುಹಿಸಿದ್ದಾನೆ. ತದನಂತರ, ಪಕ್ಕದ ಬೇಕರಿ ಬಳಿ ನಿಂತುಕೊಂಡಿದ್ದಾನೆ.
ಬೀಯರ್ ಬಾಟಲಿಯಿಂದ ಹಲ್ಲೆ
ವಿನಾಯಕನು ಬೇಕರಿ ಬಳಿ ನಿಂತುಕೊಂಡಿದ್ದಾನೆ. ಆಗ 8-10 ಜನರು ಬಾಟಲಿಯಿಂದ ಹಲ್ಲೆ ಮಾಡಿದ್ದಾರೆ. ಈತನ ತಲೆಗೆ ಗಾಯಗಳಾಗಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.