Fire accident | ಶಿರಾಳಕೊಪ್ಪದಲ್ಲಿ ಬೆಂಕಿ ಅವಘಡ, ಸುಟ್ಟು ಕರಕಲಾದ ಪೀಠೋಪಕರಣ, ಭಾರಿ ಪ್ರಮಾಣದ ನಷ್ಟ

Shiralakoppa Fire accident

 

 

ಸುದ್ದಿ ಕಣಜ.ಕಾಂ ಶಿರಾಳಕೊಪ್ಪ
SHIRALAKOPPA: ಶಿಕಾರಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಅಂಗಡಿಯೊಂದಕ್ಕೆ ಬೆಂಕಿ ಬಿದ್ದ ಪರಿಣಾಮ ಪೀಠೋಪಕರಣ, ಬೀಟೆ ಸೈಜ್ ಸುಟ್ಟು ಕರಕಲಾಗಿವೆ.  ಬೆಂಕಿಯ ಕೆನ್ನಾಲಿಗೆಗೆ ಅಕ್ಕಪಕ್ಕದ ಮನೆಗಳ ಮೇಲಿನ ಸಿಂಟೆಕ್ಸ್‍ಗಳು ಕರಗಿಹೋಗಿವೆ. ಮೂರ್ನಾಲ್ಕು ಮನೆಗಳಿಗೆ ಹಾನಿಯಾಗಿದ್ದು, ಅದರಲ್ಲೊಂದು ಮನೆ ಬಿರುಕು ಬಿಟ್ಟಿದೆ ಎಂದು ತಿಳಿದುಬಂದಿದೆ.

READ | ಮಲವಗೊಪ್ಪದಲ್ಲಿ ಭೀಕರ ಅಪಘಾತ, ಒಬ್ಬ ಸ್ಥಳದಲ್ಲೇ ಸಾವು

ಶಿರಾಳಕೊಪ್ಪದ ಅಕ್ಕಿಪೇಟೆ ರಸ್ತೆಯ ಫರ್ನಿಚರ್ಸ್ ಅಂಗಡಿಯೊಂದರಲ್ಲಿ ರಾತ್ರಿ ಎರಡೂವರೆ ಸುಮಾರಿಗೆ ಘಟನೆ ಸಂಭವಿಸಿದೆ. ಬೆಂಕಿ ಹತ್ತುತ್ತಿದ್ದಂತೆಯೇ ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಪರಿಣಾಮ ಸಂಭಾವ್ಯ ಅನಾಹುತವನ್ನು ತಪ್ಪಿದಂತಾಗಿದೆ. ಅಂದಾಜು 8 ಲಕ್ಷ ರೂ. ಮೌಲ್ಯದ ನಷ್ಟವಾಗಿದೆ ಎಂದು ತಿಳಿದುಬಂದಿದೆ. ಅಗ್ನಿ ಅವಘಡಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ.

error: Content is protected !!