Police release video | ಶಿರಾಳಕೊಪ್ಪ ಗೋಡೆಬರಹ ಪ್ರಕರಣ, ಪೊಲೀಸರಿಂದ ಮಹತ್ವದ ವಿಡಿಯೋ ರಿಲೀಸ್

shiralakoppa

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಇತ್ತೀಚೆಗೆ ಭಾರಿ ಚರ್ಚೆ ಮತ್ತು ವಾದಗಳಿಗೆ ಒಳಗಾಗಿದ್ದ ಶಿರಾಳಕೊಪ್ಪದಲ್ಲಿನ ಗೋಡೆ ಬರಹ ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆಯು ಮಹತ್ವದ ವಿಡಿಯೋವೊಂದು ಬಿಡುಗಡೆ ಮಾಡಿದೆ. ಅದರಂತೆ, ಈ ಗೋಡೆಬರಹಗಳು ಹಳೆಯದ್ದು ಎನ್ನಲಾಗಿದೆ.

READ | ಶಿರಾಳಕೊಪ್ಪದಲ್ಲಿ ನಿಷೇಧಿತ ಸಂಘಟನೆಯ ಗೋಡೆಬರಹ, ಇಲ್ಲಿವರೆಗಿನ ಬೆಳವಣಿಗೆಗಳೇನು?

ವಿಡಿಯೋದಲ್ಲಿ ಏನಿದೆ?
ಪೊಲೀಸ್ ಇಲಾಖೆಯು ಈ ಹಿಂದೆ ನಡೆದ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆಯ ವಿಡಿಯೋವೊಂದನ್ನು ರಿಲೀಸ್ ಮಾಡಿದ್ದು, ಅದರಲ್ಲಿ ಕಂಬಗಳ ಮೇಲೆ ಈ ಮುಂಚೆಯೇ “ಜಾಯಿನ್ ಸಿಎಫ್.ಐ” ಎಂದು ಬರೆಯಲಾಗಿತ್ತು. ಹೀಗಾಗಿ, ಇವುಗಳು ಇತ್ತೀಚೆಗೆ ಬರೆದಿದ್ದಲ್ಲ ಎನ್ನುವುದು ಪೊಲೀಸರ ವಾದವಾಗಿದೆ. ವಿಡಿಯೋದಲ್ಲಿ ಕಂಬಗಳ ಮೇಲೆ ಕೆಂಪು ಮತ್ತು ನೀಲಿ ಬಣ್ಣದಲ್ಲಿ ವಿದ್ಯುತ್ ಕಂಬಗಳ ಮೇಲೆ ಬರಹಗಳನ್ನು ಬರೆಯಲಾಗಿದೆ.
ಏನಿದು ಪ್ರಕರಣ?
ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದ ಹಲವೆಡೆ ನಿಷೇಧಿತ ಸಂಘಟನೆಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಸಿ.ಎಫ್.ಐ)ಗೆ ಸೇರಿ ಎಂಬ ಗೋಡೆ ಬರಹಗಳು ಬರೆದಿದ್ದಾರೆ ಎಂಬ ವಿಡಿಯೋವೊಂದು ಭಾರಿ ವೈರಲ್ ಆಗಿತ್ತು. ಈ ಸಂಬಂಧ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಸುಮೊಟೊ ಪ್ರಕರಣವೂ ದಾಖಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಪರಿಶೀಲನೆ ವೇಳೆ ಗೋಡೆ ಬರಹಗಳು ಹಳೆಯದ್ದು ಎಂಬ ವಿಚಾರ ಈ ಹಿಂದೆ ಚಿತ್ರೀಕರಣಗೊಂಡಿದ್ದ ವಿಡಿಯೋಗಳಿಂದ ಮೇಲ್ನೋಟಕ್ಕೆ ಕಂಡುಬಂದಿದೆ.
ಎಲ್ಲೆಲ್ಲಿ ಗೋಡೆ ಬರಹಗಳು?
ಹಳೆಯ ಪೆಟ್ರೋಲ್ ಬಂಕ್ ಪಕ್ಕದ ಕಂಬ, ಭೋವಿ ಕಾಲೋನಿಗೆ ಹೋಗುವ ರಸ್ತೆಯಲ್ಲಿ ವಿದ್ಯುತ್ ಕಂಬ, ದೊಡ್ಡಬ್ಯಾಣದಕೇರಿಗೆ ಹೋಗುವ ಕ್ರಾಸ್ ಬಳಿಯ ಸಿಮೆಂಟ್ ಬೋರ್ಡ್, ವಿದ್ಯುತ್ ಕಂಬ, ಕೆಲವರ ಮನೆಯ ಗೋಡೆಗಳ ಮೇಲೆ ಸೇರಿದಂತೆ ಹಲವೆಡೆ `ಜಾಯಿನ್ ಸಿ.ಎಫ್.ಐ’ ಎಂದು ಬರೆಯಲಾಗಿದೆ. ನೀಲಿ ಮತ್ತು ಕೆಂಪು ಬಣ್ಣದ ಸ್ಪ್ರೇ ಪೇಂಟ್’ನಿಂದ ಬರೆದಿರುವುದು ಮತ್ತು ಸ್ಟಾರ್ ಚಿತ್ರ ಬಿಡಿಸಿರುವುದು ಕಂಡುಬಂದಿತ್ತು.

https://suddikanaja.com/2022/12/04/erss-112-police-personnel-rescued-a-driver-at-sagar/

error: Content is protected !!