KS Eshwarappa | ಸಿದ್ದರಾಮಯ್ಯ ಮನೆಯಲ್ಲಿ ಯಡಿಯೂರಪ್ಪನವರ ಫೋಟೊ ಇಟ್ಟು‌ ಪೂಜೆ ಮಾಡಬೇಕು, ಈಶ್ವರಪ್ಪ‌ ಹೀಗೆ ಹೇಳಿದ್ದ್ಯಾಕೆ?

KS Eshwarappa siddaramaih 1

 

 

ಸುದ್ದಿ‌ ಕಣಜ.ಕಾಂ ಶಿವಮೊಗ್ಗ
SHIVAMOGGA: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah ) ಅವರು ತಮ್ಮ ಮನೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರ ಚಿತ್ರವಿಟ್ಟು ಪೂಜೆ ಮಾಡಬೇಕು ಎಂದು ಶಾಸಕ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಹೇಳಿದರು.
ಮಾಧ್ಯಮದವರೊಂದಿಗೆ ಶನಿವಾರ ಮಾತನಾಡಿದ ಅವರು, ಯಡಿಯೂರಪ್ಪ ಅವರು ಬಿಜೆಪಿಯಿಂದ ಹೊರಬಂದು ಕೆಜಿಪಿ ಕಟ್ಟಿದ್ದರ ಪರಿಣಾಮ ಸಿದ್ದರಾಮಯ್ಯ ಸಿಎಂ ಆಗಲು ಸಾಧ್ಯವಾಯಿತೇ ವಿನಹ ಈ ಜನ್ಮದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಹೀಗಾಗಿ, ಯಡಿಯೂರಪ್ಪ ಅವರ ಫೋಟೋ ಮನೆಯಲ್ಲಿಟ್ಟು ಪೂಜೆ ಮಾಡಬೇಕು ಅಭಿಪ್ರಾಯಪಟ್ಟರು.

READ | ರೈಲು ಪ್ರಯಾಣಿಕರಿಗೆ ಶುಭ ಸುದ್ದಿ, ಶಿವಮೊಗ್ಗ- ಬೆಂಗಳೂರು ವಿಸ್ಟಾಡೋಮ್ ಏಸಿ ಬೋಗಿ ಸಂಚಾರ ಪುನರಾರಂಭ

ಬಸವಪ್ರಭು ಸ್ವಾಮೀಜಿಯೇ ಸಿಎಂ ಮಾಡಲಿ
ಸಿದ್ದರಾಮಯ್ಯ ಮತ್ತೇ ಸಿಎಂ ಆಗ್ಬೇಕು ಎಂದು ಬಸವಪ್ರಭು ಸ್ವಾಮೀಜಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, “ಬಸವಪ್ರಭು ಸ್ವಾಮೀಜಿಯೇ ಸಿದ್ಧರಾಮಯ್ಯ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಲಿ, ಬೇಡ ಎಂದವರು ಯಾರು?” ಪ್ರಶ್ನಿಸಿದರು.
ಯಾರು ಮುಖ್ಯಮಂತ್ರಿ ಆಗಬೇಕೆನ್ನುವುದನ್ನು ಜನರು ತೀರ್ಮಾನಿಸುತ್ತಾರೆ. ಅದನ್ನು ಯಾರೋ ನಿರ್ಧರಿಸಲಾಗದು. ರಾಜ್ಯದ ಜನರು ಸರ್ಕಾರ ಏನೇನು ಕೆಲಸಗಳನ್ನು ಮಾಡಿದೆ ಎನ್ನುವುದನ್ನು ಗಮನಿಸಿದ್ದಾರೆ. ಹೀಗಾಗಿ, ಜನ ನಮಗೆ ಬೆಂಬಲಿಸುತ್ತಾರೆ ಎಂದರು.

ಇನ್ನೂ ಬಿಜೆಪಿ ಒಡೆಯುವ ಪ್ರಶ್ನೆ ಇಲ್ಲ. ಏಕತೆಯಿಂದ ಇದ್ದೇವೆ. ಅಂದಿಗಿಂತ ಇಂದು ಬಿಜೆಪಿ ಸಂಘಟನಾತ್ಮಕವಾಗಿ ಸಾಕಷ್ಟು ಬೆಳೆದಿದೆ. ಮೋದಿ ಅವರ ನಾಯಕತ್ವದ ಜೊತೆಗೆ ಅಭಿವೃದ್ಧಿ ಕೆಲಸ, ಸಂಘಟನೆ ಸಹ ಇದೆ. ರಾಜ್ಯದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬರುತ್ತೆ ಎನ್ನುವ ವಿಶ್ವಾಸ ನನಗಿದೆ.
– ಕೆ.ಎಸ್.ಈಶ್ವರಪ್ಪ, ಶಾಸಕ

ನಮ್ಮಿಂದ ಶಾಂತಿ ಕಾಪಾಡಲು ಯತ್ನ
ನಾವು ಶಾಂತಿ ಕಾಪಾಡಬೇಕು ಎಂಬ ಪ್ರಯತ್ನ ಮಾಡುತ್ತಿದ್ದೇವೆ. ಆದರೆ, ಕಾಂಗ್ರೆಸ್ ಶಾಂತಿ ಕದಡುವ ಭಯೋತ್ಪಾದಕರಿಗೆ ಬೆಂಬಲ ಕೊಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಯಾವುದೇ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗದಂತೆ ಪಂಚಮಸಾಲಿ ಮತ್ತು ಒಕ್ಕಲಿಗರಿಗೆ ಮೀಸಲಾತಿ ನೀಡುವ ಪ್ರಯತ್ನ ನಡೆದಿದೆ. ಈ ಹಿನ್ನೆಲೆಯಲ್ಲಿಯೇ ಅವರಿಗೆ ಮೀಸಲಾತಿ ಕಲ್ಪಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈಗಿರುವ ಮೀಸಲಾತಿಗೆ ಇನ್ನೆಷ್ಟು ಪರ್ಸೆಂಟೇಜ್ ಸೇರಿಸಬೇಕು ಎಂದು ಚರ್ಚೆ ಆಗ್ತಿದೆ ಎಂದರು.

https://suddikanaja.com/2022/12/31/from-now-on-city-bus-will-not-stop-everywhere-notification-for-117-bus-stops-in-shimoga-city/

error: Content is protected !!