Power cut | ಡಿ.4 ಅರ್ಧ ಶಿವಮೊಗ್ಗದಲ್ಲಿ ಕರೆಂಟ್ ಇರಲ್ಲ, ಎಲ್ಲೆಲ್ಲಿ ಪವರ್ ಕಟ್?

IMG 20220521 162055 149

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ನಗರದಲ್ಲಿ ಡಿಸೆಂಬರ್ 4ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು‌ ಸಹಕರಿಸಬೇಕು ಎಂದು‌ ಮೆಸ್ಕಾಂ ಮನವಿ‌‌ ಮಾಡಿದೆ.

READ | ಜನಶತಾಬ್ದಿ ಸೇರಿ ಶಿವಮೊಗ್ಗದಿಂದ ಹೊರಡುವ ವಿವಿಧ ರೈಲುಗಳ ಸಂಚಾರ ಸಮಯದಲ್ಲಿ ಬದಲಾವಣೆ

ಎಲ್ಲೆಲ್ಲಿ ಪವರ್ ಕಟ್?

ನಗರ ಉಪ ವಿಭಾಗ 2ರ ವ್ಯಾಪ್ತಿಯಲ್ಲಿನ 110/11 ಕೆವಿ ಮಂಡ್ಲಿ ವಿ.ವಿ.ಕೇಂದ್ರದಲ್ಲಿ 110 ಕೆವಿಯ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಇರುವ ಕಾರಣ ಕೆಳಕಂಡ ಪ್ರದೇಶದಲ್ಲಿ ಡಿ.4 ರ ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಪಿಯರ್‍ಲೈಟ್, ಪೇಪರ್ ಪ್ಯಾಕೇಜ್, ಮಂಡ್ಲಿ ಕೈಗಾರಿಕಾ ಪ್ರದೇಶ, ಕೆ.ಆರ್.ವಾಟರ್ ಸಪ್ಲೈ, ಗೋಪಿಶೆಟ್ಟಿಕೊಪ್ಪ, ಜಿ.ಎಸ್.ಕ್ಯಾಸ್ಟಿಂಗ್ ಫ್ಯಾಕ್ಟರಿ, ಸಿದ್ದೇಶ್ವರ ಸರ್ಕಲ್, ತುಂಗಾನಗರ ಆಸ್ಪತ್ರೆ, ವೈಷ್ಣವಿ ಲೇಔಟ್, ಭವಾನಿ ಲೇಔಟ್, ಗದ್ದೇಮನೆ ಲೇಔಟ್, ಚಾಲುಕ್ಯನಗರ, ಕೆಹೆಚ್‍ಬಿ ಕಾಲೋನಿ, ಮೇಲಿನ ತುಂಗಾನಗರ, ಕೆಳಗಿನ ತುಂಗಾನಗರ, ಪದ್ಮ ಟಾಕೀಸ್, ಮಂಜುನಾಥ ಬಡಾವಣೆ, ಹಳೇ ಗೋದಪಿಶೆಟ್ಟಿಕೊಪ್ಪ, ಮಲ್ಲಿಕಾರ್ಜುನ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ಎನ್‍ಟಿ ರಸ್ತೆ, ಬಿಹೆಚ್ ರಸ್ತೆ, ಓಟಿ ರಸ್ತೆ, ಕೆಎಸ್‍ಆರ್‍ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣ, ಊರುಗಡೂರು, ಸುಳೇಬೈಲು ಸುತ್ತಮುತ್ತಲಿನ ಪ್ರದೇಶ, ದುರ್ಗಿಗುಡಿ ಸುತ್ತಮುತ್ತ, ಜೆ.ಸಿ ನಗರ, ಬಿಹೆಚ್ ರಸ್ತೆ, ಬುದ್ದ ನಗರ, ಅಮೀರ್ ಅಹ್ಮದ್ ಸರ್ಕಲ್, ಆರ್‍ಎಂಎಲ್ ನಗರ, ಭಾರತಿ ಕಾಲೋನಿ, ದುರ್ಗಿಗುಡಿ, ಸವಾರ್‍ಲೈನ್ ರಸ್ತೆ, ಪಂಚವಟಿ ಕಾಲೋನಿ, ಮಂಜುನಾಥ ಬಡಾವಣೆ, ಖಾಜಿ ನಗರ, ಟಿಪ್ಪುನಗರ, ಗಾರ್ಡನ್ ಏರಿಯಾ, ನೆಹರು ರಸ್ತೆ, ಮಿಳಘಟ್ಟ, ಆನಂದರಾವ್ ಬಡಾವಣೆ, ಹರಕೆರೆ, ನ್ಯೂಮಂಡ್ಲಿ, ಹಳೇ ಮಂಡ್ಲಿ, ಗಂಧರ್ವ ನಗರ, ಶಂಕರ ಕಣ್ಣಿನ ಆಸ್ಪತ್ರೆ, ನಾರಾಯಣ ಹೃದಯಾಲಯ, ಗಜಾನನ ಗ್ಯಾರೇಜ್, ಮಂಜುನಾಥ ರೈಸ್ ಮಿಲ್, ಸವಾಯಿ ಪಾಳ್ಯ, ಕುರುಬರ ಪಾಳ್ಯ, ಇಮಾಮ್ ಬಡಾ, ಟಿ.ಎಸ್‍ಆರ್ ರಸ್ತೆ, ರವಿವರ್ಮ ಬೀದಿ, ಮಾಕಮ್ಮನ ಕೇರಿ, ಆಜಾದ್ ನಗರ ಲಾಲ್ ಬಂದರ್ ಕೇರಿ, ಇಲಿಯಾಜ್ ನಗರ 1ನೇ ಕ್ರಾಸ್ ನಿಂದ 14 ನೇ ಕ್ರಾಸ್, 100 ಅಡಿ ರಸ್ತೆ, ಫಾರೂಕ್ಯ ಶಾದಿಮಹಲ್, ಇಲಿಯಾಜ್ ನಗರ, ಮಂಡಕ್ಕಿ ಭಟ್ಟಿ, ಟಿಪ್ಪುನಗರ, ಮಂಜುನಾಥ ಬಡಾವಣೆ, ಖಾಜಿ ನಗರ, 80 ಅಡಿ ರಸ್ತೆ, ಕಾಮತ್ ಲೇಔಟ್, ಅಣ್ಣಾನಗರ, ಮಲ್ಲಿಕಾರ್ಜುನ ಬಡಾವಣೆ, ಮಂಜುನಾಥ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ಎಫ್-05 ಗಾಜನೂರು ಗ್ರಾಮಾಂತರ ಪ್ರದೇಶ. ಎಫ್-08 ರಾಮಿನಕೊಪ್ಪ ಗ್ರಾಮಾಂತರ ಪ್ರದೇಶ. ಎಫ್-18 ಹೊಸಳ್ಳಿ, ಎಫ್-06 ಕಲ್ಲೂರು ಮಂಡ್ಲಿ ಗ್ರಾಮಾಂತರ ಪ್ರದೇಶ. ಎಫ್-17 ಐಹೊಳೆ, ಅಗಸವಳ್ಳಿ, ಕಲ್ಲೂರು, ಗೋವಿಂದಪುರ, ಅನುಪಿನಕಟ್ಟೆ, ಪುರದಾಳು, ರಾಮಿನಕೊಪ್ಪ, ಮೈಲಾರಪ್ಪನ ಕ್ಯಾಂಪ್ ಹಾಗೂ ಹನುಮಂತಾಪುರ, ಶರಾವತಿ ನಗರ, ಶಾರದ ಕಾಲೋನಿ, ಸುತ್ತಮುತ್ತಲಿನ ಐಪಿ ಲಿಮಿಟ್‍ನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

READ | 24 ಗಂಟೆಯೊಳಗೆ ಮೊಬೈಲ್ ಶಾಪ್’ಗೆ ಕನ್ನ ಹಾಕಿದ ಆರೋಪಿ ಅರೆಸ್ಟ್

ತುಹೊಸಳ್ಳಿ, ರಾಮೇನಕೊಪ್ಪ, ಕಲ್ಲೂರು, ಅಗಸವಳ್ಳಿ, ಮತ್ತೂರು, ಲಕ್ಷ್ಮೀಪುರ, ಹೊನ್ನಾಪುರ, ವೀರಾಪುರ, ಈಚಲವಾಡಿ, ಹಾಯ್‍ಹೊಳೆ, ಪುರದಾಳು, ಬೆಳ್ಳೂರು, ಬಸವಾಪುರ, ಭಾರತಿನಗರ, ಅನುಪಿನಕಟ್ಟೆ, ಗೋವಿಂದಾಪುರ, ಹನುಮಂತಾಪುರ, ಗಾಂಧಿನಗರ, ಖಾನೆಹಳ್ಳ, ಭೋವಿಕಾಲೋನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಕುಂಸಿ‌ ವ್ಯಾಪ್ತಿಯಲ್ಲಿ ವ್ಯತ್ಯಯ
ಕುಂಸಿ ಉಪವಿಭಾಗದ ಶ್ರೀರಾಂಪುರ ಶಾಖಾ ವ್ಯಾಪ್ತಿಯ ಶ್ರೀರಾಂಪುರ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಫ್ಲೈ ಓವರ್ ಕಾಮಗಾರಿ ಕೈಗೊಳ್ಳಬೇಕಾದ್ದರಿಂದ ಡಿ.4 ರ ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರಗೆ ಆಲ್ಕೋಳ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಫ್-1 ಶ್ರೀರಾಂಪುರ, ಎಫ್-2 ಪೆಸಿಟ್ ಕಾಲೇಜ್, 11 ಕೆವಿ ಮಾರ್ಗಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಾದ ಶ್ರೀರಾಂಪುರ, ಭೂಮಿಕಾ ಅಲಾಯ್ಸ್, ಪೆಸಿಟ್ ಕಾಲೇಜ್, ಕಿಮ್ಮನೆ ಗಾಲ್ಫ್ ಕ್ಲಬ್, ಆಲದೇವರಹೊಸೂರು, ಪೊಲೀಸ್ ಲೇಔಟ್, ಗುಡ್ಡದಹರಕೆರೆ, ಇಂದಿರಾ ಬಡಾವಣೆ, ಗಿರಿದೀಪಮ್ ಸ್ಕೂಲ್ ಹಾಗೂ ಇನ್ನಿತರ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

https://suddikanaja.com/2022/12/02/shivamogga-dc-imporant-meeting-on-kyasanur-forest-disease-kfd/

error: Content is protected !!