Water bill | ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಕಂದಾಯ ಪರಿಷ್ಕರಣೆ, ಗೃಹ ಬಳಕೆ, ಇನ್ನಿತರ ನಲ್ಲಿಗೆಷ್ಟು ದರ?

Water tap

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ನಗರವನ್ನು ನಗರಸಭೆಯಿಂದ ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲಾದ ಪ್ರಯುಕ್ತ ನೀರಿನ ದರವನ್ನು ಕರ್ನಾಟಕ ಸರ್ಕಾರದ ಆದೇಶ ಹಾಗೂ ಮಹಾನಗರ ಪಾಲಿಕೆಯ ನಿರ್ದೇಶನದಂತೆ ಪರಿಷ್ಕರಿಸಲಾಗಿದೆ‌ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

READ| ಡಿಕೆಶಿಯೇ ಏಕೆ? ಬಿಜೆಪಿಯವರ ಬಳಿ ಶಿಕ್ಷಣ ಸಂಸ್ಥೆಗಳಿಲ್ಲವೇ?

ಯಾವುದಕ್ಕೆ ಎಷ್ಟು ದರ?
ಪಾಲಿಕೆಗಳಿಗೆ ಅನ್ವಯಿಸುವ ದರದಂತೆ ಮೀಟರ್ ರಹಿತ ಸಂಪರ್ಕಗಳಿಗೆ ಕನಿಷ್ಠ ದರ ಪ್ರತಿ ತಿಂಗಳು ಗೃಹಬಳಕೆ ಸಂಪರ್ಕಕ್ಕೆ ₹175, ಗೃಹೇತರ ಸಂಪರ್ಕಕ್ಕೆ ₹350ಗೆ ನಿಗದಿಪಡಿಸಲಾಗಿದೆ.
2022-23ನೇ ಸಾಲಿನಿಂದ ನೀರಿನ ಕಂದಾಯವನ್ನು ಪರಿಷ್ಕೃತ ದರದಂತೆ ಪಾವತಿಸಲು ಹಾಗೂ ಈಗಾಗಲೇ 2022-23 ನೇ ಸಾಲಿನ ನೀರಿನ ಕಂದಾಯವನ್ನು ಪಾವತಿಸಿರುವ ಖಾತೆದಾರರಿಗೆ ಪರಿಷ್ಕೃತ ದರದ ವ್ಯತ್ಯಾಸದ ಮೊತ್ತವನ್ನು ಪಾವತಿಸುವಂತೆ ಕೋರಲಾಗಿದೆ.

https://suddikanaja.com/2022/12/17/union-home-minister-medal-2022-list/

error: Content is protected !!