Arrest | ಎಂಟು ಮನೆಗಳ್ಳತನಗಳನ್ನು ಬೇಧಿಸಿದ ಪೊಲೀಸ್, ಲಕ್ಷಾಂತರ ಮೌಲ್ಯದ ಚಿನ್ನಾಭರಣ ಸೀಜ್

theft arrest

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಎಂಟು ಮನೆಗಳಲ್ಲಿನ‌ ಕಳ್ಳತನ ಪ್ರಕರಣ ಸಂಬಂಧ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ.
ಅಣ್ಣಾನಗರ 1ನೇ ಕ್ರಾಸ್ ನಿವಾಸಿ‌ ಡಿ.ಸದ್ದಾಂ(31) ಬಂಧಿತ ಆರೋಪಿ. ಅಂದಾಜು ಮೌಲ್ಯ ₹7,22,500 ಮೌಲ್ಯದ 144.50 ಗ್ರಾಂ ತೂಕದ ಬಂಗಾರದ ಆಭರಣಗಳು, ಅಂದಾಜು ₹21, 700 ಮೌಲ್ಯದ 310 ಗ್ರಾಂ ತೂಕದ ಬೆಳ್ಳಿಯ ವಸ್ತುಗಳು, ಒಂದು ಮೊಬೈಲ್ ಫೋನ್, ಒಂದು ವಾಚ್, 2 ಟಿವಿಗಳು ಸೇರಿ ಒಟ್ಟು ₹7,77,950 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

READ | ಶಿವಮೊಗ್ಗ ನಗರದಲ್ಲಿ 19 ಭಾರಿ, ಸರಕು‌ ವಾಹನಗಳ‌ ಸಂಚಾರಕ್ಕೆ‌ನಿಷೇಧ

ಒಂದು ಕೇಸಿನ ಹಿಂದೆ…
ಅಣ್ಣಾನಗರದ ವಾಸದ ಮನೆಯೊಂದರ ಎಗ್ಸಾಸ್ಟರ್ ಫ್ಯಾನ್ (exhaust fan) ಅನ್ನು ಮುರಿದು ಅಲ್ಲಿಂದ ಮನೆಯೊಳಗೆ ಬಂದು ಗಾಡ್ರೇಜ್ ಬೀರುವಿನಲ್ಲಿದ್ದ ನಗದು ಹಣ, ಟಿವಿ, ಮೊಬೈಲ್ ಮತ್ತು ವಾಚ್ ಅನ್ನು ಕಳ್ಳತನ ಮಾಡಿಕೊಂಡು ಹೋಗಲಾಗಿತ್ತು.‌ ಪ್ರಕರಣ ತನಿಖೆ ಕೈಗೊಂಡ ತಂಡ ಆರೋಪಿಯನ್ನು‌ ಬಂಧಿಸಿದೆ.
ತನಿಖೆ ಕೈಗೊಂಡ ದೊಡ್ಡಪೇಟೆ ಪೊಲೀಸ್ ಠಾಣೆ ಪಿಐ ಅಂಜನ್ ಕುಮಾರ್, ಪಿಎಸ್.ಐ ವಸಂತ್, ಪ್ರೊ.ಪಿಎಸ್.ಐಗಳಾದ ಮಂಜಮ್ಮ, ಕೃಷ್ಣಕುಮಾರ್ ಮಾನೆ, ಸೈಲ್ ಕೆಂಚಣ್ಣವರ್, ಎಎಸ್ಐ ಚಂದ್ರಶೇಖರ್, ಸಿಬ್ಬಂದಿ ಪಾಲಾಕ್ಷ ನಾಯ್ಕ್ ಗುರುನಾಯ್ಕ್, ಸಿ.ಶಶಿಧರ್ ಸಿ, ಚಂದ್ರಾನಾಯ್ಕ್, ಮನೋಹರ್, ನಿತಿನ್, ರಮೇಶ್  ತಂಡವು ಕಾರ್ಯಾಚರಣೆ ಕೈಗೊಂಡಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://suddikanaja.com/2022/12/29/students-rush-for-selfie-with-actress-asha-bhat-at-dvs-college/

error: Content is protected !!