Chandragutti Temple | ಚಂದ್ರಗುತ್ತಿ ಜಾತ್ರೆಗೆ ಜಿಲ್ಲಾಡಳಿತದ ಷರತ್ತುಗಳೇನು?

Chandragutti temple

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯ ಸೊರಬ (Sorab) ತಾಲ್ಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ಫೆ.25ರಿಂದ ಮಾರ್ಚ್ 2ರ ವರೆಗೆ 5 ದಿನಗಳ ಕಾಲ ರೇಣುಕಮ್ಮ ದೇವಿಯ ಜಾತ್ರಾ ಮಹೋತ್ಸವ ನಡೆಯಲಿದ್ದು, ಜಿಲ್ಲಾಡಳಿತ ಹಲವು ಷರತ್ತುಗಳನ್ನು ವಿಧಿಸಿದೆ.

READ | ಶಿವಮೊಗ್ಗಕ್ಕೆ ಎಷ್ಟು ಗಂಟೆಗೆ ಬರಲಿದ್ದಾರೆ ಪ್ರಧಾನಿ ಮೋದಿ, ಯಾವ ವಿಮಾನದಿಂದ ಆಗಮನ?

ಏನೇನು ಕಂಡಿಷನ್ಸ್?
ಜಾತ್ರಾ ಮಹೋತ್ಸವದಲ್ಲಿ ಸಮೀಪದ ವರದಾ ಹೊಳೆಯಲ್ಲಿ ಧಾರ್ಮಿಕ ಸ್ನಾನ ಮಾಡುವುದು, ಚೌಲ ಮಾಡಿಸುವುದು, ಕಿವಿ ಚುಚ್ಚುವುದು, ಪಡ್ಡಿಗೆ (ರೇಣುಕಾಂಬ ದೇವಿಯ ಹೆಸರಿನ ಅಕ್ಷಯ ಪಾತ್ರ ಮತ್ತು ಬೆತ್ತಲೆ ಸೇವೆ)ಗಳನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆದೇಶದಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಕಲಂ 35ರನ್ವಯ ಆದೇಶ ಹೊರಡಿಸಿದ್ದು, ಈ ನಿಷೇದಾಜ್ಞೆಯು ಶ್ರೀ ರೇಣುಕಮ್ಮ ದೇವಿಯ ರಥೋತ್ಸವ, ಪೂಜಾ ಕಾರ್ಯಗಳು ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ನಡೆಸುವುದಕ್ಕೆ ಅನ್ವಯಿಸುವುದಿಲ್ಲ‌ ಎಂದು ತಿಳಿಸಿದ್ದಾರೆ.

error: Content is protected !!