ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಅಡಿಕೆ ಬೆಳೆಗಾರ(arecanut growers)ರಿಗೆ ಕೇಂದ್ರ ಸರ್ಕಾರವು ಚುನಾವಣೆಯ ಹೊತ್ತಿಲಿನಲ್ಲಿ ಶುಭ ಸುದ್ದಿ ನೀಡಿದೆ. ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ಅಧಿಸೂಚನೆ ಹೊರಡಿಸಿದ್ದು, ಅದರಂತೆ ಕನಿಷ್ಠ ಆಮದು ದರ(ಎಂಐಪಿ)ವನ್ನು 251 ರೂ.ದಿಂದ 351 ರೂ.ಗೆ ಹೆಚ್ಚಿಸಲಾಗಿದೆ.
READ | ಅಡಿಕೆ ಕನಿಷ್ಠ ಆಮದು ದರ ಹೆಚ್ಚಳದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ
ಭೂತಾನ್(Bhutan)ನಿಂದ ಅಡಿಕೆ ಆಮದು ಮಾಡಿಕೊಂಡಾಗ ಅಡಿಕೆ ಬೆಳೆಗಾರರು ಸೇರಿದಂತೆ ಸಂಘ ಸಂಸ್ಥೆಗಳು ಭಾರಿ ವಿರೋಧ ವ್ಯಕ್ತಪಡಿಸಿದ್ದವು. ವಿಪಕ್ಷಗಳು ಸಹ ಕಟು ಟೀಕೆ ಮಾಡಿದ್ದರು. ಜತೆಗೆ, ನಾನಾ ಕಾಯಿಲೆ ಸೇರಿದಂತೆ ವಿವಿಧ ತೊಂದರೆಗಳ ನಡುವೆ ಕರ್ನಾಟಕದ ಅಡಿಕೆ ಬೆಳೆಗಾರರು ಸಿಲುಕಿದ್ದರು. ಹೀಗಾಗಿ, ಎಂಐಪಿ ಹೆಚ್ಚಿಸಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಮನವಿ ಮಾಡಿದ್ದರು.
Click here for Notification
ಎಂಐಪಿ ಹೆಚ್ಚಳದಿಂದಾಗುವ ಪ್ರಯೋಜನಗಳೇನು?
ಕೇಂದ್ರವು ಕನಿಷ್ಠ ಆಮದು ದರವನ್ನು ಹೆಚ್ಚಿಸುವುದರಿಂದ ದೇಶೀಯ ಅಡಿಕೆ ಬೆಳೆಗಾರರಿಗೆ ಅನುಕೂಲವಾಗಲಿದೆ. ಉತ್ಕøಷ್ಟ ಮತ್ತು ಗುಣಮಟ್ಟದ ಅಡಿಕೆ ಬೆಳೆಯುವ ಕರ್ನಾಟಕದಲ್ಲಿ ಬೆಳೆಸಲಾಗುತ್ತದೆ. ಹೀಗಾಗಿ, ಬೆಳೆಗಾರರಿಗೆ ಬರುವ ದಿನಗಳಲ್ಲಿ ಉತ್ತಮ ಬೆಲೆ ಸಿಗುವ ಅಥವಾ ಈಗಗಿರುವ ಬೆಲೆಯು ಸ್ಥಿರವಾಗಿರುವ ಸಾಧ್ಯತೆ ಇದೆ ಎಂದೂ ವಿಶ್ಲೇಷಿಸಲಾಗುತ್ತಿದೆ.
READ | 15/02/2023ರ ಅಡಿಕೆ ಧಾರಣೆ
ಯಾವಾಗ ಎಷ್ಟಿತ್ತು ಎಂಐಪಿ?
ಅಂತರರಾಷ್ಟ್ರೀಯ ಒಪ್ಪಂದಗಳಿಂದಾಗಿ ಅಡಿಕೆ ಆಮದು ಅನಿವಾರ್ಯ. ಆದರೆ, ಇದರಿಂದ ದೇಶೀಯ ಅಡಿಕೆ ಬೆಳೆಗಾರರಿಗೆ ತೊಂದರೆ ಆಗಬಾರದು. ಅವರ ಹಿತ ಕಾಪಾಡಬೇಕು. ಈ ಉದ್ದೇಶದಿಂದ ಕಾಲಕಾಲಕ್ಕೆ ಎಂಐಪಿಯನ್ನು ಹೆಚ್ಚಿಸಲಾಗಿದೆ. ಪ್ರತಿ ಕೆಜಿಗೆ 110 ರೂ. ಇದ್ದ ಎಂಐಪಿಯನ್ನು 2015ರಲ್ಲಿ 52 ರೂ.ಗಳು ಹೆಚ್ಚಿಸುವ ಮೂಲಕ 162 ರೂ. ಮಾಡಲಾಯಿತು. ನಂತರ, 2017ರಲ್ಲಿ 251 ರೂ. ನಿಗದಿಪಡಿಸಲಾಗಿತ್ತು. ಇದನ್ನು ಹೆಚ್ಚಿಸಬೇಕು ಎಂದು ಕ್ಯಾಂಪ್ಕೋ ಇತ್ತೀಚೆಗೆ ಕೇಂದ್ರ ಸಚಿವರಾದ ಅಮಿತ್ ಶಾ ಹಾಗೂ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಮಾಡಿತ್ತು. ಇದನ್ನು ಪರಿಗಣಿಸಿ ಬೇಡಿಕೆಯಂತೆ, ಕೆಜಿಗೆ 100 ರೂ. ಹೆಚ್ಚಿಸಿದ್ದು, ಪ್ರಸ್ತುತ ಪರಿಷ್ಕøತ ಕನಿಷ್ಠ ಆಮದು ದರವು 361 ಏರಿಕೆಯಾಗಿದೆ.