
ಶಿವಮೊಗ್ಗಕ್ಕೆ ಆಗಮಿಸಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತರಹೇವಾರಿ ಹಾರಗಳಿಂದ ಸ್ವಾಗತಿಸಲಾಯಿತು.
ಸುದ್ದಿ ಕಣಜ.ಕಾಂ ತೀರ್ಥಹಳ್ಳಿ
THIRTHAHALLI: ತೀರ್ಥಹಳ್ಳಿಯಲ್ಲಿ ನಡೆದ ಪಂಚರತ್ನ ಯಾತ್ರೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿಯಿಂದ ಅಡಿಕೆ ಬೆಳೆಗಾರರನ್ನ ಮುಗಿಸಲು ಪ್ರಯತ್ನ ನಡೆಯುತ್ತಿದೆ. ಭೂತನ್ ನಿಂದ ಅಡಿಕೆ ಆಮದು ಮಾಡಿಕೊಂಡು ನಮ್ಮ ರಾಜ್ಯದ ಅಡಿಕೆ ಬೆಳೆಗಾರರಿಗೆ ಅನ್ಯಾಯ ಮಾಡಲಾಗುತ್ತಿದೆ. ಹಾಗೂ ಅಡಿಕೆ ಸಂಶೋಧನಾ ಕೇಂದ್ರ ಗೆಸ್ಟ್ ಹೌಸ್ ನಂತಾಗಿದೆ ಎಂದು ಪ್ರಖರ ವಾಗ್ದಾಳಿ ಮಾಡಿದರು.
READ | ನಮ್ಮ ಕುಟುಂಬದ ಬಗ್ಗೆ ಮಾತನಾಡುವ ಮುನ್ನ ಎಚ್ಚರವಿರಲಿ, ಕುಮಾರಸ್ವಾಮಿ ಗುಟುರ್
ಎಚ್.ಡಿ.ಕೆ. ಹೇಳಿದ್ದೇನು?
- ತರಕಾರಿ ತೆದುಕೊಳ್ಳುವಾಗ ಹಲವು ಸಲ ಯೋಚನೆ ಮಾಡಲಾಗುತ್ತದೆ. ಹಾಗೆಯೇ ಶಾಸಕರನ್ನು ಯೋಚನೆ ಮಾಡಿ ಆಯ್ಕೆ ಮಾಡಿ.
- ನಮ್ಮ ಪಕ್ಷದ ಬಗ್ಗೆ ಈ ರೀತಿ ಭ್ರಷ್ಟಾಚಾರ ಬಗ್ಗೆ ಯಾರು ಚರ್ಚೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ನಾನು ಕೂಡ ಸಿಎಂ ಆಗಿದ್ದೆ. ಆದರೆ ಭ್ರಷ್ಟಾಚಾರ ಮಾಡಿಲ್ಲ.
- ಬಿಜೆಪಿಯವರು ಸಿದ್ಧರಾಮಯ್ಯ ಆಡಳಿತಾವಧಿಯಲ್ಲಿ 800 ಕೋಟಿ ಭ್ರಷ್ಟಾಚಾರ ಆಗಿದೆ ಎನ್ನುತ್ತಾರೆ ಮೊದಲೇ ಈ ಬಗ್ಗೆ ತನಿಖೆ ಮಾಡಬಹುದಿತ್ತು.
- ಈ ಬಾರಿ 123 ಕ್ಷೇತ್ರಗಳಲ್ಲಿ ಗೆದ್ದು ಪಂಚರತ್ನ ಯೋಜನೆ ಜಾರಿಗೊಳಿಸುವೆ. ನಾನು ಎರಡು ಬಾರಿ ಸಿಎಂ ಆಗಿದ್ದು ಆಕಸ್ಮಿಕ. ಅಧಿಕಾರ ಅವಧಿಯಲ್ಲಿ. ನನ್ನ ಹೋರಾಟ ಬಡವರ ಪರವಾಗಿ ಹೊರತು ಅಧಿಕಾರಕ್ಕಲ್ಲ.
- ಸಿಟಿ ರವಿ ನನಗೆ ಲಾಟರಿ ಎಂದಿದ್ದಾರೆ. ಹೌದು, ನಾನು ಲಾಟರಿ ಆದರೆ ಲೂಟಿ ರಾಜಕಾರಣಿ ಅಲ್ಲ