Circuit House | ಸರ್ಕ್ಯೂಟ್ ಹೌಸ್ ವೃತ್ತದಲ್ಲಿ ನಿರ್ಮಾಣವಾಗಲಿದೆ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಪ್ರತಿಮೆ, ಎತ್ತರವೆಷ್ಟು, ಯಾರು ನೀಡಲಿದ್ದಾರೆ?

Balagangadharanath

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸ್ಮಾರ್ಟ್ ಸಿಟಿ ವತಿಯಿಂದ ನಗರದ ಸರ್ಕ್ಯೂಟ್ ಹೌಸ್ ವೃತ್ತ ಬಳಿಯ ಆದಿಚುಂಚನಗಿರಿ ಶಾಲೆ ಬಳಿಯ ವೃತ್ತದಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ (balagangadharanatha swamiji) ಅವರ ಪ್ರತಿಮೆಯನ್ನು ನಿರ್ಮಿಸಲಾಗುವುದು. ಈಗಾಗಲೇ ಪ್ರತಿಮೆ ಸ್ಥಾಪನೆಗೆ ಕಾಮಗಾರಿ ಪ್ರಾರಂಭವಾಗಿದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ (KS Eshwarappa) ಹೇಳಿದರು.
ಸ್ಮಾರ್ಟ್ ಸಿಟಿ (smart city) ಕಾಮಗಾರಿಗಳನ್ನು ವೀಕ್ಷಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

READ | ಅಡಿಕೆ ಎಲೆಚುಕ್ಕೆ ರೋಗ ಅಧ್ಯಯನಕ್ಕೆ 7 ಜನ ತಜ್ಞರ ಕೇಂದ್ರ ಸಮಿತಿ ನಿಯೋಜನೆ, ರಾಜ್ಯಕ್ಕೆ ಭೇಟಿ ನೀಡಲಿದೆ ತಂಡ

ಸರ್ಕ್ಯೂಟ್ ಹೌಸ್ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಸಲಹೆ ಪಡೆದು ಕಾನೂನಿಗೆ ಧಕ್ಕೆ ಆಗದಂತೆ ಕ್ರಮವಹಿಸಲಾಗುವುದು. ಪ್ರತಿಮೆ ನಿರ್ಮಾಣದ ಸ್ಥಳ ಹಾಗೂ ಪ್ರವಾಸಿ ಮಂದಿರದ ವೃತ್ತದ ಸುಂದರೀಕರಣಗೊಳಿಸಲಾಗುವುದು ಎಂದರು.
ಆರು ಅಡಿ ಪ್ರತಿಮೆ ಪ್ರತಿಷ್ಠಾಪನೆ
ಆರು ಅಡಿ ಎತ್ತರದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಪ್ರತಿಮೆಯನ್ನು ನೀಡಲು ಆದಿಚುಂಚನಗಿರಿ ಸಂಸ್ಥಾನ ಮುಂದೆ ಬಂದಿದೆ ಎಂದು ತಿಳಿಸಿದರು.
ಲೋಪವಿದ್ದಲ್ಲಿ ಸೂಕ್ತ ಪರಿಹಾರ
ಸ್ಮಾರ್ಟ್ ಸಿಟಿ ಕಾಮಗಾರಿಗಳ ಸಂಬಂಧ ಹಲವು ದೂರುಗಳು ಬಂದಿದ್ದರಿಂದ ಪರಿಶೀಲನೆಗೆ ಮಾಡಲಾಗುತ್ತಿದೆ. ಎಲ್ಲೆಲ್ಲಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳಿವೆಯೋ ಅವುಗಳನ್ನು ಕೂಡಲೇ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ರಾಜೇಂದ್ರ ನಗರದಲ್ಲಿ ಅತ್ಯಾಧುನಿಕ ಶೆಟಲ್ ಬ್ಯಾಡ್ಮಿಂಟನ್ ಒಳಾಂಗಣವನ್ನು ಉದ್ಘಾಟಿಸಿದರು. ಸೂಡಾ ಅಧ್ಯಕ್ಷ ನಾಗರಾಜ್, ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಶಿವಕುಮಾರ್, ಉಪ ಮೇಯರ್ ಲಕ್ಮ್ಷೀಶಂಕರ್‍ನಾಯ್ಕ್, ಪಾಲಿಕೆ ಸದಸ್ಯರಾದ ಸುವರ್ಣ ಶಂಕರ್, ಆರತಿ ಆ.ಮ. ಪ್ರಕಾಶ್, ಸುರೇಖಾ ಮುರುಳೀಧರ್, ಸುನೀತಾ ಅಣ್ಣಪ್ಪ, ಆಯುಕ್ತ ಮಾಯಣ್ಣಗೌಡ ಉಪಸ್ಥಿತರಿದ್ದರು.

error: Content is protected !!