Automotive Show | ಶಿವಮೊಗ್ಗದಲ್ಲಿ ನಡೆಯಲಿದೆ ಲಕ್ಸುರಿ ಕಾರುಗಳ ಶೋ, ಯಾವ್ಯಾವ ಕಾರುಗಳಿವೆ?

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಬೆಂಗಳೂರಿನ ಖ್ಯಾತ ಆಟೋ ಎಕ್ಸ್ ಪೋ ಆಯೋಜಕರಾದ ಆರ್‍ಪಿಎಂ ಕಂಪನಿ(RPM Company)ಯಿಂದ ಮಾ.12ರ ವರೆಗೆ ಶಿವಮೊಗ್ಗದ ಹಳೆ ಜೈಲ್ ಆವರಣದ ಫ್ರೀಡಂ ಪಾರ್ಕ್ (freedom park) ನಲ್ಲಿ ಆರ್‍ಪಿಎಂ ಆಟೋಮೋಟಿವ್ ಶೋ (Automotive Show) ಹಮ್ಮಿಕೊಳ್ಳಲಾಗಿದೆ.

READ | ಚನ್ನಗಿರಿಯಲ್ಲಿ ಸ್ಪರ್ಧೆಯ ಬಗ್ಗೆ ಡಾ.ಧನಂಜಯ ಸರ್ಜಿ ಹೇಳಿದ್ದೇನು?

ಅಭೂತಪೂರ್ವ ಪ್ರತಿಕ್ರಿಯೆ
ಶಿವಮೊಗ್ಗದಲ್ಲಿ 2014 ಮತ್ತು 2017ರಲ್ಲಿ ಆಟೋಮೋಟಿವ್ ಶೋ ಆಯೋಜಿಸಿ ಅಭೂತಪೂರ್ವ ಯಶಸ್ವಿಯ ಬಳಿಕ ಈಗ 3ನೇ ಬಾರಿ ಆಯೋಜಿಸಲಾಗಿದ್ದು, ಈ ಶೋನಲ್ಲಿ ಪ್ರಸಿದ್ಧ ಕಂಪನಿಗಳ ಕಾರು ಹಾಗೂ ಬೈಕ್‍ಗಳ ಪ್ರದರ್ಶನ ಹಾಗೂ ಮಾರಾಟವಿದೆ.
ಲಕ್ಸುರಿ ಕಾರುಗಳಾದ ಮರ್ಸಿಡಿಸ್ ಬೆಂಜ್ಸ್, ಬಿಎಂಡಬ್ಲ್ಯೂ, ಆಡಿ, ಜಾಗ್ವಾರ್, ರೇಂಜ್ ರೋವರ್, ಎಂ.ಜಿ.ಹೆಕ್ಟಾರ್, ಟೊಯೋಟಾ, ಮಾರುತಿ ಸುಜುಕಿ, ಸ್ಕೋಡಾ ನೆಕ್ಸಾ, ಟಾಟಾ, ಕಿಯಾ ಕಾರುಗಳು ಮತ್ತು ಸೂಪರ್ ಬೈಕುಗಳಾದ ಬೆನೆಲಿ, ಕೆ.ಟಿ.ಎಂ. ಯಮಹಾ, ಏತರ್ ಮತ್ತು ವಿನೂತನ ಮತ್ತು ಹೊಸದಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಎಲ್ಲ ವೈವಿಧ್ಯ ಎಲೆಕ್ಟ್ರಿಕ್ ಕಾರ್ ಹಾಗೂ ಬೈಕ್‍ಗಳು ಕಣ್ಮನ ಸೆಳೆದವು.
ಮಹಿಳೆಯರಿಗೆ ಮತ್ತು ಮಕ್ಕಳಿಗೆ ಏರ್ಪಡಿಸಿರುವ ಲೈಫ್ಸ್ಟೈಲ್ ಎಕ್ಸಿಬಿಷನ್ ನಲ್ಲಿ ಸೀರೆ, ಕುರ್ತಿ, ಬೆಳ್ಳಿ ಮತ್ತು ಇಮಿಟೇಷನ್ ಆಭರಣ, ಬ್ಯಾಗ್ ಗಳು ದೊರೆಯಲಿದ್ದು, ವಿಧ ವಿಧವಾದ ತಿನಿಸುಗಳನ್ನು ಸವಿಯುವ ಅವಕಾಶವಿದೆ. ಶಾಖಾಹಾರ, ಮಾಂಸಾಹಾರ, ಚಾಟ್ಸ್, ಐಸ್ ಕ್ರೀಂ, ಜ್ಯೂಸ್ ಲಭ್ಯವಿದೆ. ಪ್ರವೇಶ ಶುಲ್ಕ 50 ರೂ.ಇದ್ದು, ಟಿಕೆಟ್ ಅನ್ನು ಅಲ್ಲೇ ಕೌಂಟರ್‍ನಲ್ಲಿ ತೆಗೆದುಕೊಳ್ಳಬಹುದಾಗಿದೆ.

Shivamogga police | ಕಳೆದ‌ ಮೊಬೈಲ್ ಹುಡುಕಾಟಕ್ಕೆ ಶಿವಮೊಗ್ಗ ಪೊಲೀಸರ ಹೊಸ ಟೆಕ್ನಾಲಜಿ, ಏನಿದರ ಲಾಭ?

error: Content is protected !!