
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಒಂದುವೇಳೆ ನಿಮ್ಮನ್ನು ಪಕ್ಷ ಚನ್ನಗಿರಿ ಅಭ್ಯರ್ಥಿ ಎಂದು ಸ್ಪರ್ಧಿಸುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ನಾಯಕ ಹಾಗೂ ಜಿಲ್ಲಾ ಬಿಜೆಪಿ ಪ್ರಣಾಳಿಕೆ ಸಮಿತಿಯ ಸಂಚಾಲಕ ಡಾ.ಧನಂಜಯ ಸರ್ಜಿ (Dr.Dhananjay sarji), “ಪಕ್ಷದ ತೀರ್ಮಾನಕ್ಕೆ ಬದ್ಧ. ಕುಟುಂಬ ಮತ್ತು ನನ್ನ ಬೆಂಬಲಿಗರ ಸಲಹೆ ಪಡೆದು ಮುಂದಿನ ಹೆಜ್ಜೆ ಇಡುತ್ತೇನೆ” ಎಂದರು.
READ | ಕಳೆದ ಮೊಬೈಲ್ ಹುಡುಕಾಟಕ್ಕೆ ಶಿವಮೊಗ್ಗ ಪೊಲೀಸರ ಹೊಸ ಟೆಕ್ನಾಲಜಿ, ಏನಿದರ ಲಾಭ?
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ಪಕ್ಷ ಕೊಟ್ಟ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತೇನೆ. ಪಕ್ಷ ನನಗೆ ಒಳ್ಳೆಯ ಜವಾಬ್ದಾರಿ ನೀಡಿದೆ. ಗ್ರಾಮಾಂತರ ಕ್ಷೇತ್ರದ ಪ್ರಚಾರ ಉಸ್ತುವಾರಿಯನ್ನು ನಿರ್ವಹಿಸಲು ಸೂಚಿಸಿದೆ. ಪ್ರಣಾಳಿಕೆಯ ಸಂಚಾಲಕತ್ವವನ್ನು ನೀಡಿದೆ” ಎಂದು ತಿಳಿಸಿದರು.
ನಾನು ಪಕ್ಷದ ಶಿಸ್ತಿನ ಸಿಪಾಯಿ
ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಆಕಾಂಕ್ಷಿಯಾಗಿದ್ದು ನಿಜ. ಆದರೆ ಪಕ್ಷದ ತೀರ್ಮಾನವೇ ಅಂತಿಮ. ಪಕ್ಷದ ಮತ್ತು ಸಂಘಟನೆಯ ಕಾರ್ಯಕರ್ತರು ಪ್ರತಿನಿತ್ಯ ದೂರವಾಣಿ ಕರೆ ಮಾಡಿ ಚನ್ನಗಿರಿ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಒತ್ತಡ ಹೇರುತ್ತಿದ್ದಾರೆ. ಹಿಂದೆ ಭದ್ರಾವತಿಯಿಂದ ಕೂಡ ಒತ್ತಾಯ ಬಂದಿತ್ತು. ಆದರೆ ನಾನು ಪಕ್ಷದ ಶಿಸ್ತಿನ ಸಿಪಾಯಿ ಸಾಮಾನ್ಯ ಕಾರ್ಯಕರ್ತ ಪಕ್ಷ ನೀಡಿದ ಯಾವುದೆ ಜವಾಬ್ದಾರಿಯನ್ನು ನಿಷ್ಟೆಯಿಂದ ನಿರ್ವಹಿಸುತ್ತೇನೆ. ಚನ್ನಗಿರಿ ತಾಲ್ಲೂಕು ನನ್ನ ಹುಟ್ಟೂರು, ನಮ್ಮ ಹಿರಿಯರ ಊರು ಕೂಡ ಆಗಿದೆ. ಆದ್ದರಿಂದ ಸಹಜವಾಗಿ ಅಲ್ಲಿನ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ ಎಂದರು.
Extension of trains | ಹತ್ತು ವಿಶೇಷ ಎಕ್ಸ್ಪ್ರೆಸ್ ರೈಲುಗಳ ಸೇವೆ ವಿಸ್ತರಣೆ, ಯಾವ್ಯಾವ ರೈಲು? ಇಲ್ಲಿದೆ ಮಾಹಿತಿ