MRS circle | ವಿಮಾನ ನಿಲ್ದಾಣವಾಯ್ತು ಈಗ ಎಂ.ಆರ್.ಎಸ್ ವೃತ್ತ ನಾಮಕರಣಕ್ಕೆ ಬೇಡಿಕೆ, ಹೆಸರು ಸೂಚಿಸಿ ಸಿಎಂಗೆ ಪತ್ರ

Shivamogga taluk

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ವಿಮಾನ ನಿಲ್ದಾಣ(shivamogga airport)ದ ನಾಮಕರಣಕ್ಕಾಗಿ ಭಾರಿ ಚರ್ಚೆ, ವಾದ ವಿವಾದಗಳು‌ ನಡೆದವು. ಇದರ ಬೆನ್ನಲ್ಲೇ ಶಿವಮೊಗ್ಗದ ಪ್ರಮುಖ ವೃತ್ತವಾದ ಎಂಆರ್.ಎಸ್.ಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರ ಹೆಸರು ಇಡುವಂತೆ ಒತ್ತಾಯಿಸಲಾಗಿದೆ.
ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಮನವಿ ಸಲ್ಲಿಸಲಾಯಿತು.
ಶಿಕಾರಿಪುರ ತಾಲ್ಲೂಕಿನ ಶಿವಶರಣೆ ಅಕ್ಕಮಹಾದೇವಿ (akkamahadevi) ಜನ್ಮ ಸ್ಥಳವಾದ ಉಡುತಡಿ (udutadi) ಗ್ರಾಮದಲ್ಲಿ ಅಕ್ಕಮಹಾದೇವಿಯ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು‌.

READ | ಹಲವು ದಾಖಲೆಗಳನ್ನು ಬರೆದಿದ್ದ ಲಕ್ಷ್ಮೀ ಟಾಕೀಸ್ ಬಂದ್, ಇಲ್ಲಿ ಮೊದಲು ಪ್ರದರ್ಶನಗೊಂಡ ಚಿತ್ರ ಯಾವುದು? ತಿಳಿದುಕೊಳ್ಳಲೇಬೇಕಾದ ವಿಚಾರಗಳಿವು

ಮಲೆನಾಡಿನ ಅಭಿವೃದ್ಧಿ ಪರ್ವಕ್ಕೆ ಮುನ್ನುಡಿ
ಯಡಿಯೂರಪ್ಪ ಅವರು ಮೊಟ್ಟ ಮೊದಲ ಬಾರಿಗೆ ಈ ರಾಜ್ಯದ ಉಪಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಏರಿದ ತರುವಾಯ ಸಿಕ್ಕ ಸ್ವಲ್ಪ ಅವಧಿಯಲ್ಲಿಯೇ ಮಲೆನಾಡಿನ ಅಭಿವೃದ್ಧಿ ಪರ್ವಕ್ಕೆ ಮುನ್ನುಡಿ ಬರೆದಿದ್ದರು. ಅದರಲ್ಲೂ ದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ತಂದು ಈ ನಾಡಿನ ಮುಖ್ಯಮಂತ್ರಿಗಳಾದ ನಂತರ ಊಹಿಸಲು ಅಸಾಧ್ಯವಾದ ರೀತಿಯಲ್ಲಿ ಸಾವಿರಾರು ಕೋಟಿ ಅನುದಾನ ಒದಗಿಸಿ ಎಲ್ಲ ರೀತಿಯ ಮೂಲಸೌಕರ್ಯ ಹಾಗೂ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡಿ ರಾಜ್ಯದ ಭೂಪಟದಲ್ಲಿ ಜಿಲ್ಲೆಯ ಅಭಿವೃದ್ಧಿಯ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದಿದ್ದಾರೆ. ಹೀಗಾಗಿ, ಎಂಆರ್‌ಎಸ್ ವೃತ್ತಕ್ಕೆ  ಬಿ.ಎಸ್. ಯಡಿಯೂರಪ್ಪ ಅವರ ಹೆಸರನ್ನು ನಾಮಕರಣ ಮಾಡುವಂತೆ   ಸಮುದಾಯ ಒತ್ತಾಯಿಸಿದೆ.
ಬಸವೇಶ್ವರ ವೀರಶೈವ ಸಂಘದ ನಿರ್ದೇಶಕ ಮೋಹನ್ ಬಾಳೆಕಾಯಿ, ಅನಿತಾ ರವಿಶಂಕರ್, ಮಹೇಶ್ ಮೂರ್ತಿ, ಪ್ರಮುಖರಾದ ಉಮೇಶ್ ಉಪಸ್ಥಿತರಿದ್ದರು.

Railway station | ಶಿವಮೊಗ್ಗ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಕ್ಕೆ ನಾಮಕರಣ, ಏನೇನು ಹೆಸರು?

error: Content is protected !!