Shivamogga Jail | ಶಿವಮೊಗ್ಗ ಕೇಂದ್ರ‌ ಕಾರಾಗೃಹದ ಮೇಲೆ ಪೊಲೀಸರ ದಿಢೀರ್ ದಾಳಿ

Shivamogga Jail

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿ, ಪ್ರತಿಯೊಂದು ಸೆಲ್ ಅನ್ನು ಪರಿಶೀಲಿಸಿದರು.

READ | ಲಕ್ಷ್ಮೀ ಚಿತ್ರಮಂದಿರ‌ ಬಂದ್, ಟಾಕೀಸ್ ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಚಾರಗಳಿವು

ಮುಂಬರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಸ್.ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ಹೆಚ್ಚುವರಿ ಎಸ್.ಪಿ ಅನಿಲ್ ಕುಮಾರ್ ಭೂಮರಡ್ಡಿ ನೇತೃತ್ವದಲ್ಲಿ ವಿವಿಧ ಠಾಣೆಗಳ ಪಿಐ, ಪಿಎಸ್.ಐ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.‌ ಆದರೆ, ಯಾವುದೇ ರೀತಿಯ ವಸ್ತುಗಳು ಸಿಕ್ಕಿಲ್ಲ.
ಜೈಲಿಗೆ ಗಾಂಜಾ ಪೂರೈಕೆ ಹಾಗೂ ಜೈಲಿನಲ್ಲಿದ್ದೇ ವಿವಿಧ ಚಟುವಟಿಕೆಗಳನ್ನು ಮುಂದುವರಿಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ‌ ನಡೆಸಲಾಗಿದೆ ಎಂದು ತಿಳಿದುಬಂದಿದೆ.

error: Content is protected !!