Power cut | ಶಿವಮೊಗ್ಗದ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಮಾ.10ರಂದು ಕರೆಂಟ್ ಇರಲ್ಲ

POWER CUT 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಾರ್ಚ್ 10ರ ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಹೊಳಲೂರು ಗ್ರಾಮದಲ್ಲಿರುವ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಇರುವುದರಿಂದ ಹೊಳಲೂರು, ಮಡಿಕೆ ಚೀಲೂರು, ಹಾಡೋನಹಳ್ಳಿ, ಹೊಳೆಹಟ್ಟಿ, ಸೂಗೂರು, ಕ್ಯಾತಿನಕೊಪ್ಪ, ಬುಳ್ಳಾಪುರ, ಬೇಡರಹೊಸಳ್ಳಿ, ಹರಮಘಟ್ಟ, ಸೋಮಿನಕೊಪ್ಪ, ಆಲದಹಳ್ಳಿ, ಸುತ್ತುಕೋಟೆ, ಕೊಮ್ಮನಾಳ್, ಬಿಕ್ಕೋನಹಳ್ಳಿ, ಬೂದಿಗೆರೆ, ಬೀರನಕೆರೆ, ಬನ್ನಿಕೆರೆ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

READ | ಶಿವಮೊಗ್ಗದಲ್ಲಿ ಹೋಳಿ ಹಬ್ಬದಂದೇ ಬೈಕ್ ಸವಾರರಿಗೆ ಶಾಕ್ ನೀಡಿದ ಪೊಲೀಸ್

ಎಂಆರ್‍ಎಸ್ ವ್ಯತ್ಯಯ
220 ಕೆವಿ ಎಂ.ಆರ್.ಎಸ್ ಕವಿಪ್ರನಿನಿ ಶಿವಮೊಗ್ಗ ಇವರು 110/11 ಕೆವಿ ವಿ.ವಿ.ಕೇಂದ್ರ, ಎಂಆರ್‍ಎಸ್ ಶಿವಮೊಗ್ಗ ಇಲ್ಲಿ ಮಾರ್ಚ್ 10 ರಂದು ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಇರುವ ಪ್ರಯುಕ್ತ 11 ಕೆವಿ ಎಫ್-5 ಫೀಡರ್‍ನ ಎಂಆರ್‍ಎಸ್ ವಾಟರ್ ಸಪ್ಲೈ, ಎಂಆರ್‍ಎಸ್ ಕಾಲೋನಿ, ಹರಿಗೆ, ಮಲವಗೊಪ್ಪ, ವಡ್ಡಿನಕೊಪ್ಪ, ನಂಜಪ್ಪ ಲೇಜೌಟ್, ಪ್ರಿಯಾಂಕ ಲೇಔಟ್ ಹಾಗೂ 11 ಕೆವಿ ಎಫ್-3 ಫೀಡರ್‍ನ ಜ್ಯೋತಿನಗರ, ವಿದ್ಯಾನಗರ, ಕಂಟ್ರಿ ಕ್ಲಬ್ ರಸ್ತೆ, ಚಿಕ್ಕಲ್ಲು, ಗುರುಪುರ, ಪುರಲೆ, ಸಿದ್ದೇಶ್ವರ ನಗರ, ಶಾಂತಮ್ಮ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

error: Content is protected !!