Self Employment | ನಿರುದ್ಯೋಗಿಗಳಿಗೆ ಬಂಪರ್ ಅವಕಾಶ, ಶಿವಮೊಗ್ಗದಲ್ಲಿ 30 ದಿನಗಳ ಸ್ವ ಉದ್ಯೋಗ ತರಬೇತಿ

Job Training

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ತಾಲೂಕಿನ ಹೊಳಲೂರು (Holaluru) ಕೆನರಾ ಬ್ಯಾಂಕ್ (canara bank) ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ‘ಎಲೆಕ್ಟ್ರಿಕ್ ಮೋಟಾರ್ ರಿವೈಂಡಿಂಗ್ (electrical motor rewinding) ಮತ್ತು ರಿಪೇರ್ ಸರ್ವಿಸಸ್ (repair service) 30 ದಿನಗಳ ತರಬೇತಿಯನ್ನು ಹಮ್ಮಿಕೊಂಡಿದ್ದು ಆಸಕ್ತಿ ಇರುವ ನಿರುದ್ಯೋಗಿ ಪುರುಷ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.

READ | ಪದವಿ ಪಾಸ್ ಆದವರಿಗೆ ಭರ್ಜರಿ ಉದ್ಯೋಗ ಅವಕಾಶ, ಕೆಪಿಎಸ್.ಸಿ ಅಧಿಸೂಚನೆ

ಹೊಂದಿರಬೇಕಾದ ಅರ್ಹತೆಗಳು

  • ಅಭ್ಯರ್ಥಿಯು 18 ರಿಂದ 45 ವರ್ಷ ವಯೋಮಿತಿ ಒಳಗಿನವರಾಗಿರಬೇಕು.
  • 8ನೇ ತರಗತಿ ಪಾಸ್ ಆಗಿರಬೇಕು.
  • ಗ್ರಾಮೀಣ ಭಾಗದ ಬಿಪಿಎಲ್ ಕಾರ್ಡ ಹೊಂದಿದು ಸ್ವ – ಉದ್ಯೋಗ ಪ್ರಾರಂಭಿಸಲು ಆಸಕ್ತಿ ಇರಬೇಕು.

ಊಟ, ವಸತಿ ಉಚಿತ
ತರಬೇತಿ ಅವಧಿಯಲ್ಲಿ ಉಚಿತ ಊಟ- ವಸತಿ ವ್ಯವಸ್ಥೆ ಇರುತ್ತದೆ. ತರಬೇತಿ ಅವಧಿಯಲ್ಲಿ, ಸಂಸ್ಥೆಯಲ್ಲಿ ಉಳಿದುಕೊಳ್ಳುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ತರಬೇತಿಯು ಏಪ್ರಿಲ್ 12 ರಿಂದ ಪ್ರಾರಂಭವಾಗಲಿದ್ದು ಆಸಕ್ತರು ಹೆಸರು, ವಿಳಾಸ, ಮೊಬೈಲ್ ನಂ. ವಿದ್ಯಾರ್ಹತೆ, ಮತ್ತು ವಯಸ್ಸಿನ ವಿವರಗಳೊಂದಿಗೆ
ನಿರ್ದೇಶಕರು, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ -ಉದ್ಯೋಗ ತರಬೇತಿ ಸಂಸ್ಥೆ, ಹೊನ್ನಾಳಿ ರಸ್ತೆ, ಹೊಳಲೂರು-577 216 (ಶಿವಮೊಗ್ಗ ತಾಲ್ಲೂಕು) ಇವರಿಗೆ ಕೂಡಲೇ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ. 8660062683, 9743429595, 8722384541, 9449371579, 9481955721 ಸಂಪರ್ಕಿಸಿ.

Krushi mela | 4 ದಿನಗಳ ಕಾಲ ಕೃಷಿ ಮೇಳ, ಅಡಿಕೆ, ಗೋಡಂಬಿ ಬೆಳೆಗಾರರು ಬರಲೇಬೇಕು, ಕಾರಣವೇನು? ಏನೇನು ಕಾರ್ಯಕ್ರಮ?

error: Content is protected !!