Assembly election | ಆಟೋದವರಿಗೆ ಚುನಾವಣೆ ಟಫ್ ರೂಲ್ಸ್, ನಿಯಮ ಮೀರಿದ್ರೆ ಬೀಳುತ್ತೆ ಕೇಸ್, ನೀಡಿರುವ ಪ್ರಮುಖ 5 ಸೂಚನೆಗಳೇನು?

Auto

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜ್ಯ ವಿಧಾನಸಭೆ ಚುನಾವಣೆ (karnataka assembly election)ಗೆ ರಣಕಹಳೆ ಊದಿದ್ದೇ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆಟೋ ಮಾಲೀಕರಿಗೂ ಇದರ ಬಿಸಿ ತಟ್ಟಲಿದೆ.
ಈ ಕುರಿತು ಶಿವಮೊಗ್ಗ ಸಂಚಾರ ಠಾಣೆ (shimoga traffic police station) ಸಿಪಿಐ ಜಯಶ್ರೀ ಮಾನೆ (Jayashree) ಅವರು ನಗರದ ಆಟೋ ಚಾಲಕರು ಮತ್ತು ಮಾಲೀಕರ ಸಂಘಗಳ ಪದಾಧಿಕಾರಿಗಳ ಸಭೆಯನ್ನು ನಡೆಸಿ, ಈ ಕೆಳಕಂಡ ಸೂಚನೆಗಳನ್ನು ನೀಡಿದ್ದಾರೆ.

READREAD | ಶಿವಮೊಗ್ಗದಲ್ಲಿ‌ ಎಷ್ಟು ಮತದಾರರಿದ್ದಾರೆ? ಮತಗಟ್ಟೆಗಳೆಷ್ಟು? ಇಲ್ಲಿದೆ ಶಿವಮೊಗ್ಗ ಜಿಲ್ಲೆಯ ಎಲ್ಲ ಕ್ಷೇತ್ರಗಳ ಕಂಪ್ಲೀಟ್ ರಿಪೋರ್ಟ್ 

  1. ಯಾವುದೇ ಕಾರಣಕ್ಕೂ ಆಟೋಗಳ ಪರವಾನಗಿ ನಿಯಮಗಳನ್ನು ಉಲ್ಲಂಘನೆ ಮಾಡುವಂತಿಲ್ಲ. ಒಂದುವೇಳೆ ಉಲ್ಲಂಘನೆ ಮಾಡಿದ್ದಲ್ಲಿ ಕಾನೂನು ರೀತ್ಯಾ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
  2. ಆಟೋಗಳ ಮೇಲೆ ಯಾವುದೇ ರಾಜಕೀಯ ಪಕ್ಷಗಳ ಪರವಾಗಿ ಬ್ಯಾನರ್ ಮತ್ತು ಪೋಸ್ಟರ್ ಗಳನ್ನು ಅಂಟಿಸಿ ಪ್ರಚಾರ ಮಾಡುವಂತಿಲ್ಲ. ಒಂದುವೇಳೆ ಆಟೋಗಳನ್ನು ಯಾವುದಾದರೂ ರಾಜಕೀಯ ಉದ್ದೇಶಗಳಿಗಾಗಿ ಬಳಸಬೇಕಾದಲ್ಲಿ, ಕಡ್ಡಾಯವಾಗಿ ಸಂಬಂಧಪಟ್ಟ ಇಲಾಖೆಯಿಂದ ಸೂಕ್ತ ಅನುಮತಿಯನ್ನು ಪಡೆಯತಕ್ಕದ್ದು.
  3. ಆಟೋಗಳಲ್ಲಿ ಅಕ್ರಮವಾಗಿ ನಗದು ಹಣ, ಇತರೆ ವಸ್ತುಗಳನ್ನು ಯಾವುದೇ ಕಾರಣಕ್ಕೂ ಸಾಗಾಟ ಮಾಡಬಾರದು.
  4. ಆಟೋಗಳನ್ನು ಯಾವುದೇ ಕಾರಣಕ್ಕೂ ಮಾರ್ಪಡಿಸುವಂತಿಲ್ಲ. ಒಂದುವೇಳೆ ಮಾರ್ಪಡಿಸಿರುವುದು ಕಂಡುಬಂದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.
  5. ಪ್ರಯಾಣಿಕರ ಆಟೋಗಳಲ್ಲಿ ಯಾವುದೇ ರೀತಿಯ ಸರುಕುಗಳನ್ನು ಸಾಗಾಟ ಮಾಡದಂತೆ ಎಚ್ಚರವಹಿಸಬೇಕು.

ಸಭೆಯಲ್ಲಿ ಪೂರ್ವ ಸಂಚಾರಿ ಮತ್ತು ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ಪಿಎಸ್ಐ, ನಗರದ ಆಟೋ ಚಾಲಕರು ಮತ್ತು ಮಾಲೀಕರ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

MCC | ಏನಿದು ನೀತಿಸಂಹಿತೆ, ಏನೆಲ್ಲ ಮಾಡುವಂತಿಲ್ಲ, ಯಾವುದಕ್ಕೆ ವಿನಾಯಿತಿ ಇರಲಿದೆ?

error: Content is protected !!