Road show | ಶಿವಮೊಗ್ಗದಲ್ಲಿ ಹೇಗಿತ್ತು ಅಮಿತ್ ಶಾ ರೋಡ್ ಶೋ, ವಾಹನ ಬದಲಿಸಿದ್ದೇಕೆ?

amit shah 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕೇಂದ್ರ ಸಚಿವ ಅಮಿತ್ ಶಾ ಅವರು ನಗರದಲ್ಲಿ ಭರ್ಜರಿ ‌ರೋಡ್ ಶೋ ನಡೆಸಿದರು.
ಶಿವಪ್ಪ ನಾಯಕ‌ ವೃತ್ತದಿಂದ ಆರಂಭಗೊಂಡು ಅಮೀರ್ ಅಹಮದ್‌ ವೃತ್ತ, ಮೆಜರೂ ರಸ್ತೆ, ಗೋಪಿ ವೃತ್ತ, ಜೈಲು ರಸ್ತೆಯ ಮೂಲಕ ಸಾಗಿ ಲಕ್ಷ್ಮೀ‌ ಥಿಯೇಟರ್ ಮುಂದೆ ಸಂಪನ್ನಗೊಂಡಿತು.
ರೋಡ್ ಶೋಗೋಸ್ಕರ ವಾಹನವೊಂದನ್ನು ಸಿದ್ಧಪಡಿಸಲಾಗಿತ್ತು. ಆದರೆ, ಏಕಾಏಕಿ‌ ಅದನ್ನು ಗಾಂಧಿ ಬಜಾರ್ ರಸ್ತೆಯಲ್ಲಿ ನಿಲ್ಲಿಸಿ ಬೇರೆಯ ವಾಹನವನ್ನು ರೋಡ್ ಶೋಗೋಸ್ಕರ ಬಳಸಲಾಯಿತು. ಮುಂಚೆ ಬಳಸಲು‌ ಉದ್ದೇಶಿಸಿದ್ದ ವಾಹನಕ್ಕೆ ಪೂರಕ ಬೆಳಕು, ಧ್ವನಿವರ್ಧಕದ ವ್ಯವಸ್ಥೆ ಇರಲಿಲ್ಲ. ಹೀಗಾಗಿ, ಅತ್ಯಾಧುನಿಕ ವ್ಯವಸ್ಥೆ ಹೊಂದಿದ್ದ ವಾಹನ ಬಳಸಲಾಯಿತು.
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಪಕ್ಷದ ಅಭ್ಯರ್ಥಿ ಚನ್ನಬಸಪ್ಪ, ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಉಪಸ್ಥಿತರಿದ್ದರು.
ಈ‌ ಸಂದರ್ಭದಲ್ಲಿ ಮಾತನಾಡಿದ‌ ಅಮಿತ್ ಶಾ, ಮತ್ತೊಮ್ಮೆ ಡಬಲ್‌‌ ಇಂಜಿನ್ ಸರ್ಕಾರಕ್ಕೆ‌ಅವಕಾಶ ಮಾಡಿಕೊಡಬೇಕು. ರಾಜ್ಯದಲ್ಲಿ ಪೂರ್ಣ ಬಹುಮತ ನೀಡಬೇಕೆಂದು ಮನವಿ ಮಾಡಿದರು.

Launch | ಶರಾವತಿ ಹಿನ್ನೀರಲ್ಲಿ ತಪ್ಪಿದ ಭಾರೀ ದುರಂತ, ನೀರಿಗೆ ಬಿದ್ದ ಲಾಂಚ್ ಸಿಬ್ಬಂದಿ

error: Content is protected !!