Launch | ಶರಾವತಿ ಹಿನ್ನೀರಲ್ಲಿ ತಪ್ಪಿದ ಭಾರೀ ದುರಂತ, ನೀರಿಗೆ ಬಿದ್ದ ಲಾಂಚ್ ಸಿಬ್ಬಂದಿ

sharavathi launch

 

 


ಕಣಜ.ಕಾಂ ಸಾಗರ
SAGAR: ಶರಾವತಿ ಹಿನ್ನೀರಿನಲ್ಲಿ ಹಸಿರುಮಕ್ಕಿ‌ ಲಾಂಚ್ (Hasirumakki launch)ನ ಡೋರ್ ಕೇಬಲ್ ಕಟ್ ಆದ ಪರಿಣಾಮ ಸಿಬ್ಬಂದಿ ಬೈಕ್ ಸಮೇತ ಹಿನ್ನೀರಿಗೆ ಬಿದ್ದ ಘಟನೆ ಸಂಭವಿಸಿದೆ.
ಕೆ.ಬಿ.ವೃತ್ತದ ಕಡೆಯಿಂದ ಸಾಗರ ಕಡೆ ವಾಹನ ದಾಟುತ್ತಿದ್ದಾಗ ಘಟನೆ ಸಂಭವಿಸಿದ್ದು, ಲಾಂಚ್ ನಲ್ಲಿ ಭಾರೀ‌ ಪ್ರಮಾಣ ವಾಹನಗಳಿದ್ದವು.

READ | ಶಿವಮೊಗ್ಗದಲ್ಲಿ‌ ಇಂದು ಅಮಿತ್ ಶಾ ರೋಡ್ ಶೋ, ಈ ರಸ್ತೆ‌ ಮಧ್ಯಾಹ್ನ ಬಳಿಕ ಪೂರ್ತಿ ಬಂದ್

ಸಂಜೆಯವರೆಗೆ ಲಾಂಚ್ ನಲ್ಲೇ ಬಂಧಿ
ದಡ ಸೇರುವುದು ಇನ್ನೂ 20 ಮೀಟರ್ ಅಷ್ಟೇ ಇತ್ತು. ಆಗ ಡೋರ್ ಕೇಬಲ್ ಕಟ್ ಆಗಿದೆ. ನೀರಿಗೆ ಬಿದ್ದ ಸಿಬ್ಬಂದಿ ಈಜಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ. ಘಟನೆ ನಡೆದಾಗ ಲಾಂಚ್ ನಲ್ಲಿ 10ಕ್ಕೂ ಹೆಚ್ಚು ಕಾರುಗಳು, ಬೈಕ್ ಗಳಿದ್ದವು.
ಈ‌ ಘಟನೆಯಿಂದಾಗಿ ಲಾಂಚ್ ನಲ್ಲಿದ್ದ ವಾಹನಗಳನ್ನು ಇಳಿಸಲು ಸಾಧ್ಯವಾಗಿಲ್ಲ. ಸಂಜೆಯವರೆಗೆ ಅನಿವಾರ್ಯವಾಗಿ ಲಾಂಚ್ ನಲ್ಲೇ‌‌ ಇರಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ನಂತರ, ಹಲಗೆಯ ಸಹಾಯದಿಂದ ವಾಹನಗಳನ್ನು ಕೆಳಗಿಳಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿವೆ.

Helicopter inspection | ಬಿ.ಎಸ್.ಯಡಿಯೂರಪ್ಪ ಹೆಲಿಕಾಪ್ಟರ್ ಪರಿಶೀಲನೆ, ಕಾರಣವೇನು?

error: Content is protected !!