Raid on spa | ಶಿವಮೊಗ್ಗದ ಸ್ಪಾ ಮೇಲೆ ಪೊಲೀಸರ ದಿಢೀರ್ ದಾಳಿ, ಮುಂದೇನಾಯ್ತು?

police

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ವಿನೋಬ ನಗರದ ಸ್ಪಾವೊಂದರ ಮೇಲೆ ಪೊಲೀಸರು ಶನಿವಾರ ದಿಢೀರ್ ದಾಳಿ ನಡೆಸಿದ್ದಾರೆ.
ಸ್ಪಾದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದಾಗಿ ಬಂದ ಆರೋಪದ‌ ಹಿನ್ನೆಲೆಯಲ್ಲಿ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಆರ್.ಎನ್.ಬಿಂದು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

READ | ಖಾಸಗಿ ವಿಡಿಯೋ ಎಡಿಟ್ ಮಾಡಿ ಮಾನಸಿಕ ಹಿಂಸೆ, ಆರೋಪಿ ವಿರುದ್ಧ ದಾಖಲಾಯ್ತು ಕೇಸ್

ಶಿವಮೊಗ್ಗದಲ್ಲಿ ಎರಡನೇ ದಾಳಿ
ಇತ್ತೀಚೆಗಷ್ಟೇ ಕುವೆಂಪು ರಸ್ತೆಯಲ್ಲಿದ್ದ ಸ್ಪಾ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಘಟನೆ ಮಾಸುವ ಮುನ್ನವೇ ಬೇರೊಂದು ಸ್ಪಾ ಮೇಲೆ ದಾಳಿ ನಡೆದಿದೆ.
ವೇಶ್ಯಾವಾಟಿಕೆ ನಡೆಸುತ್ತಿರುವ ಆರೋಪದ ಮೇರೆಗೆ Immoral Traffic Prevention Act 1956 ರೀತ್ಯಾ ಪ್ರಕರಣ ದಾಖಲಿಸಿಕೊಂಡು ಸ್ಪಾದ ಮೇಲೆ ದಾಳಿ ಮಾಡಲಾಗಿದೆ. ಸಂತ್ರಸ್ತ ಯುವತಿಯರನ್ನು ರಕ್ಷಿಸಿದ್ದು, ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!