Area Domination | ರಾತ್ರೋರಾತ್ರಿ ಪೊಲೀಸರ ಕಾರ್ಯಾಚರಣೆ, 66 ಪ್ರಕರಣ ದಾಖಲು

Doddapete

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ (shimoga) ಮತ್ತು ಭದ್ರಾವತಿ(Bhadravathi)ಯಲ್ಲಿ ರಾತ್ರೋರಾತ್ರಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಸಾರ್ವಜನಿಕ ಸ್ಥಳದಲ್ಲಿ ಜನರಿಗೆ ಕಿರುಕುಳ ನೀಡುತ್ತಿದ್ದರೆನ್ನಲಾದವರ ವಿರುದ್ಧ ಲಘು‌ ಪ್ರಕರಣ ದಾಖಲಿಸಿದ್ದಾರೆ.

READ | ಶಿವಮೊಗ್ಗದಿಂದ ಹೊರಡುವ ವಿಮಾನಗಳ ವೇಳಾಪಟ್ಟಿ, ಮೊದಲು ದಿನದ ಟೈಂ ಟೇಬಲ್ ಏನು?

ಸೋಮವಾರ ರಾತ್ರಿ ಶಿವಮೊಗ್ಗ-ಎ, ಶಿವಮೊಗ್ಗ-ಬಿ ಮತ್ತು ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಪೊಲೀಸ್ ಠಾಣೆಗಳ ಪೊಲೀಸ್ ನಿರೀಕ್ಷಕರು, ಪೋಲಿಸ್ ಉಪ ನಿರೀಕ್ಷಕರು ಮತ್ತು ಸಿಬ್ಬಂದಿ ತಂಡವು ಆಯಾ ಠಾಣಾ ವ್ಯಾಪ್ತಿಯ ಹೊರವಲಯ ಮತ್ತು ಖಾಲಿ ಸ್ಥಳಗಳಲ್ಲಿ Area Domination ವಿಶೇಷ ಗಸ್ತು ಮಾಡಿದ್ದು, ಈ ವೇಳೆ ಪಬ್ಲಿಕ್ ನ್ಯೂಸೆನ್ಸ್ (Public Nuisance) ಮಾಡುವ ಮತ್ತು ಅನುಮಾನಸ್ಪಾದ ವ್ಯಕ್ತಿಗಳನ್ನು ಠಾಣೆಗೆ ಕರೆತಂದು, ಅವರುಗಳ ಪೂರ್ವಾಪರಗಳನ್ನು ಪರಿಶೀಲಿಸಿ, Public Nuisance ಮಾಡಿದ ವ್ಯಕ್ತಿಗಳ ವಿರುದ್ದ ಒಟ್ಟು 66 ಲಘು ಪ್ರಕರಣಗಳನ್ನು ಮತ್ತು 2 ಐಎಂವಿ ಕಾಯ್ದೆ ಪ್ರಕರಣಗಳನ್ನು ದಾಖಲಿಸಲಾಗಿದೆ.

Smart Traffic | ಹೊಸ ತಂತ್ರಜ್ಞಾನದಿಂದ ಮೊದಲ ದಿನವೇ ಟ್ರಾಫಿಕ್ ನಿಯಮ ಉಲ್ಲಂಘನೆಯ ಭರ್ಜರಿ ಕೇಸ್, ದಾಖಲಾದ ಕೇಸ್ ಗಳೆಷ್ಟು?

error: Content is protected !!