ABVP Protest | ಪಿಜಿ, ಯುಜಿ ವಿದ್ಯಾರ್ಥಿಗಳ ಕೈಸೇರದ ಸ್ಕಾಲರ್ ಶಿಪ್, ಸಿಡಿದೆದ್ದ ಎಬಿವಿಪಿ

ABVP0

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದಲ್ಲಿ ಅಖಿಲ‌ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆಗಿಳಿಯಿತು. ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು.

READ | ಕೇಂದ್ರೀಯ ಉಗ್ರಾಣ ನಿಗಮದಲ್ಲಿ ಉದ್ಯೋಗ ಅವಕಾಶ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಮನವಿ ಪತ್ರದಲ್ಲಿ ಏನಿದೆ?

  • ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿ ವೇತನವನ್ನು ತಕ್ಷಣವೇ ಬಿಡುಗಡೆ ಮಾಡಬೇಕು.
  • 2022-23ನೇ ಸಾಲಿನಲ್ಲಿ ವ್ಯಾಸಂಗವನ್ನು ಮಾಡುತ್ತಿರುವ ಸ್ನಾತಕ ಮತ್ತು ಸ್ನಾತಕೋತ್ತರ (UG PG Scholarships) ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳಿಗೆ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲಾಗಿದೆ. ಇದರ ಜೊತೆಗೆ ರೈತ ವಿದ್ಯಾನಿಧಿ ವಿದ್ಯಾರ್ಥಿವೇತನಕ್ಕೂ ಸಾವಿರಾರು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಆದರೆ ರಾಜ್ಯದಲ್ಲಿ ಯಾವ ವಿದ್ಯಾರ್ಥಿಗೂ ಕೂಡ ಇನ್ನೂ ವೇತನ ಸಿಕ್ಕಿಲ್ಲ. ಕೂಡಲೇ‌ ಮಂಜೂರು ಮಾಡಿ.
  • ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಆರ್ಥಿಕವಾಗಿ ಉಪಯೋಗವಾಗುತ್ತಿದ್ದ ಈ ವೇತನ ಇನ್ನೂ ಸಿಗದಿರುವುದು ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಆದ್ದರಿಂದ ಸರ್ಕಾರ ತಕ್ಷಣವೇ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಬೇಕು.

ಎಬಿವಿಪಿ ಜಿಲ್ಲಾ ಸಂಚಾಲಕ ವಿಧಾತ್ರಿ ಹೆಬ್ಬಾರ್, ಪ್ರಮುಖರಾದ ಪ್ರವೀಣ್, ಶರಣ, ಅಭಿಷೇಕ್, ಪುನೀತ್, ಯಶಸ್ವಿನಿ, ಧರಣಿ, ಅಶ್ವತ್, ಅರುಣ್, ಕಾರ್ತಿಕ್, ರಘುನಂದನ್, ಸಚಿನ್ ಲೋಹಿತ್, ಸಿಂಚನ ಮತ್ತಿತರರಿದ್ದರು.

Anna Bhagya | ಅನ್ನ ಭಾಗ್ಯ ಯೋಜನೆ ಅಡಿ ಶಿವಮೊಗ್ಗದಲ್ಲಿ ಒಂದೇ ತಿಂಗಳಲ್ಲಿ ಕೋಟಿ- ಕೋಟಿ ಹಣ ಫಲಾನುಭವಿಗಳ‌ ಖಾತೆಗೆ ಜಮಾ!

error: Content is protected !!