DJ Ban | ಗಣೇಶ ವಿಸರ್ಜನೆ, ಈದ್ ಮಿಲಾದ್’ಗೆ ಡಿಜೆ ಬಳಸುವಂತಿಲ್ಲ, ಡಿಸಿ ಆದೇಶದಲ್ಲಿ ಏನಿದೆ?

DJ Ban

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಗಣೇಶ ಮೆರವಣಿಗೆ ಮತ್ತು ಈದ್ ಮಿಲಾದ್ ಹಬ್ಬದಲ್ಲಿ ಡಿಜೆ ಬಳಸುವ ಸಂಬಂಧ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಶನಿವಾರ ಇತಿಶ್ರೀ ಹಾಡಿದ್ದಾರೆ.

READ | ಹಿಂದೂ ಮಹಾಸಭಾ ಗಣೇಶನ ಈ ಸಲದ ಥೀಮ್ ಏನು? ವೈರಲ್ ಆಯ್ತು ವಿಡಿಯೋ

Dr R Selvamani
ಆದೇಶದಲ್ಲಿ ಏನಿದೆ?
ಗಣೇಶ ಚತುರ್ಥಿ ಹಬ್ಬದ ಆಚರಣೆ ಪ್ರಯುಕ್ತ ವಿವಿಧ ದಿನಾಂಕಗಳಂದು ಗಣೇಶ ವಿಸರ್ಜನೆ ವೇಳೆ ಮುಂಜಾಗ್ರತ ಕ್ರಮವಾಗಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಸೆ.18ರಿಂದ ಗಣೇಶೋತ್ಸವ ಆಚರಣೆಗಳು ಪೂರ್ಣಗೊಳ್ಳುವವರೆಗೆ ಹಾಗೂ ಸೆ.28 ರಿಂದ ಸೆ30ರವರೆಗೆ ಈದ್ ಮಿಲಾದ್ ಹಬ್ಬದ ಆಚರಣೆಗಳು ಪೂರ್ಣಗೊಳ್ಳುವವರೆಗೆ ಶಿವಮೊಗ್ಗ ಜಿಲ್ಲೆಯಾದ್ಯಂತ ಡಿ.ಜೆ ಸಿಸ್ಟಂ ಬಳಕೆ ನಿಷೇಧÀಗೊಳಿಸಿ ಆದೇಶಿಸಿದ್ದಾರೆ.

error: Content is protected !!