Kuvempu university | ಪರೀಕ್ಷೆ ಬರೆದ 48 ಗಂಟೆಯೊಳಗೆ ರಿಸಲ್ಟ್ ಪ್ರಕಟ, ದಾಖಲೆ ಬರೆದ ಕುವೆಂಪು ವಿವಿ

Kuvempu university

 

 

ಸುದ್ದಿ‌ ಕಣಜ.ಕಾಂ ಶಿವಮೊಗ್ಗ
SHIVAMOGGA: ಕುವೆಂಪು ವಿಶ್ವವಿದ್ಯಾಲಯ ಶೈಕ್ಷಣಿಕವಾಗಿ ನಿರಂತರ ದಾಖಲೆಗಳನ್ನು ಬರೆಯುತ್ತಲೇ ಬರುತ್ತಿದೆ. ಅದರ ಸಾಲಿಗೆ ಗುರುವಾರ ಮತ್ತೊಂದು ದಾಖಲೆ ಸೇರಿದೆ. ವಿವಿಯು ಪರೀಕ್ಷೆ ಬರೆದು 24 ಗಂಟೆಯೊಳಗೆ ಫಲಿತಾಂಶ ಪ್ರಕಟಿಸಿದೆ.

Prof SM Gopinath

ವಿಶ್ವವಿದ್ಯಾಲಯ ವ್ಯಾಪ್ತಿಯ ಬಿಸಿಎ ಪದವಿಯ ಅಂತಿಮ ವರ್ಷದ ಪರೀಕ್ಷಾ ಫಲಿತಾಂಶವನ್ನು ಶೀಘ್ರವಾಗಿ ಪ್ರಕಟಿಸಲು ವಿವಿಯ ಪರೀಕ್ಷಾಂಗ ಸಿಬ್ಬಂದಿ, ಬೋಧಕ ವರ್ಗ ಸಾಕಷ್ಟು ಶ್ರಮಿಸಿದೆ. ಅವರ ಸಹಕಾರದಿಂದ ತ್ವರಿತವಾಗಿ ಫಲಿತಾಂಶ ನೀಡಿ ವಿದ್ಯಾರ್ಥಿಗಳಿಗೆ ಮುಂದಿನ ವ್ಯಾಸಂಗ, ಉದ್ಯೋಗಕ್ಕೆ ಅಗತ್ಯ ನೆರವು ನೀಡಲಾಗಿದೆ.
ಪ್ರೊ.ಎಸ್.ಎಂ. ಗೋಪಿನಾಥ್, ಪರೀಕ್ಷಾಂಗ ಕುಲಸಚಿವ

ಕುವೆಂಪು ವಿಶ್ವವಿದ್ಯಾಲಯದ ಬ್ಯಾಚಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ (ಬಿಸಿಎ) ಪದವಿಯ 5 ಮತ್ತು 6ನೇ ಸೆಮಿಸ್ಟರ್ ಗಳ ಪರೀಕ್ಷೆ ಮುಗಿದು 48 ತಾಸಿನೊಳಗೆ ಫಲಿತಾಂಶ ಪ್ರಕಟಿಸಿ ವಿವಿಯು ಶೈಕ್ಷಣಿಕ ದಾಖಲೆ ಸೃಷ್ಟಿಸಿದೆ.

READ |  ಬರಪೀಡಿತ ಪ್ರದೇಶಗಳ ಪಟ್ಟಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ, ಶಿವಮೊಗ್ಗದ ಯಾವ್ಯಾವ ತಾಲೂಕುಗಳು ಯಾವ ಪಟ್ಟಿಯಲ್ಲಿವೆ?

ಶೀಘ್ರ ಮೌಲ್ಯಮಾಪನಕ್ಕೆ ವಿವಿಯು ಈಗಾಗಲೇ ಹೆಸರಾಗಿದ್ದು ಹಿಂದೆಯೂ ಶೀಘ್ರವಾಗಿ ಫಲಿತಾಂಶ ನೀಡಿ ವಿದ್ಯಾರ್ಥಿಗಳಿಗೆ ನೆರವಾಗಿತ್ತು. ಪ್ರಸ್ತುತ ನಾನ್-ಎನ್.ಇ.ಪಿ. ಬ್ಯಾಚ್ ನ ಬಿಸಿಎ ಪದವಿಯ 5 ಮತ್ತು 6ನೇ ಸೆಮಿಸ್ಟರ್ ಗಳ ಫಲಿತಾಂಶವನ್ನು ಪರೀಕ್ಷೆ ಮುಕ್ತಾಯಗೊಂಡ ಕೇವಲ 2 ದಿನಗಳೊಳಗೆ ಪ್ರಕಟಿಸಲಾಗಿದೆ.
ವಿದ್ಯಾರ್ಥಿಗಳ ಮೊಬೈಲಿಗೆ ಸಂದೇಶ
ಫಲಿತಾಂಶವು ವಿದ್ಯಾರ್ಥಿಗಳ ಪೋರ್ಟಲ್ ನಲ್ಲಿಯೂ ಸಹ ಲಭ್ಯವಿದೆ. ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ಸಂದೇಶದ ಮೂಲಕವೂ ತಲುಪಿಸಲಾಗಿದೆ.

error: Content is protected !!