Single Window | ಗಣೇಶ, ಈದ್ ಮಿಲಾದ್ ಹಬ್ಬಕ್ಕೆ ಧ್ವನಿವರ್ಧಕ, ಕರೆಂಟ್ ಬೇಕೆ? ಎಲ್ಲೆಲ್ಲಿ ಸಿಂಗಲ್ ವಿಂಡೋ ವ್ಯವಸ್ಥೆ ಲಭ್ಯ?

Single window

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: 2023ನೇ ಸಾಲಿನ ಗಣೇಶ ಹಬ್ಬ (Ganesh Festival) ಮತ್ತು ಈದ್ ಮಿಲಾದ್ (Eid Milad) ಹಬ್ಬದ ಪ್ರಯುಕ್ತ ಗಣಪತಿ ಸಮಿತಿ ಮತ್ತು ಈದ್ ಮಿಲಾದ್ ಸಮಿತಿಯವರು ಪೊಲೀಸ್ ಇಲಾಖೆಯಿಂದ ಧ್ವನಿವರ್ಧಕ ಪರವಾನಗಿಯನ್ನು ಮೆಸ್ಕಾಂ  (MESCOM) ಇಲಾಖೆಯಿಂದ ತಾತ್ಕಾಲಿಕ ವಿದ್ಯುತ್ ಸಂಪರ್ಕ ಮತ್ತು ಮಹಾನಗರ ಪಾಲಿಕೆ  (Shimoga city corporation) (ನಗರ ಪಾಲಿಕೆ/ ಪುರಸಭೆ/ ತಾಲೂಕು ಕಚೇರಿಯಿಂದ ಅನುಮತಿಯನ್ನು ಪಡೆಯುವುದು ಅವಶ್ಯಕವಿರುತ್ತದೆ. ಅದಕ್ಕಾಗಿ, ಸಿಂಗಲ್ ವಿಂಡೋ ವ್ಯವಸ್ಥೆಯನ್ನು ಮಾಡಲಾಗಿದೆ.

one click many news logo

READ | ಬಿ.ಎಚ್.ರಸ್ತೆಯ ಈ ಭಾಗದಲ್ಲಿ ವಾಹನ ನಿಲುಗಡೆಗೆ ನಿರ್ಬಂಧ, ಎಲ್ಲೆಲ್ಲಿ ನೋ ಪಾರ್ಕಿಂಗ್? ಕಾರಣವೇನು?

ವಿವಿಧ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಅನುಮತಿ ಪಡೆಯುವ ಕೆಲಸವನ್ನು ಸರಳಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡುವ ಉದ್ದೇಶದಿಂದ ಮೂರು ಇಲಾಖೆಯ ಅಧಿಕಾರಿಗಳು ಒಂದೇ ಸ್ಥಳದಲ್ಲಿ ಲಭ್ಯವಿರುವಂತೆ ಏಕಗವಾಕ್ಷಿ ವ್ಯವಸ್ಥೆಯನ್ನು ಈ ಕೆಳಕಂಡ ಸ್ಥಳಗಳಲ್ಲಿ ಪ್ರಾರಂಭಿಸಲಾಗಿದೆ. ಸಂಬಂಧಪಟ್ಟವರು ಸ್ಥಳಗಳಿಗೆ ಭೇಟಿ ನೀಡಿ ಅನುಕೂಲ ಪಡೆಯಬಹುದು.

ತಾಲೂಕು ಏಕಗವಾಕ್ಷಿ ಸ್ಥಳ ಪ್ರಾರಂಭಿಸುವ ದಿನಾಂಕ
ಶಿವಮೊಗ್ಗ ಮಹಾನಗರ ಪಾಲಿಕೆ ಕಚೇರಿ
ಏಕಗವಾಕ್ಷಿ 01 ಶಿವಮೊಗ್ಗ ಎ ಉಪ ವಿಭಾಗ
ಏಕಗವಾಕ್ಷಿ 02 ಶಿವಮೊಗ್ಗ ಬಿ ಉಪ ವಿಭಾಗ
07-09-2023
ಭದ್ರಾವತಿ ನಗರಸಭೆ ಕಚೇರಿ ಭದ್ರಾವತಿ ಪಟ್ಟಣ 06-09-2023
ಶಿಕಾರಿಪುರ ತಾಲೂಕು ಕಚೇರಿ 08-09-2023
ಸೊರಬ ತಾಲೂಕು ಕಚೇರಿ 08-09-2023
ಸಾಗರ ತಾಲೂಕು ಕಚೇರಿ 08-09-2023
ತೀರ್ಥಹಳ್ಳಿ ತಾಲೂಕು ಕಚೇರಿ 09-09-2023
ಹೊಸನಗರ ತಾಲೂಕು ಕಚೇರಿ 09-09-2023

Dacoit | ಲಿಫ್ಟ್ ನೀಡುವುದಾಗಿ ಕರೆದೊಯ್ದು ದರೋಡೆ, 24 ಗಂಟೆಯಲ್ಲೇ ಆರೋಪಿಗಳು ಅಂದರ್

error: Content is protected !!