ಸುದ್ದಿ ಕಣಜ.ಕಾಂ
ಶಿವಮೊಗ್ಗ: ಆಲ್ಕೋಳ ವಿದ್ಯುತ್ ವಿತರಣ ಕೇಂದ್ರದಿಂದ ಸರಬರಾಜು ಆಗುವ ಫೀಡರ್ ಎ.ಎಫ್ 8ರಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಕಾಮಗಾರಿ ಹಮ್ಮಿಕೊಂಡಿದ್ದು, ಮಾರ್ಚ್ 20ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ನಗರ ಉಪ ವಿಭಾಗ 3ರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಇದನ್ನೂ ಓದಿ | ಕೆಜಿಎಫ್ ಚಾಪ್ಟರ್ 2, ಯುವರತ್ನ ಉಚಿತವಾಗಿ ನೋಡುವ ಸುವರ್ಣಾವಕಾಶ
ಎಲ್ಲೆಲ್ಲಿ ಕರೆಂಟ್ ಕಟ್ | ಕಾಶೀಪುರ, ಹುಚ್ಚರಾಯ ಕಾಲೊನಿ, ವೀರಣ್ಣ ಲೇಔಟ್, ಲಕ್ಷ್ಮಿಪುರ, ಕುವೆಂಪು ಬಡಾವಣೆ, ರೇಣುಕಾಂಬ ಬಡಾವಣೆ, ಸೂಡಾ ಕಾಂಪ್ಲೆಕ್ಸ್, ವಿನೋಬನಗರ ಪೊಲೀಸ್ ಠಾಣೆ, ಕೆಂಚಪ್ಪ ಲೇಔಟ್, ಚೇತನಾ ಪಾರ್ಕ್, ಜಯದೇವ ಬಡಾವಣೆ, ಶಿವಪ್ಪ ನಾಯಕ ಬಡಾವಣೆ, ಕಟ್ಟೆ ಸುಬ್ಬಣ್ಣ ಕಾಂಪ್ಲೆಕ್ಸ್ ಸುತ್ತಲಿನ ಪ್ರದೇಶ.