Crime news | ಹೊಳೆ‌ ಬಸ್ ನಿಲ್ದಾಣದ ಬಳಿ ವ್ಯಕ್ತಿ‌ ಶವ ಪತ್ತೆ

Dead body

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸುಮಾರು 50 ರಿಂದ 55 ವಯಸ್ಸಿನ ಅನಾಮಧೇಯ ಪುರುಷ ಹೊಳೆ ಬಸ್ ನಿಲ್ದಾಣದ ಬಳಿ ಇರುವ ಮಾಂಡವಿ ಬಾರ್ ಹತ್ತಿರದ ಮೈತ್ರಿಕ ಕಾಂಪ್ಲೆಕ್ಸ್ ನ ಮೊದಲ ಮಳಿಗೆಯ ಫುಟ್‍ಪಾತ್ ಮೇಲೆ ಮಲಗಿದಲ್ಲಿಯೇ ಮೃತಪಟ್ಟಿದ್ದಾರೆ.

READ | ಶಿವಮೊಗ್ಗದಿಂದ ಇನ್ನೊಂದು ವಿಮಾನ ಹಾರಾಟಕ್ಕೆ ಗ್ರೀನ್ ಸಿಗ್ನಲ್, ಯಾವ ರೂಟಿನಲ್ಲಿ‌ ಸಂಚಾರ, ವೇಳಾಪಟ್ಟಿ ಇಲ್ಲಿದೆ

ಮೃತನು ಸುಮಾರು 5 ಅಡಿ 4 ಇಂಚು ಎತ್ತರ, ಎಣ್ಣೆಗೆಂಪು ಬಣ್ಣ ಹೊಂದಿದ್ದು, ತಲೆಯಲ್ಲಿ 4 ಇಂಚು ಉದ್ದದ ಕಪ್ಪು ಬಿಳಿ ಮಿಶ್ರಿತ ಕೂದಲು, 3 ಇಂಚು ಉದ್ದದ ಬಿಳಿ ಹಾಗೂ ಕಪ್ಪು ಮಿಶ್ರಿತ ಗಡ್ಡ ಇರುತ್ತದೆ. ಈತಹ ಬಲಗೈ ಮೇಲೆ ಎಂಪಿ ಹಾಗೂ ಓಂ ಮತ್ತು ಎಡಗೈ ಮೇಲೆ ಎಸ್.ಎಂ ಎಂಬ ಹಚ್ಚೆ ಗುರುತು ಇರುತ್ತದೆ. ಬಿಳಿ ಬಣ್ಣದ ನೀಲಿ ಹೂ ಮಿಶ್ರಿತ ತುಂಬು ತೋಳಿನ ಶರ್ಟ್, ಕಾಫಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಮೃತನ ಶವವನ್ನು ಮೆಗ್ಗಾನ್ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದೆ.
ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ಕೋಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

error: Content is protected !!