First Reaction | ರಾಗಿಗುಡ್ಡ ಕಲ್ಲು ತೂರಾಟ ಪ್ರಕರಣದ ಬಗ್ಗೆ ಸ್ಫೋಟಕ ಮಾಹಿತಿ ಹಂಚಿಕೊಂಡು ಶಾಸಕ ಚೆನ್ನಿ, ಗಂಭೀರ ಆರೋಪಗಳೇನು?

ragigudda cheeni

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ನಗರ ವಿಧಾನಸಭೆ ಕ್ಷೇತ್ರದ ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಮಾಧ್ಯಮದವರೊಂದಿಗೆ ಭಾನುವಾರ ರಾತ್ರಿ ಮಾತನಾಡಿದ್ದು, ರಾಗಿಗುಡ್ಡ ಕಲ್ಲು ತೂರಾಟ ಪ್ರಕರಣದ ಬಗ್ಗೆ ಸ್ಫೋಟಕ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ.  ರಾಗಿಗುಡ್ಡಕ್ಕೆ ಶಾಸಕರು ಭೇಟಿ ನೀಡಿ ಸಾರ್ವಜನಿಕರಿಗೆ ಧೈರ್ಯ ತುಂಬಿದರು. ಮೆಗ್ಗಾನ್ ಆಸ್ಪತ್ರೆಗೆ ದಾಖಲಾದ ಗಾಯಾಳುಗಳಿಗೆ ಚನ್ನಬಸಪ್ಪ ಅವರು ಭೇಟಿ ನೀಡಿ ಸಾಂತ್ವನ ಹೇಳಿದರು. ವೈದ್ಯರಿಂದ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು.

READ | ರಾಗಿಗುಡ್ಡದಲ್ಲಿ ಕಲ್ಲು ತೋರಾಟ, ಸೆಕ್ಷನ್ 144 ಜಾರಿ

ಪೊಲೀಸರು ಇಡೀ ಪ್ರಕರಣದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದಾರೆ. ಪರಿಸ್ಥಿತಿಯನ್ನು ತಹಬದಿಗೆ ತಂದಿದ್ದಾರೆ. ಪ್ರಕರಣದ ಸಮಗ್ರ ತನಿಖೆ ನಡೆಯಬೇಕು. ವಾಹನಗಳ ಬಗ್ಗೆ ಮಾಹಿತಿ ಪತ್ತೆ ಹಚ್ಚಬೇಕು. ಘಟನೆಯ ಹಿಂದೆ ಟಿಪ್ಪು ಕಟೌಟ್ ಗಲಾಟೆಯೂ ಕಾರಣವಿರಬಹುದು.
ಎಸ್.ಎನ್.ಚನ್ನಬಸಪ್ಪ, ಶಾಸಕ

ಶಾಸಕರು ಮಾಡಿದ ಆರೋಪಗಳೇನು?

  • ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟ ಪ್ರೀ ಪ್ಲ್ಯಾನ್ಡ್ ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ. ಮೆರವಣಿಗೆ ಮುಗಿಸಿಕೊಂಡು ಹೋದವರು ವಾಪಸ್ ಬಂದು ಕಲ್ಲು ತೋರಾಟ ನಡೆಸಿದ್ದಾರೆ. ಮನೆಗಳ ಮೇಲೆಯೂ ಕಲ್ಲು ತೂರಾಟ ಮಾಡಲಾಗಿದೆ. ಸ್ಥಳೀಯರ ಮೇಲೆ ಹಲ್ಲೆ ಮಾಡಲಾಗಿದೆ.
  • ಶಿವಮೊಗ್ಗ ನಗರಕ್ಕೆ ಕೆಎ 35, ಕೆಎ 19, ಯುಪಿಯಿಂದ ವಾಹನಗಳು ಕಳೆದ ಮೂರ್ನಾಲಕು ದಿನದಿಂದ ಬಂದಿವೆ. ಈ ವಾಹನಗಳನ್ನು ಪತ್ತೆ ಹಚ್ಚಿ ಸಮಗ್ರ ತನಿಖೆ ಕೈಗೊಳ್ಳಬೇಕು.
  • ರಕ್ಷಣೆ ಮಾಡುವವರು ಇದ್ದಾರೆ ಎಂದಾದರೆ ಬಾಲ ಬಿಚ್ಚುವವರೂ ಇರುತ್ತಾರೆ. ಅದು ಸಹಜ. ರಕ್ಷಣೆ ಕೊಡುವ ಮಾನಸಿಕತೆಯಲ್ಲಿ ಸರ್ಕಾರದ ಮಾತುಗಳಿವೆ. ಈ ಘಟನೆಯ ಹಿನ್ನೆಲೆಯ ಬಗ್ಗೆ ಸರ್ಕಾರವೂ ಯೋಚಿಸಬೇಕು.
  • ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ, ಓಂ ಗಣಪತಿ ಮೆರವಣಿಗೆ ಹಾಗೂ ಈದ್ ಮಿಲಾದ್ ಮೆರವಣಿಗೆ ಸೌಹಾರ್ದತೆಯಿಂದಲೇ ನಡೆದಿವೆ. ಆದರೆ, ಕೆಲವರು ಹುಳಿ ಹಿಂಡುವ ಕಾರಣಕ್ಕೆ ಕಲ್ಲು ತೂರಾಟ ನಡೆಸಿದ್ದಾರೆ.

 

error: Content is protected !!