Bike Wheeling | ಶಿವಮೊಗ್ಗದಲ್ಲಿ ಬೈಕ್ ವ್ಹೀಲಿಂಗ್, ಬಿತ್ತು ಭಾರೀ ದಂಡ, ಪೊಲೀಸರು ಹೇಳಿದ್ದೇನು?

Bike wheeling traffic

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಎನ್.ಆರ್.ಪುರ ರಸ್ತೆಯಲ್ಲಿ ಯುವಕನೊಬ್ಬ ದ್ವಿಚಕ್ರ ವಾಹನವನ್ನು ವ್ಹೀಲಿಂಗ್ ಮಾಡಿದ್ದು, ಈ ವಿಡಿಯೋ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಾಹನ ಮಾಲೀಕನಿಗೆ ಭಾರೀ ದಂಡ ವಿಧಿಸಲಾಗಿದೆ.
ಅತಿವೇಗ, ನಿರ್ಲಕ್ಷತನದಿಂದ ರೇಸಿಂಗ್ ಹಾಗೂ ವ್ಹೀಲಿಂಗ್ ಮಾಡುತ್ತಿರುವ ವೀಡಿಯೋ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಶಿವಮೊಗ್ಗ ಸಂಚಾರ ಪೊಲೀಸ್ ಠಾಣೆ ಸಿಪಿಐ ಸಂತೋಷ್ ಕುಮಾರ್, ಶಿವಮೊಗ್ಗ ಪೂರ್ವ ಸಂಚಾರಿ ಠಾಣೆ ಪಿಎಸ್.ಐ ನವೀನ್ ಕುಮಾರ್ ಮಠಪತಿ, ಸಿಬ್ಬಂದಿಯಾದ ಶ್ರೀನಿವಾಸ್ ಅವರು ದ್ವಿ ಚಕ್ರ ವಾಹನದ ಚಾಲಕ ನ್ಯೂ ಮಂಡ್ಲಿ ನಿವಾಸಿ ಸಾದಿಕ್ ಶೇಕ್(19), ಯುವಕನ ತಂದೆ ಹಾಗೂ ದ್ವಿ ಚಕ್ರ ವಾಹನ ಮಾಲೀಕ ಸಲೀಂ ಶೇಕ್(60) ಇವರನ್ನು ಪತ್ತೆ ಮಾಡಿ ಠಾಣೆಗೆ ಕರೆತಂದಿರುತ್ತಾರೆ.

READ | ಪೊಲೀಸರಿಂದ ವಿದ್ಯಾರ್ಥಿಗಳಿಗೆ ವಿನೂತನ ‘ತೆರೆದ ಮನೆ’ ಕಾರ್ಯಕ್ರಮ, ಏನಿದರ ಪ್ರಯೋಜನ?

9 ಸಾವಿರ ರೂ. ದಂಡ
ದ್ವಿಚಕ್ರ ವಾಹನದ ಚಾಲಕನು ಚಾಲನಾ ಪರವಾನಗಿ ಇಲ್ಲದೇ, ಹೆಲ್ಮೆಟ್ ಧರಿಸದೇ, ಅತಿವೇಗ ಮತ್ತು ನಿರ್ಲಕ್ಷತನದಿಂದ ಅಪಾಯಕಾರಿಯಾಗಿ ರೇಸಿಂಗ್ ಮತ್ತು ವ್ಹೀಲಿಂಗ್ ಮಾಡಿ ವಾಹನ ಚಾಲನೆ ಮಾಡಿರುವುದು ಕಂಡುಬಂದಿದ್ದು, ವಾಹನದ ಚಾಲಕ ಮತ್ತು ಮಾಲೀಕರ ವಿರುದ್ಧ ಐಎಂವಿ ಕಾಯ್ದೆಯ ಅಡಿಯಲ್ಲಿ 9000 ರೂ. ದಂಡ ವಿಧಿಸಿ ಕ್ರಮ ಕೈ ಗೊಳ್ಳಲಾಗಿರುತ್ತದೆ.
ವ್ಹೀಲಿಂಗ್ ಮಾಡುವುದು ಅಪರಾಧ
ವಾಹನಗಳನ್ನು ಅತಿವೇಗ ಮತ್ತು ನಿರ್ಲಕ್ಷತನದಿಂದ ಅಪಾಯಕಾರಿಯಾಗಿ ರೇಸಿಂಗ್ ಹಾಗೂ ವ್ಹೀಲಿಂಗ್ ಮಾಡುವುದು ಐಎಂವಿ ಕಾಯ್ದೆಯಡಿಯಲ್ಲಿ ಅಪರಾಧವಾಗಿದ್ದು, ಈ ರೀತಿ ಮಾಡುವುದು ಕಂಡು ಬಂದಿಲ್ಲಿ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!