Dacoit arrest | ದುರ್ಘಟನೆ ತಡೆದ ಖಾಕಿ, ಡಕಾಯಿತಿಗೆ ಹೊಂಚು ಹಾಕಿ‌ದ್ದ ನಾಲ್ವರು ಅರೆಸ್ಟ್, ಮಾರಕಾಸ್ತ್ರಗಳು ಸೀಜ್

Crime news

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಎನ್.ಟಿ ರಸ್ತೆ ಪಾಲಕ್ ಶಾದಿ ಮಹಲ್ ಪಕ್ಕದ ಖಾಲಿ ಜಾಗದಲ್ಲಿ ದರೋಡೆ ಮಾಡಲು‌ ಹೊಂಚು ಹಾಕಿ ಕುಳಿತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಭದ್ರಾವತಿಯ ಬಾಬಳ್ಳಿ ಗ್ರಾಮದ ದೇವರಾಜ್ (31), ಶಿವಮೊಗ್ಗದ ಕೋಟೆ ಗಂಗೂರಿನ‌ ಸಾಗರ್ ಅಲಿಯಾಸ್ ಶಬರೀಶ್(22), ಭದ್ರಾವತಿಯಬಭದ್ರಾ ಕಾಲೋನಿಯ ನಾಗರಾಜ ಅಲಿಯಾಸ್ ಕುಮಾರ್ (38), ಶಾಂತಿನಗರದ ಶ್ರೇಯಸ್(22) ಎಂಬುವವರನ್ನು ಬಂಧಿಸಲಾಗಿದೆ. ಆರೋಪಿತರಿಂದ ಕಬ್ಬಿಣದ ರಾಡು, ಮಚ್ಚು, ಖಾರದ ಪುಡಿ ಇದ್ದ ಕವರ್ ಮತ್ತು 2 ಸ್ಟೀಲ್ ಡ್ರಾಗನ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿತರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

READ |ಚಿಕ್ಕಮ್ಮನ ತಾಳಿಯನ್ನೇ ದೋಚಿದ್ದ ಭೂಪ 24 ಗಂಟೆಗಳಲ್ಲಿ ಅರೆಸ್ಟ್

ದುರ್ಘಟನೆ ತಡೆದ ಪೊಲೀಸ್
ದೊಡ್ಡಪೇಟೆ ಪೊಲೀಸ್ ಠಾಣೆಯ ಪಿಎಸ್ಐ ಶ್ರೀನಿವಾಸ್ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ‌ಅಪಾಯಕರವಾದ ಆಯುಧಗಳನ್ನು ಇಟ್ಟುಕೊಂಡು ಸಾರ್ವಜನಿಕರು ಮತ್ತು ವಾಹನಗಳನ್ನು ತಡೆದು, ಅವರನ್ನು ಹೆದರಿಸಿ ಅವರ ಬಳಿ ಇರುವ ನಗದು, ಬಂಗಾರದ ಆಭರಣಗಳನ್ನು ಕಿತ್ತುಕೊಳ್ಳಲು ಹೊಂಚು ಹಾಕುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

error: Content is protected !!