Route change | ಇಂದಿನಿಂದ 3 ದಿನ ಶಿವಮೊಗ್ಗ-ಚಿತ್ರದುರ್ಗ ತಾತ್ಕಾಲಿಕ ಮಾರ್ಗ ಬದಲಾವಣೆ, ಪರ್ಯಾಯ ಮಾರ್ಗದ ಮಾಹಿತಿ ಇಲ್ಲಿದೆ

Route change Road

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಷ್ಟ್ರೀಯ ಹೆದ್ದಾರಿ 369 ಕಿ.ಮೀ 509+860 ರಿಂದ 513+400 ರವರೆಗೆ ಹೊಳೆಹೊನ್ನೂರು ಪಟ್ಟಣದಲ್ಲಿನ ರಸ್ತೆಗೆ ಡಾಂಬರೀಕರಣ ಮಾಡಲು ನ.28 ರಿಂದ 30 ರವರೆಗೆ ಕಾಮಗಾರಿಯನ್ನು ನಡೆಸಬೇಕಾಗಿರುವುದರಿಂದ ಈ ಕೆಳಕಂಡಂತೆ ಬದಲಿ ರಸ್ತೆಯಲ್ಲಿ ವಾಹನಗಳು ತಾತ್ಕಾಲಿಕವಾಗಿ ಸಂಚಾರ ಮಾಡಲು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಆದೇಶಿಸಿದ್ದಾರೆ.

READ | ಎಚ್‍ಎಸ್‍ಆರ್‍ಪಿ ಗಡುವು ವಿಸ್ತರಣೆ, ಕೊನೆಯ ದಿನಾಂಕ ಯಾವುದು? ಇದುವರೆಗೆ ಎಷ್ಟು ಜನ ನಂಬರ್ ಪ್ಲೇಟ್ ಅಳವಡಿಸಿಕೊಂಡಿದ್ದಾರೆ?

ಪರ್ಯಾಯ ಮಾರ್ಗದ ಮಾಹಿತಿ
ಶಿವಮೊಗ್ಗದಿಂದ ಚಿತ್ರದುರ್ಗದ ಕಡೆಗೆ ಹೋಗುವ ವಾಹನಗಳು ಶಿವಮೊಗ್ಗ- ಹೊಳಲೂರು- ಮಂಗೋಟೆ- ಅರಹತೊಳಲು- ಕೈಮರ ಮೂಲಕ ಚಿತ್ರದುರ್ಗಕ್ಕೆ ಸಂಚರಿಸುವುದು.
ಚಿತ್ರದುರ್ಗದಿಂದ ಶಿವಮೊಗ್ಗ ಕಡೆಗೆ ಬರುವ ವಾಹನಗಳು ಕೈಮರದಿಂದ ಆನವೇರಿ ರಸ್ತೆಯ ಮುಖಾಂತರ ಮಂಗೋಟೆ, ಹೊಳಲೂರು ಮಾರ್ಗವಾಗಿ ಹಾಗೂ ಕೈಮರದಿಂದ ದಾಸರಕಲ್ಲಹಳ್ಳಿ- ಅಗಸನಹಳ್ಳಿ- ನಾಗತೀಬೆಳಗಲು- ತಳ್ಳಿಕಟ್ಟೆ- ಬಾಬಳ್ಳಿ- ಭದ್ರಾವತಿ ಮುಖಾಂತರ ಶಿವಮೊಗ್ಗ ಕಡೆಗೆ ಸಂಚರಿಸುವುದು.

error: Content is protected !!