HSRP | ಎಚ್.ಎಸ್.ಆರ್.ಪಿ ಗಡುವು ವಿಸ್ತರಣೆ, ಕೊನೆಯ ದಿನಾಂಕ ಯಾವುದು? ಇದುವರೆಗೆ ಎಷ್ಟು ಜನ ಅಳವಡಿಸಿಕೊಂಡಿದ್ದಾರೆ?

HSRP Plates

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ವಾಹನಗಳಿಗೆ ಎಚ್.ಎಸ್.ಆರ್.ಪಿ. ಅಳವಡಿಸಿಕೊಳ್ಳಲು (HSRP Fitting) ನ.17 ಕೊನೆಯ ದಿನವಾಗಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಸಾರ್ವಜನಿಕರಿಂದ ಪ್ರತಿಕ್ರಿಯೆ ವ್ಯಕ್ತವಾಗದ್ದಕ್ಕೆ ಫೆಬ್ರವರಿ 17ರವರೆಗೆ ಕಾಲವಕಾಶ ನೀಡಲಾಗಿದೆ.
ರಾಜ್ಯದಲ್ಲಿ 2017ರ ಏಪ್ರಿಲ್ 1ಕ್ಕೂ ಮುನ್ನ ನೋಂದಣಿಯಾಗಿರುವ ವಾಹನಗಳಿಗೆ ಕಡ್ಡಾಯವಾಗಿ ಅತಿ ಸುರಕ್ಷಿತ ನೋಂದಣಿ ಫಲಕ (High Security Registration Plate-HSRP) ಅಳವಡಿಸಿಕೊಳ್ಳುವಂತೆ ಗಡುವು ನೀಡಿ ಸಾರಿಗೆ ಇಲಾಖೆ ಆದೇಶಿಸಿತ್ತು. ಈ ದಿನಾಂಕವನ್ನೇ ಈಗ ಮುಂದೂಡಲಾಗಿದೆ.

READ | ಎಚ್.ಎಸ್.ಆರ್.ಪಿ. ನೋಂದಣಿಗೆ ಹೇಗೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ

ಜನರಲ್ಲಿ ಸಾಕಷ್ಟು ಗೊಂದಲ
ಎಚ್.ಎಸ್.ಆರ್.ಪಿ ನೋಂದಣಿ ಮಾಡುವುದು ಹೇಗೆ? (HSRP number plate ) ಎಲ್ಲಿ ಈ ಫಲಕಗಳು ಸಿಗುತ್ತವೆ? ಯಾರು ಅದನ್ನು ಅಳವಡಿಸಿಕೊಡುತ್ತಾರೆ? ಇತ್ಯಾದಿ ವಿಷಯಗಳ ಬಗ್ಗೆ ವಾಹನ ಮಾಲೀಕರಲ್ಲಿ ಈಗಲೂ ಗೊಂದಲ ಮುಂದುವರಿದಿದೆ. ಸಾರಿಗೆ ಇಲಾಖೆ ಸಾಕಷ್ಟು ಪ್ರಚಾರ ಮಾಡಿದ ಬಳಿಕವೂ ಜನರಲ್ಲಿ ಗೊಂದಲ ಮುಂದುವರಿದಿದೆ. ಜೊತೆಗೆ, ಗ್ರಾಮೀಣ ಭಾಗದಲ್ಲಿ ನೆಟ್ವರ್ಕ್ ಸಮಸ್ಯೆ ಇರುವುದರಿಂದ ಆನ್ ಲೈನ್ ನಲ್ಲಿ ಎಚ್.ಎಸ್.ಆರ್.ಪಿ ಬುಕಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ಅದರಲ್ಲೂ ಮಲೆನಾಡಿನ ಜಿಲ್ಲೆಗಳಲ್ಲಿ ನೆಟ್ವರ್ಕ್ ಸಮಸ್ಯೆ ಇದಕ್ಕೆ ಅಡ್ಡಿ ಉಂಟು ಮಾಡುತ್ತಿದೆ.
4.50 ಲಕ್ಷವಷ್ಟೇ ನೋಂದಣಿ
ಕರ್ನಾಟಕದಲ್ಲಿ ಒಟ್ಟು 2 ಕೋಟಿಯಷ್ಟು ಹಳೆಯ ವಾಹನಗಳಿವೆ. ಅದರಲ್ಲಿ ಇದುವರೆಗೆ ಎಚ್.ಎಸ್.ಆರ್.ಪಿ ಮಾಡಲು ಸಾಧ್ಯವಾಗಿದ್ದು ಬರೀ 4.50 ಲಕ್ಷ ಮಾತ್ರ. ಸಾರಿಗೆ ಇಲಾಖೆ ಹೊಸದಾಗಿ ಯೋಜನೆ ಘೋಷಿಸಿದ್ದೇ ಭಾರಿ ಸ್ಪಂದನೆ ದೊರಕಬಹುದು ಎಂದುಕೊಂಡಿತ್ತು. ಆದರೆ, ಹೇಳಿಕೊಳ್ಳುವ ಜನಸ್ಪಂದನೆ ಸಿಕ್ಕಿಲ್ಲ. ಇದಕ್ಕಾಗಿ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ.

error: Content is protected !!