Yuva nidhi | ಯುವನಿಧಿ ನೋಂದಣಿಗೆ ಏನೆಲ್ಲ ದಾಖಲೆ ಬೇಕು? ಇಲ್ಲಿದೆ ಪ್ರಮುಖ ಮಾಹಿತಿ

Yuva nidhi

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜ್ಯ ಸರ್ಕಾರ ಜ.12ರಂದು ವಿವೇಕಾನಂದ ಜಯಂತಿಯಂದು ಯುವನಿಧಿ ಕಾರ್ಯಕ್ರಮವನ್ನು ನಗರದ ಫ್ರೀಡಂ ಪಾರ್ಕ್ ನಲ್ಲಿ ಉದ್ಘಾಟಿಸಲಿದೆ.
ನೋಂದಾಯಿತ ಅಭ್ಯರ್ಥಿಗಳು ಮಾಸಿಕವಾಗಿ ನಿರುದ್ಯೋಗಿ ಎಮದು ಸೇವಾ ಸಿಂಧು ಪೋರ್ಟಲ್ ನಲ್ಲಿ ದೃಢೀಕರಿಸುವುದು ಕಡ್ಡಾಯ.
ಇದೇ ಜನವರಿ 12ರಂದು ನಗರದ ಫ್ರೀಡಂ ಪಾರ್ಕ್ ಆವರಣದಲ್ಲಿ ನಡೆಯಲಿರುವ ಸರ್ಕಾರದ 5ನೇ ಗ್ಯಾರಂಟಿ ಯೋಜನೆ ಯುವನಿಧಿಗೆ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಶಿಕ್ಷಣ ಸಚಿವ ಮಧು ಎಸ್.ಬಂಗಾರಪ್ಪ ಅವರು ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಸಚಿವರು ಸರ್ಕಾರದ ಕಾರ್ಯದರ್ಶಿಗಳು ಹಾಗೂ ಮುಖಂಡರುಗಳು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ.

JOBS FB Link

READ | ಶಿವಮೊಗ್ಗದಲ್ಲಿ ಹೊಸ ಹುದ್ದೆಗಳ ಸೃಷ್ಟಿ, ಭರ್ತಿಗೆ ಅರ್ಜಿಗಳ ಆಹ್ವಾನ, ಯಾರಿಗೆಲ್ಲ ಅವಕಾಶ?

ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಯುವಜನತೆಯ ಉಜ್ವಲ ಭವಿಷ್ಯಕ್ಕಾಗಿ ರಾಜ್ಯ ಸರ್ಕಾರದ 5 ನೇ ಗ್ಯಾರಂಟಿ ಯೋಜನೆಯಾದ ‘ಯುವನಿಧಿ’ ಯೋಜನೆಗೆ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು 2022-23 ರಲ್ಲಿ ಪದವಿ, ಡಿಪೆÇ್ಲಮಾ ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು https://sevasindhugs.karnataka.gov.in  ಗೆ ಭೇಟಿ ನೀಡಿ ಅಥವಾ ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರಗಳಲ್ಲಿ ಯೋಜನೆಗೆ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು.
2023 ರಲ್ಲಿ ಪದವಿ, ಡಿಪ್ಲೋಮಾ ಉತ್ತೀರ್ಣರಾಗಿ ಕನಿಷ್ಠ 6 ತಿಂಗಳ ಅವಧಿಯವರೆಗೆ ಸರ್ಕಾರಿ/ ಖಾಸಗಿ ಉದ್ಯೋಗ, ಸ್ವಯಂ ಉದ್ಯೋಗ ಹೊಂದಿಲ್ಲದವರು, ಉನ್ನತ ವಿದ್ಯಾಭ್ಯಾಸ ಮುಂದುವರೆಸದೇ ಇರುವ, ಕರ್ನಾಟಕದಲ್ಲಿ ವಾಸವಿರುವವರು ‘ಯುವನಿಧಿ’ ಯೋಜನೆಯಡಿ ನೋಂದಾಯಿಸಲು ಅರ್ಹರಾಗಿರುತ್ತಾರೆ.
ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ, ಡಿಪೆÇ್ಲಮಾ ಪ್ರಮಾಣಪತ್ರ, ಆಧಾರ್ ಕಾರ್ಡ್, ಪಡಿತರ ಚೀಟಿ ಅಭ್ಯರ್ಥಿಯ ಬ್ಯಾಂಕ್ ಪಾಸ್ ಪುಸ್ತಕ, ಇತ್ಯಾದಿ ದಾಖಲಾತಿಗಳೊಂದಿಗೆ ಹತ್ತಿರದ ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು. ಮಾಹಿತಿಗೆ ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ದೂ. ಸಂ: 08182-255293 ಸಂಪರ್ಕಿಸಿ.
ನೋಂದಣಿಗೆ ಅಗತ್ಯ ದಾಖಲೆಗಳು
ಪ್ರಮಾಣ ಪತ್ರಗಳು: ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ/ ಡಿಪ್ಲೋಮಾ
ಆಧಾರ್ ವಿವರಗಳು: ಆಧಾರ್ ಕಾರ್ಡ್, ಆಧಾರ್ ಸೀಡೆಡ್ ಬ್ಯಾಂಕ್ ಖಾತೆ, ಆಧಾರ್ ಲಿಂಕ್ಡ್ ಮೊಬೈಲ್ ಸಂಖ್ಯೆ.
ಸಹಾಯವಾಣಿ: 1800 599 9918

error: Content is protected !!