ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಈ ವರ್ಷದ ಮೊದಲ ಬಲಿಯಾಗಿದೆ. ಇದುವರೆಗೆ ಎರಡು ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ ಒಬ್ಬ ಯುವತಿ ಮೃತಪಟ್ಟಿದ್ದಾಳೆ. 2020ರ ನಂತರ ಇದು ಮೊದಲನೇ ಸಾವಾಗಿದ್ದು, ಸ್ಥಳೀಯರ ಭೀತಿಗೆ ಕಾರಣವಾಗಿದೆ.
ಹೊಸನಗರ ತಾಲೂಕಿನ ಅರಮನೆಕೊಪ್ಪ ವ್ಯಾಪ್ತಿಯ ಗ್ರಾಮದಲ್ಲಿ ಪ್ರಕರಣ ಪತ್ತೆಯಾಗಿದ್ದು, ಇದು 2014ರ ನಂತರ ಇಲ್ಲಿ ಕೆ.ಎಫ್.ಡಿ ಪತ್ತೆಯಾಗಿರಲಿಲ್ಲ. ಸುತ್ತಮುತ್ತ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ.
READ | ಶಿವಮೊಗ್ಗದಲ್ಲಿ ಕೆಎಫ್ಡಿಗೆ ಯುವತಿ ಬಲಿ, ನಾಲ್ಕು ವರ್ಷಗಳ ಬಳಿಕ ಮೊದಲ ಸಾವು
ಇದುವರೆಗೆ ಎರಡು ಪಾಸಿಟಿವ್
2023-24ನೇ ಸಾಲಿನಲ್ಲಿ ತೀರ್ಥಹಳ್ಳಿಯಲ್ಲಿ ಒಂದು ಹಾಗೂ ಹೊಸನಗರದಲ್ಲಿ ಒಂದು ಒಟ್ಟು ಎರಡು ಪ್ರಕರಣಗಳು ಪತ್ತೆಯಾಗಿವೆ. ಕಳೆದ ವರ್ಷ ಮಂಗನ ಕಾಯಿಲೆಗೆ ತುತ್ತಾಗಿದ್ದವರು ಸ್ವಸ್ಥರಾಗಿದ್ದರು.
26 ಮಂಗಗಳ ಸಾವು
ಜಿಲ್ಲೆಯಲ್ಲಿ 26-27 ಮಂಗಗಳ ಸಾವಾಗಿತ್ತು. ಅದರಲ್ಲಿ ತೀರ್ಥಹಳ್ಳಿಯಲ್ಲಿ ಒಂದು ಮಂಗದಲ್ಲಿ ಕೆಎಫ್.ಡಿ ವೈರಾಣುಗಳು ಪತ್ತೆಯಾಗಿದ್ದವು.