Balligavi | ಅಲ್ಲಮಪ್ರಭು ಜನ್ಮಭೂಮಿ ಭೂಮಾಲೀಕತ್ವದ ಬಗ್ಗೆ ನಡೆಯಲಿದೆ ಮಾಹಿತಿ ಕಲೆಹಾಕುವ ಕೆಲಸ, ಮಧು ಬಂಗಾರಪ್ಪ ಹೇಳಿದ ಪ್ರಮುಖ 5 ಅಂಶಗಳು

Madhu Bangarappa

 

 

ಸುದ್ದಿ ಕಣಜ.ಕಾಂ ಶಿರಾಳಕೊಪ್ಪ
SHIRALAKOPPA: ಶಿವಶರಣ ಅಲ್ಲಮಪ್ರಭು (allamaprabhu) ಅವರ ಜನ್ಮಸ್ಥಳದ ಭೂಮಿಯ ಮಾಲೀಕತ್ವದ ಬಗ್ಗೆ ದಾಖಲಾತಿಗಳನ್ನು ಸಂಗ್ರಹಿಸಲು ಸೂಚಿಸಲಾಗಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಹೇಳಿದರು.
ಶಿರಾಳಕೊಪ್ಪ ಸಮೀಪದ ಬಳ್ಳಿಗಾವಿ (ಅಲ್ಲಮಪ್ರಭುಗಳ ಜನ್ಮಭೂಮಿ) ಹಾಗೂ ಅನಿಮಿಷಾರಣ್ಯರ ಮಾಳಗೊಂಡನಕೊಪ್ಪದ ತಪೋಭೂಮಿಗೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು‌.

Allamaprabhu
ಅಲ್ಲಮಪ್ರಭು

READ | ಫ್ರೀಡಂ ಪಾರ್ಕ್‍ಗೆ ಹೊಸ ಹೆಸರು ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್

ಮಧು ಬಂಗಾರಪ್ಪ ಹೇಳಿದ ಪ್ರಮುಖ ಅಂಶಗಳು

  1. ಅಲ್ಲಮಪ್ರಭು ಜನ್ಮಭೂಮಿಯ ದಾಖಲೆಗಳನ್ನು ಪರಿಶೀಲಿಸಲು ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯಿಂದ ಮಾಹಿತಿ ಪಡೆದುಕೊಳ್ಳಲಾಗುವುದು.
  2. ಬಳ್ಳಿಗಾವಿ‌ ಪ್ರದೇಶದ ಅಭಿವೃದ್ಧಿ ನನ್ನ ಕರ್ತವ್ಯವಾಗಿದೆ. ಇದಕ್ಕೆ ಎಲ್ಲರ ಸಹಕಾರವನ್ನು ನಿರೀಕ್ಷಿಸುತ್ತೇನೆ. ಅನುಭವ ಮಂಟಪದ ಮೊದಲ ಪೀಠಾಧ್ಯಕ್ಷ ಅಲ್ಲಮಪ್ರಭುಗಳ ಜನ್ಮಭೂಮಿಯ ಸರ್ವಾಂಗೀಣ ವಿಕಾಸಕ್ಕೆ ಸರ್ಕಾರ ಬದ್ಧವಾಗಿದೆ.
  3. ಈ ಕ್ಷೇತ್ರದ ವಿಕಾಸಕ್ಕೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಸರ್ಕಾರದ ಆದೇಶವನ್ನು ನಿರೀಕ್ಷಿಸಲಾಗುತ್ತಿದೆ. ಶರಣರ ಪುಣ್ಯಭೂಮಿಯನ್ನು ಅಭಿವೃದ್ಧಿಪಡಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಲಾಗುವುದು.
  4. ಹನ್ನೆರಡನೇ ಶತಮಾನದ ಪ್ರಸಿದ್ಧ ಶರಣ ಅಲ್ಲಮಪ್ರಭು ಅದ್ವಿತೀಯ ಸಾಧಕರು. ಅವರ ಜೀವನ ಸಂದೇಶಗಳು ಇಂದಿನ ಜನರಿಗೆ ತಲುಪಿಸುವ ಸದುದ್ದೇಶದಿಂದ ಹಾಗೂ ನಮ್ಮ ಕೋರಿಕೆಯಂತೆ ಶಿವಮೊಗ್ಗ ನಗರದ ಹೃದಯ ಭಾಗದಲ್ಲಿರುವ ಫ್ರೀಡಂ ಪಾರ್ಕ್ ಗೆ ಅವರ ಹೆಸರನ್ನು ನಾಮಕರಣಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದಾರೆ.
  5. ಶಿವಮೊಗ್ಗ ಜಿಲ್ಲೆ 12ನೇ ಶತಮಾನದಲ್ಲಿ ಶರಣರ ನೆಲೆವೀಡಾಗಿಯೇ ಪ್ರಸಿದ್ದವಾಗಿತ್ತು. ಅಂತಹ ಮಹಾತ್ಮರ ಪುಣ್ಯಭೂಮಿಯನ್ನು ಗುರುತಿಸಿ ಅಭಿವೃದ್ಧಿಪಡಿಸದಿರುವುದು ನೋವಿನ ಸಂಗತಿ. ಪ್ರಸ್ತುತ ಆಡಳಿತಾರೂಢ ಸರ್ಕಾರ ಈ ಕ್ಷೇತ್ರದ ವಿಕಾಸಕ್ಕೆ ಅಗತ್ಯ ಕ್ರಮ ಕೈಗೊಳ್ಳಲಿದೆ.

ಮುಖಂಡರಾದ ನಾಗರಾಜಗೌಡ, ಗೋಣಿ ಮಾಲತೇಶ್ ಶ್ರೀಕಾಂತ್, ಕಲಗೋಡು ರತ್ನಾಕರ್, ಹುಲ್ಮಾರ್ ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!